ಇಂದು ಸದ್ಭಾವನಾ ವೇದಿಕೆಯಿಂದ ಇಫ್ತಾರ್ ಕೂಟ

Iftar gathering from Sadbhavana Vedika today

ಇಂದು ಸದ್ಭಾವನಾ ವೇದಿಕೆಯಿಂದ ಇಫ್ತಾರ್ ಕೂಟ  

ಕೊಪ್ಪಳ 20: ಪವಿತ್ರ ರಮಜಾನ್ ಮಾಸಾಚರಣೆ ಪ್ರಯುಕ್ತ ಉಪವಾಸ ರೋಜದಾರ್ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟವನ್ನು ಕೊಪ್ಪಳ ಸದ್ಭಾವನಾ ವೇದಿಕೆ ಹಾಗೂ ಲಿಂಗಾಯತ ಧರ್ಮ ಮಹಾಸಭಾ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿ. 21ರ ಶುಕ್ರವಾರ ಸಂಜೆ 5:30 ಗಂಟೆಗೆ ನಗರದ ಮುಖ್ಯ ಅಂಚೆ ಇಲಾಖೆ ಕಛೇರಿ ಹತ್ತಿರ ಇರುವ ತಾರಾ ಕ್ಲಿನಿಕ್ ಆಸ್ಪತ್ರೆಯ ಆವರಣದಲ್ಲಿ ಜರುಗಲಿದೆ ಎಂದು ಕೊಪ್ಪಳ ಸದ್ಭಾವನ ವೇದಿಕೆಯ ಅಧ್ಯಕ್ಷ ಡಾ ಸುಶೀಲ್ ಕುಮಾರ್ ಕಲಾಲ್ ತಿಳಿಸಿದರು.ಈ ಕುರಿತು ಹೇಳಿಕೆ ನೀಡಿದ ಆವರು ಸದರಿ ಇಫ್ತಾರ್ ಸೌಹಾರ್ದಕೋಟಕ್ಕೆ ಸರ್ವರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯ ಮೂಲಕ ಸದ್ಭಾವನಾ ವೇದಿಕೆಯ ಅಧ್ಯಕ್ಷ ಡಾ. ಸುಶೀಲ್ ಕುಮಾರ್ ಕಲಾಲ್ ಮತ್ತು ಲಿಂಗಾಯತ ಧರ್ಮ ಮಹಾಸಬಾದ ಈಶಣ್ಣ ಕೊರ್ಲ್ಲಹಳ್ಳಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.