ನವದೆಹಲಿ, ಫೆ ೮ : ಧೂಮಪಾನದಿಂದ ಉಂಟಾಗುವ ಹಾನಿಯನ್ನು ಸರಿಪಡಿಸುವ ಸಾಮರ್ಥ್ಯ ಶ್ವಾಸಕೋಶಗಳಿಗಿದೆ ಎಂದು ಸಂಶೋಧಕರು ಹೇಳಿದ್ದಾರೆ ಆದರೆ, ಧೂಮಪಾನವನ್ನು ತ್ಯಜಿಸಿದಾಗ ಮಾತ್ರ ಅದು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಶ್ವಾಸಕೋಶ ಕ್ಯಾನ್ಸರ್ ಗೆ ಕಾರಣವಾಗುವ ಕೋಶಗಳ ಬದಲಾವಣೆಗಳು ಶಾಶ್ವತ, ಧೂಮಪಾನ ತ್ಯಜಿಸಿದ ನಂತರ ಅವು ಅದೇ ರೀತಿಯಲ್ಲಿರುತ್ತವೆ ಎಂದು ಸಂಶೋಧಕರು ಈ ವರೆಗೆ ಭಾವಿಸಿದ್ದರು. ಆದರೆ “ನೇಚರ್” ಪ್ರಕಟಸಿರುವ ಹೊಸ ಸಂಶೋಧನ ಅಂಶಗಳು ಭಿನ್ನವಾಗಿವೆ.
ಹಾನಿಯಿಂದ ತಪ್ಪಿಸಿಕೊಂಡ ಕೆಲವು ಕೋಶಗಳು ... ಶ್ವಾಸಕೋಶವನ್ನು ಮತ್ತೆ ಮೊದಲಿನಂತೆ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ಅಧ್ಯಯನ ಬಹಿರಂಗಪಡಿಸಿದೆ. ನಲವತ್ತು ವರ್ಷಗಳಿಂದ ದಿನಕ್ಕೆ ಹತ್ತು ಸಿಗರೇಟ್ ಸೇದುವ ವ್ಯಕ್ತಿಗಳಲ್ಲೂ ಈ ಲಕ್ಷಣಗಳು ಸಂಶೋಧನೆಯಲ್ಲಿ ಕಂಡುಬಂದಿವೆ ಎಂದು ಹೇಳಿದೆ.