ಬೆಂಗಳೂರು, ಮೇ18,ಸಿನಿಮಾಗಾಗಿಯೇ ಬಾಳಿ ಬದುಕಿದ ಹಿರಿಯ , ಕಿರಿಯರು ಪರಸ್ಪರ ಒಗ್ಗಟ್ಟಾದರೇ ಮಾತ್ರ ಚಿತ್ರೋದ್ಯಮ ಉಳಿಯಲು ಸಾಧ್ಯ ಎಂದು ನವರಸ ನಾಯಕ ಜಗ್ಗೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪರಭಾಷೆ ನಿರ್ಮಾಪಕರು ನಿರ್ದೇಶಕರಿಗೆ ಬಿಲ್ಡ್ ಅಪ್ ಕೊಟ್ಟು ಕರ್ನಾಟಕ ಎಂದರೆ ಇಷ್ಟೇ ಜನ ಎಂದು ಮುದ್ರೆ ಹಾಕಿ ಡಬ್ಬಿಂಗ್ ಸಿನಿಮಾ, ಡಬ್ಬಿಂಗ್ ರೈಟ್ಸ್, ಪಡೆದು ಕೆಲವರು ಬಲಿಷ್ಟರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಂತವರ ಕಪಿಮುಷ್ಟಿಯಿಂದ ಉದ್ಯಮ ಹೊರಬಂದರೆ! ಹೊಸ ನಿರ್ಮಾಪಕರು ನಿರ್ದೇಶಕರು, ನಟ, ನಟಿಯರು ಬೆಳೆದು ಕನ್ನಡ ಚಿತ್ರರಂಗದ ಮುಂದಿನ ಆಸ್ತಿಯಾಗಲಿದ್ದಾರೆ ಎಂದರು. ಕಲಾಭಿಮಾನಿಗಳ ಚಪ್ಪಾಳೆ ನಟ-ನಟಿ ಯನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಹೀಗಾಗಿ ಕಲಾವಿದರನ್ನು ಬೆಳೆಸಿದ ನಿರ್ಮಾಪಕರು ಟಿವಿ ಮುಂದೆ,ಒಂಟಿ ಭೀಕ್ಷುಕನನ್ನಾಗಿ ಮಾಡಬೇಡಿ ಎಂದರು. ಈಗ ಹಿರಿಯರೆಲ್ಲರೂ ಒಂದಾಗದಿದ್ದರೇ, ಪರ ಭಾಷೆಯ ಚಿತ್ರಗಳು ರಾಜನಂತೆ ರಾಜ್ಯವನ್ನು ಆಕ್ರಮಿಸಿ, ನಮ್ಮ ಭಾಷೆ ಅನಾದರಣೆಗೆ ಒಳಗಾಗುವು ಖಚಿತ ನಮ್ಮ ಚಿತ್ರರಂಗಕ್ಕೆ ನಮ್ಮವರೇ ಶತ್ರುಗಳಾಗುವುಉದ ಬೇಡ ಎಂದು ಜಗ್ಗೇಶ್ ಹೇಳಿದ್ದಾರೆ ಸಿನಿಮಾಗಾಗಿಯೇ ಬಾಳಿ ಬದುಕಿದ ಹಿರಿಯ, ಕಿರಿಯರು ಒಂದು ವೇದಿಕೆ ರಚಿಸಿ ನಿಸ್ವಾರ್ಥ ಯತ್ನ ಮಾಡಿದರೆ ಮಾತ್ರ ಉದ್ಯಮ ಶಾಶ್ವತವಾಗಿ ಉಳಿಯಲಿದೆ ಎಂದು ಅವರು ಕಿವಿಮಾತು ಹೇಳಿದ್ದಾರೆ.