ಗುರು ಅವಕೃಪೆಗೆ ಒಳಗಾದರೆ ಜೀವನ ನಶ್ವರ: ಚನ್ನವೀರಶ್ರೀ

ಲೋಕದರ್ಶನವರದಿ

ರಾಣೇಬೆನ್ನೂರು04:  ಜೀವನದಲ್ಲಿ  ಗುರುವಿಲ್ಲದಿದ್ದರೆ ಏನೂ ಆಗದು, ಗುರು ಸಾಮಾನ್ಯನಲ್ಲ. ಶಿಷ್ಯರ ಮತ್ತು ಭಕ್ತರ ಉದ್ಧರಿಸಲು ಬರುವಾತನೇ ಗುರು. ಗುರುವಿನ ಕರುಣೆಗೆ ಪಾತ್ರರಾಗಬೇಕೆ ಹೊರತು  ಅವಕೃಪೆಗೆ ಒಳಗಾದರೆ ಜೀವನ ನಶ್ವರ. ಶಿಷ್ಯರನ್ನು ಸಂರಕ್ಷಿಸುವ, ಮುನ್ನಡೆಸುವ ದಾರಿದೀಪಗೈಯ್ಯುವ ಗುರು ಶಿಷ್ಯರಿಗೆ ಅವಶ್ಯವಾಗಿ ಬೇಕಾಗಿದೆ, ಅಂತಹ ಗುರುವನ್ನು ಸ್ಮರಿಸುವುದು ಮಹಾ ಪುಣ್ಯ ಎಂದು ಲಿಂಗನಾಯಕನಹಳ್ಳಿ ಚನ್ನವೀರ ಶ್ರೀಗಳು ಹೇಳಿದರು.

    ಅವರು ಇಲ್ಲಿನ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಹೊನ್ನಾಳಿ ಹಿರೇಕಲ್ಮಠದ ಲಿಂ. ಒಡೆಯರ ಚಂದ್ರಶೇಖರ ಶಿವಾಚಾರ್ಯ ಶ್ರೀಗಳವರ 4ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ಭಾಗವಹಿಸಿ ಮಾತನಾಡಿದರು. 

    ಭಕ್ತರ, ಶಿಷ್ಯನ ಮನದ ಮಲಿನವನ್ನು ತೊಳೆಯಲು ಗುರುವಿನ ಸಾನಿಧ್ಯಬೇಕು. ಇಡೀ ಜೀವರಾಶಿಗಳಲ್ಲಿ ಗುರುವೇ ದೊಡ್ಡವನು. ಗುರುವಿಗಿಂತ ದೊಡ್ಡವರು ಈ ಭೂಮಿಯ ಮೇಲೆ ಯಾರೂ ಇಲ್ಲ. 9 ಗ್ರಹಗಳಲ್ಲಿ ಗುರುವೇ ದೊಡ್ಡದಾಗಿದೆ.

   ಹಾಗೆಯೇ ಶಿಷ್ಯನಾದವನಿಗೆ ಗುರುವೇ ಶ್ರೇಷ್ಠ. ಗುರುವಿನ ಸಾಮಿಪ್ಯ ದೊರೆತರೆ ಶಿಷ್ಯನ ಪಾಪವೆಲ್ಲಾ ತೊಳೆದು ನಿಜವಾದ ಮಾನವನಾಗುತ್ತಾನೆ ಎಂದರು. 

      ಹೊನ್ನಾಳಿ ಹಿರೇಕಲ್ಮಠದ ಡಾ. ಚನ್ನಮಲ್ಲಿಕಾಜರ್ುನ ಶಿವಾಚಾರ್ಯ ಶ್ರೀ  ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಶ್ರೀ  ಆಶೀರ್ವಚನ ನೀಡಿದರು. ಎಸ್.ಎಸ್. ರಾಮಲಿಂಗಣ್ಣನವರ, ಬಸವರಾಜ ಪಟ್ಟಣಶೆಟ್ಟಿ, ಚನವೀರಗೌಡ ಪಾಟೀಲ, ವೀರಣ್ಣ ಅಂಗಡಿ, ಅ.ಸಿ.ಹಿರೇಮಠ, ಗಿರಿಜಾದೇವಿ ದುರ್ಗದಮಠ, ಉಮೇಶ ಗುಂಡಗಟ್ಟಿ, ಕಸ್ತೂರಿ ಪಾಟೀಲ, ವಿ.ಎಂ. ಕರ್ಜಗಿ, ಮೃತ್ಯುಂಜಯ ಪಾಟೀಲ, ಸುನಂದಮ್ಮ ತಿಳವಳ್ಳಿ ಸೇರಿದಂತೆ  ಮತ್ತೀತರ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಲಿಂ. ಚಂದ್ರಶೇಖರ ಶಿವಾಚಾರ್ಯರರು ರಚಿಸಿದ ರೇಣುಕ ನಾಮಾಂಕಿತ ವಚನಗಳ ಲಿಖಿತ ಸ್ಪಧರ್ೆಯಲ್ಲಿ ವಿಜೇತರಾದ ನಂದೀಶ ಹಿರೇಮಠ, ಆಶೀಸ್ ಲಕ್ಕಣ್ಣನವರ, ವಿರಯ್ಯ ಹಿರೇಮಠ, ಅಜ್ಜಯ್ಯ ಹಿರೇಮಠ, ಮುತ್ತಯ್ಯ ಹಿರೇಮಠ, ಶಿವಲಿಂಗಯ್ಯ ಹಿರೇಮಠ, ಮುಕ್ತವಿಭಾಗದ ನಿಶಿಮಯ್ಯ ಚಿಕ್ಕಮಠ, ಶ್ರೀನಿವಾಸ ಎಂ.ಎಂ ಮತ್ತು ನೇತ್ರಾವತಿ ಎಸ್.ಎಂ ಇವರುಗಳಿಗೆ ಬಹುಮಾನ ವಿತರಿಸಲಾಯಿತು. 

ನಗರಸಭೆ ಕಾರ್ಯವೈಫಲ್ಯತೆಗೆ ಸಾರ್ವನಿಕರು ಹಿಡಿಶಾಪ