ಕೊಪ್ಪಳ 02: ಬೆಳಗಾವಿ ಸುವರ್ಣಸೌಧಕ್ಕೆ ಪಂಚಮಸಾಲಿ ಸಮಾಜದಿಂದ 2ಂ ಮೀಸಲಾತಿಗಾಗಿ ಮುತ್ತಿಗೆ ಹಾಕಲು ನಿರ್ಧರಿಸಿದ್ದು ಸರಕಾರ ಏನಾದರೂ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಪಂಚ ಸೇನಾ ರಾಜ್ಯಾಧ್ಯಕ್ಷ ರುದ್ರಗೌಡ ಸೆಾಲಬಗೌಡ್ರ ಹೇಳಿದರು.
ಅವರು ರವಿವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ಯೇಶಿಸಿ ಮಾತನಾಡಿ ಅಧಿವೇಶನದ ಪ್ರಾರಂಭದ ದಿನದಂದು ಐದು ಸಾವಿರಕ್ಕೂ ಹೆಚ್ಚು ಟ್ಯಾಕ್ಟರ್ ಹಾಗೂ ರೈತರಿಂದ ಮುತ್ತಿಗೆ ಹಾಕಲಾಗುವುದು ,ಕಳೆದ ನಾಲ್ಕು ವರ್ಷಗಳಿಂದ ಪಂಚಮಸಾಲಿ 2ಂ ಹೋರಾಟ ನಿರಂತರವಾಗಿ ವಿಭಿನ್ನ ರೀತಿಗಳಲ್ಲಿ ನಡೆಯುತ್ತಿದ್ದರೂ ಸರ್ಕಾರ ನೋಡಿದರೂ ಕುರುಡರಂತೆ ಕೇಳಿದರೂ ಕಿವುಡರಂತೆ ವರ್ತಿಸುತ್ತಿದೆ, ಶ್ರೀಗಳು ಸಮುದಾಯವನ್ನು ಸಂಘಟಿಸಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಹೋರಾಟ ಮಾಡುತ್ತಿದ್ದಾರೆ.
ಈ ಹೋರಾಟ ಅಂತಿಮ ಹೋರಾಟ ಹಾಗೂ ಮಾಡು ಇಲ್ಲವೇ ಮಡಿ ಹೋರಾಟ ಆದರೆ ಪಂಚಮಸಾಲಿ ಸಮಾಜದ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಮುಂದಾದರೆ ಇದು ಸರ್ಕಾರಕ್ಕೂ ಮುಜುಗರ ಉಂಟುಮಾಡುತ್ತದೆ ಹಾಗೂ ನಮ್ಮ ಸಮುದಾಯವು ಸರ್ಕಾರದ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪಂಚ ಸೇನಾ ಮುಖಂಡರಾದ ಮಂಜುನಾಥ್ ಈಶ್ವರ್ ಗೌಡ್ರು ,ಡಾ. ಮಹಾಂತೇಶ್ , ಶಿವಶರಣಪ್ಪ ಶಿವಪೂಜೆ, ಶರಣಪ್ಪ ಮೇಟಿ ಸೇರಿದಂತೆ ಮಚ್ಚೆತರೂ ಉಪಸ್ಥಿತರಿದ್ದರು.