ನೈತಿಕತೆ ಎಂಬುದು ಕುಗ್ಗಿದರೆ ಮಾನವಿಯತೆ ಎನ್ನುವುದು ಮಾರಾಟದ ವಸ್ತುವಾಗುತ್ತದೆ...!


ಬರವಣಿಗೆ ಎನ್ನುವುದೇ ಹಾಗೆ, ಒಂದು ಬಾರಿ ಯಾರನ್ನಾದರು ಬಿಗಿದ್ದಪ್ಪಿಕೊಂಡಿತೆಂದರೆ ಮುಗಿದೇ ಹೋುತು. ಆ ಅಪ್ಪುಗೆುಂದ ಬಿಡಿಸಿಕೊಂಡು ಹೊರ ಬರುತ್ತೇನೆ ಎಂದರೆ ಯಾವತ್ತಿಗೂ ಕೂಡ ಸಾಧ್ಯವಾಗುವುದಿಲ್ಲ. ಕಾರಣ ಬರವಣಿಗೆಯ ಒಳ ಹೋಗುವುದಕ್ಕೆ ಸಾಧ್ಯ"ದೆಯೇ ಹೊರತು ಅದರಿಂದ ಹೊರ ಬರುವುದಕ್ಕೆ ಅವಕಾಶವಿಲ್ಲ. ಈ ಕಾರಣಕ್ಕಾಗಿಯೇ ಘಟಾನುಘಟಿ ಲೇಖಕರುಗಳು ತಮ್ಮ ಬದುಕಿನ ಅಂತಿಮ ಕ್ಷಣದವರೆಗೂ ಗೀಚಿದ್ದು, ಪಿಕಾಸೋನಂತ ಚಿತ್ರಕಾರ ಸಾ"ನ ಕಡೆಗಳಿಗೆಯಲ್ಲಿ ನನಗೆ ಈವಾಗ ಚಿತ್ರಕಲೆ ಅರ್ಥವಾುತು ಎಂದು ಹೇಳಿದ್ದು. ಮೊದ ಮೊದಲು ನನಗೆ ಈ ಮಾತು ಸಮಂಜನಸವೆನಿಸಿದ್ದಿಲ್ಲ. ಆದರೆ ಈಗ ಹಾಗಲ್ಲ. ಆ ಮಾತಿನಲ್ಲಿ ಪೂರ್ಣ ನಂಬಿಕೆ ಬಂದಿದೆ. ಇದಕ್ಕೆ ಕಾರಣವೆಂದರೆ ಪ್ರತಿ ಭಾನುವಾರ ಏನಾದರು ಹೊಸತನ್ನು ತಂದು ಓದುಗರ ಕೈಗಿಡಬೇಕು ಎನ್ನುತ್ತ ನಾನು ಹುಡುಕುವ "ಷಯಗಳಿಗೆ ಲೆಕ್ಕವೇ ಇಲ್ಲ. ಒಂದು ಬಾರಿ ಇತಿಹಾಸವನ್ನು ತಡಕಾಡಿದರೆ ಮತ್ತೊಂದುಬಾರಿ ವಾಸ್ತವದಲ್ಲಿ ಅಲೆದಾಡುತ್ತೇನೆ. ಒಂದು ಬಾರಿ ಸಾ"ತ್ಯವನ್ನೆತ್ತಿಕೊಂಡು ಬಂದರೆ ಮತ್ತೊಂದು ಬಾರಿ ರಾಜಕೀಯವನ್ನು ಜಾಲಾಡುತ್ತೇನೆ. ಒಳಿತು ಕೆಡಕುಗಳ ಮಧ್ಯದಲ್ಲಿ ವಾಸ್ತವ ಸತ್ಯವನ್ನು ಹೆಕ್ಕಿ ತರುವುದಕ್ಕಾಗಿ ಹೆಜ್ಜೆ ಹೆಜ್ಜೆಗೂ ಯತ್ನಿಸುತ್ತೇನೆ. ಕೊನೆಗೂ ವಾರಾಂತ್ಯಕ್ಕೆ ಒಂದು ವಿಶೇಷ ವಿಚಾರವನ್ನೆತ್ತಿಕೊಂಡು ತಮ್ಮೆದುರು ಹಾಜರಾಗುತ್ತೇನೆ. ಆದರೂ ಬರವಣಿಗೆಯ ಸೆಳೆತ ಅದ್ಟೆದೆ ಎಂದರೆ ಪ್ರತಿವಾರವೂ "ಭಿನ್ನವಾಗಿ ಏನಾದರೂ ಕೊಡಲೇ ಬೇಕು. ಕಳೆದ ಬಾರಿಗಿಂತ ಈ ಬಾರಿಯ ಅಂಕಣ "ಶೀಷ್ಟವಾಗಿ ಮೂಡಿ ಬರಬೇಕು. ಏನಾದರೂ ಹೊಸತನ್ನು ಹೇಳಲೇ ಬೇಕು. ಒಂದುವೇಳೆ ನಾನು ಹೇಳದೇ ಹೋದರೆ ಓದುಗ ಪ್ರಭುಗಳು ಕರೆ ಮಾಡಿ ಕೇಳುತ್ತಾರೆ ಯಾಕ್ ಸರ್ ಈ ವಾರ ಏನು ಬರೆದಿಲ್ಲ?. ಈ ಪ್ರಶ್ನೆಗೆ ಉತ್ತರ ನೀಡುವುದಕ್ಕಿಂತ ಅವರಾಸೆಯನ್ನು ಪೂರೈಸುವುದು ಒಬ್ಬ ಅಂಕಣಕಾರನಾಗಿ ನನ್ನ ಕರ್ತವ್ಯವೂ ಹೌದಲ್ಲವೇ? ಆ ಕಾರಣಕ್ಕಾಗಿಯೇ ಹೊಸ "ಚಾರವನ್ನು ತಮ್ಮೆದು ಪ್ರಸ್ತಾಪ ಮಾಡಬೇಕೆಂದುಕೊಂಡು ಬರವಣಿಗೆಗೆ ಇಳಿದಾಗ ಈ ವಾರ ಒಟ್ಟಿಗೆ ಎರಡು "ಚಾರಗಳನ್ನು ತಮ್ಮೆದುರು ಹಂಚಿಕೊಳ್ಳುತ್ತಿದ್ದೇನೆ. 

ಭಾರತ ದೇಶದ ಕುರಿತು ಬಹಳಷ್ಟು ಬಾರಿ ಬರೆದಿದ್ದೇನೆ. ಪ್ರಾಚೀನ ನಾಗರೀಕತೆುಂದ "ಡಿದು ಆಧುನಿಕ ಭಾರತದವರೆಗೂ ಅನೇಕ "ಚಾರಗಳನ್ನು ಪ್ರಸ್ತಾಪ ಮಾಡಿದ್ದೇನೆ. 'ಏಕ್ ಭಾರತ ಶ್ರೇಷ್ಠ ಭಾರತ' ಎನ್ನುವುದನ್ನು ಸಾಬೀತು ಮಾಡುವುದಕ್ಕೆಂದು ಹೆಣಗಾಡಿದ್ದೇನೆ. ಈ ದೇಶದ ಸಾಧನೆಯ ಕುರಿತು ಹೆಮ್ಮೆುಂದ ಹೇಳಿಕೊಂಡು ಬೀಗಿದ್ದೇನೆ. ನಮ್ಮ ದೇಶದ ಭವ್ಯ ಪರಂಪರೆಯನ್ನು ಸಾರುತ್ತ ಅಭಿಮಾನ ಪಟ್ಟುಕೊಂಡಿದ್ದೇನೆ. ಭಾರತದ ಚರಿತ್ರೆಯ ಪುಟಗಳನ್ನು ತಿರುವುತ್ತ ಓದುಗನೆದೆಯಲ್ಲಿ ಒಂದು ಕ್ಷಣ ಭಾರತ ಸಂಪೂರ್ಣ ಚಿತ್ರಣ ಬಿಡಿಸಲು ಯತ್ನಿಸಿದ್ದೇನೆ. ಆದರೆ ಈ ಬಾರಿ ಅದೇಕೋ ಗೊತ್ತಿಲ್ಲ ಈ "ಚಾರವನ್ನು ಬರೆಯುವಾಗ ಮುಜುಗರ ಪಟ್ಟುಕೊಳ್ಳುತ್ತಿದ್ದೇನೆ. ನಮ್ಮ ದೇಶದ ಬಗ್ಗೆ ಹೇಳಿಕೊಳ್ಳುವಾಗ ಹಸಿದು ಅನ್ನಕ್ಕಾಗಿ ಕೈಚಾಚಿದರೆ ಮೃಷ್ಠಾನ್ನವನ್ನು ನೀಡಿದ ಭಾರತ, ಶತ್ರುಗಳಿಂದ ತಪ್ಪಿಸಿಕೊಂಡು ಬಂದವರಿಗೆ ಆಶ್ರಯ ನೀಡಿದ ಭಾರತ, ನೀರು ಕೇಳಿದವರಿಗೆ ಪಾನಕ ಕೊಟ್ಟ ಭಾರತ, ಸೋತು ಬಸವಳಿದವರ ಸಹಾಯಕ್ಕೆ ನಿಂತ ಭಾರತ. "ಗೆ ಭಾರತ ದೇಶ ನಡೆದು ಬಂದ ದಾರಿಯನ್ನು ಅಭಿಮಾನದಿಂದ ತೋರಿಸುತ್ತೇವೆ. ಆದರೆ ನಾನೀಗ ಬರೆಯುತ್ತಿರುವ "ಚಾರವನ್ನು ಓದಿದ ಮೇಲೆ ಬರೆಯುವಾಗ ನನಗಾದ ಬೇಸರ ಓದುವಾಗ ನಿಮಗೂ ಆಗುತ್ತದೆ. ಆದರೆ ಏನು ಮಾಡಲಿ ಈ "ಚಾರವನ್ನು ನಾನು ನಿಮ್ಮೆದು ಹೇಳಿಕೊಳ್ಳಲೇಬೇಕು. ಅದಕ್ಕೆ ಇಲ್ಲಿ ಇದರ ಪ್ರಸ್ತಾಪ ಮಾಡುತ್ತಿದ್ದೇನೆ. ಮೊಬೈಲ್ ಪರದೆಯ ಮೇಲೆ ಕಾಣಿಸಿಕೊಂಡ ಆ ಒಂದು ಸುದ್ದಿ; ನನ್ನನ್ನು ಈ ವಿಚಾರವಾಗಿ ಬರೆಯುವುದಕ್ಕೆ ಒತ್ತಾುಸಿತು. ಇಷ್ಟೆಲ್ಲ ದೇಶದ ಬಗ್ಗೆ ಬರೆಯುವ ನನಗೆ ಏನು ಬರೆಯಬೇಕು ಎನ್ನುವುದು ತಿಳಿಯದೇ ಕಸಿವಿಸಿಯಾುತು. ಇದನ್ನು ಪ್ರೋತ್ಸಾಹ ಎಂದುಕೊಳ್ಳಬೇಕೋ, ಅಥವಾ ಸತ್ತು ಹೋಗಿರುವ ಮಾನವಿಯತೆಯನ್ನು ಮತ್ತೆ ಜೀವಂತ ಮಾಡುವ "ಫಲ ಯತ್ನ ಎನ್ನಬೇಕೋ ಇಲ್ಲ ಮಾನ"ತೆಗೂ ಒಂದು ಬೆಲೆ ನಿಗದಿ ಮಾಡಿ ಮಾರಾಟಕ್ಕಿಡಲಾುತು ಎಂದೆನ್ನಬೇಕೊ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ನಮ್ಮ ಭವ್ಯ ಭಾರತದ ದಿವ್ಯ ಪ್ರಜೆಗಳ ಮಾನಸಿಕ ಮಟ್ಟವನ್ನು ಅರಿತುಕೊಂಡ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಒಂದು ಯೋಜನೆಯನ್ನು ಹಾಕಿಕೊಳ್ಳುತ್ತಿದೆ. ಆ ಯೋಜನೆಯ ಕುರಿತು ಹೇಳುವುದೇ ನನಗೆ ಬೇಸರ ಮೂಡಿಸಿದೆ. ಆದರೂ ಅನಿವಾರ್ಯ ಹೇಳುತ್ತೇನೆ. 

ಅಷ್ಟಕ್ಕೂ ಸರ್ಕಾರ ತರುತ್ತಿರುವ ಯೋಜನೆ ಯಾವುದು ಎನ್ನುವ ಪ್ರಶ್ನೆಯೇ? ಇರಿ ಅದರ ಕುರಿತಾಗಿಯೇ ಹೇಳುತ್ತಿದ್ದೇನೆ. ಯಾರಾ​‍್ಯರೋ ಕ"ಗಳು, ದಾರ್ಶನಿಕರು, ದಾಸಶ್ರೇಷ್ಠರು ಮನಸ್ಸನ್ನು ಮರ್ಕಟಕ್ಕೋ, ಬೃಂದಾವನಕ್ಕೋ ಹೋಲಿಕೆ ಮಾಡಿ ಹಾಡಿದ್ದಾರೆ. ಆದರೆ ವಾಸ್ತವದಲ್ಲಿ ಮನಸ್ಸು ಅದನ್ನು "ುರಿ ನಿಂತಿದೆ. ಒಂದೇ ಮಾತಲ್ಲಿ ಹೇಳುವುದಾದರೆ ಮನಸ್ಸೆಂಬುದು ಸ್ಮಶಾನವಾಗಿದೆ. ಅಲ್ಲಿ ಮಾನ"ತೆಯನ್ನು ಮಣ್ಣು ಮಾಡಲಾಗಿದ್ದು ಸ್ವಾರ್ಥ ಎನ್ನುವ ಭಾವನೆ ಆ ಸುಡುಗಾಡನ್ನು ಕಾಯುವಲ್ಲಿ ನಿರತವಾಗಿದೆ. ಆ ಕಾರಣಕ್ಕಾಗಿಯೇ ಯಾರಿಗೆ ಏನಾದರೆ ನನಗೇನು ಎಂದುಕೊಂಡ ನಾವುಗಳು ನಮ್ಮ ಪಾಡಿಗೆ ನಾವು ಬದುಕುವುದನ್ನು ರೂಢೀಸಿಕೊಂಡಿದ್ದೇವೆ. ಕಣ್ಣೇದುರೇ ಯಾರೋ ಕಷ್ಟಪಡುತ್ತಿದ್ದಾರೆ ಎನ್ನುವುದು ಗೊತ್ತಿದ್ದು ಜಾಣಕುರುಡರಾಗುತ್ತಿದ್ದೇವೆ. ಇದು ನಿಜಕ್ಕೂ  ದುರಂತವೇ ಸರಿ. ಇಲ್ಲೊಂದು ಘಟನೆಯನ್ನು ನಿಮ್ಮೆದುರು ಹೇಳುತ್ತೇನೆ, ರಸ್ತೆಯಲ್ಲಿ ವಾಹನ ಚಲಾುಸಕೊಂಡು ಹೋಗುತ್ತಿದ್ದ ಒಬ್ಬ ವ್ಯಕ್ತಿ ಎದುರಿಗೆ ಬಂದ ವಾಹನಕ್ಕೆ ಡಿಕ್ಕಿ ಹೊಡೆದ ಗಾಯಕೊಂಡು ನೆತ್ತರ ಮಡು"ನಲ್ಲಿ ನಡುರಸ್ತೆಯಲ್ಲಿ ಬಿದ್ದು ಸಹಾಯಕ್ಕಾಗಿ ಅಂಗಲಾಚುತ್ತಿದ್ದ. ಸಾ"ರಾರು ಜನ ದಾರಿಹೋಕರು, ವಾಹನ ಸವಾರರು ಅಲ್ಲಿಯೇ ನಿಂತುಕೊಂಡು ಮೊಬೈಲ್‌ನಲ್ಲಿ ಆ ದೃಶ್ಯವನ್ನು ಸೆರೆ "ಡಿಯುವುದಕ್ಕೆ ಮುಂದಾದರೆ ಹೊರತು ಸಹಾಯ ಮಾಡುವುದಕ್ಕೆ ಯಾರು ಮುಂದೆ ಬರಲಿಲ್ಲ. ಗಂಟೆಗಳ ಕಾಲ ಕಿರುಚಿದ ಧ್ವನಿ ಮೆಲ್ಲ ಮೆಲ್ಲನೇ ಕ್ಷೀಣಿಸಿತು. ಸಹಾಯಕ್ಕೆ ಅಂಗಲಾಚುತ್ತಿದ್ದ ಕೈ ಸೋತು ಕೆಳಕ್ಕಿಳಿತು. ಪೊಲೀಸರು ಬಂದು ಆತನನ್ನು ಆಸ್ಪತ್ರೆ ಸೇರಿಸಿದಾಗ ವೈದ್ಯರು ಹೇಳಿದ ಮಾತೇನು ಗೊತ್ತೇ? ಸ್ವಲ್ಪ ಬೇಗ ಕರೆದುಕೊಂಡು ಬಂದಿದ್ದರೆ ಅವನನ್ನು ಬದುಕಿಸಬಹುದಿತ್ತು. ಮರುದಿನ ಪತ್ರಿಕೆಯಲ್ಲಿ ಆತನ ಸಾ"ನ "ಷಯ ಪ್ರಸ್ಥಾಪವಾಗುತ್ತಿದ್ದಂತೆ ಅಯ್ಯೋ ನಾನು ಅಲ್ಲೇ ಇದ್ದೆ. ಎನ್ನುವುದು ನಮ್ಮ ಮಾತು. ನಿಜಕ್ಕೂ ಆತನ ಸಾ"ಗೆ ಕಾರಣವೇನು? ರಸ್ತೆ ಅಪಘಾತಕ್ಕೆ ಕಾರಣವಾದ ಎದುರಿನ ವ್ಯಕ್ತಿಯೆ? ಆತ ಚಲಾವಣೆ ಮಾಡಿದ ವಾಹನವೆ? ಅಥವಾ ಆತನ ನಿರ್ಲಕ್ಷ್ಯವೆ? ಈ ಪ್ರಶ್ನೆಗಳಿಗೆ ಯಾವುದಾದರೂ ಒಂದು ಉತ್ತರವನ್ನು ನಾವು ಥಟ್ಟನೆ ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ ನಿಜಕ್ಕೂ ಅದು ಅಪಘಾತದಿಂದ ಆದ ಸಾವಲ್ಲ. ಬದಲಿಗೆ ನಾವುಗಳು ಮಾಡಿದ ಕೊಲೆ. ಮಾನ"ಯತೆ ಮರೆತು ನಾವು ಮಾಡಿದ ಸಾಮೂ"ಕ ಕಗ್ಗೊಲೆ. ಆದರೆ ಇದನ್ನು ನಾವು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಕಾರಣ ನಮಗೆ ನಮ್ಮ ಸ್ವಾರ್ಥವೇ ದೊಡ್ಡದು. ಅಯ್ಯೋ ಆತನನ್ನು ಆಸ್ಪತ್ರೆಗೆ ಸೇರಿಸಿದರೆ ಎಲ್ಲಿ ನಮ್ಮ ತಲೆ ಬರುತ್ತದೆಯೋ, ಅವನನ್ನು ಅಸ್ಪತ್ರೆಗೆ ಸೇರಿಸುವಷ್ಟರಲ್ಲಿ ಕಚೇರಿಯ ಸಮಯವಾಗುತ್ತದೆಯೋ, ಸುಮ್ಮನೇ ರಿಸ್ಕ್‌ ಯಾಕ್ ಬೇಕು? "ಗೆ ತಲೆಗೊಂದು ಮಾತನಾಡುವ ನಾವುಗಳೇ ಆತನ ಸ್ಥಾನದಲ್ಲಿದ್ದರೆ ಏನಾಗುತ್ತಿತ್ತು ಎನ್ನುವುದರ ಕುರಿತು ಕೊಂಚ ಆಲೋಚನೆ ಮಾಡಿ; ಆಗ ಎಲ್ಲವು ನಮ್ಮ ಕಣ್ಣಮುಂದೆಯೇ ಕಾಣುತ್ತದೆ. ಇದನ್ನೆ ಮನಗಂಡ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತರುವ ಮೂಲಕ ಸಾಯುವ ವ್ಯಕ್ತಿಯನ್ನು ಬದುಕಿಸುವ ಕಾರ್ಯಕ್ಕೆ ಮುಂದಾಗುತ್ತಲಿರುವುದು ಒಂದೆಡೆ ಸಮಾಧಾನ ಮತ್ತೊಂದೆಡೆ ಬೇಸರಕ್ಕೆ ಕಾರಣವಾಗುತ್ತಲಿದೆ. 

ಆಸೆ ಎನ್ನುವುದು ಮಾನವನ ಮೂಲ ಗುಣ, ಹಾಗೆಯೇ ದುರಾಸೆ ಎನ್ನುವುದು ಆಧುನಿಕ ಮಾನವನ ದೊಡ್ಡ ಗುಣ. ಇಲ್ಲಿ ಹೇಯ ಮನಸ್ಸಿನ ಜನಗಳು ಲಾಭಕ್ಕಾಗಿ ಬಡಿದಾಡುತ್ತಾರೆ. ಸ್ವಾರ್ಥ ಸಾಧನೆಗಾಗಿ ಹಾತೊರೆಯುತ್ತಾರೆ. ಇದನ್ನು ಅರಿತುಕೊಂಡಿರುವ ಕೇಂದ್ರ ಸರ್ಕಾರ ಒಂದು "ನೂತನ ಹೆಜ್ಜೆ ಇಡುವುದಕ್ಕೆ ಯತ್ನ ಮಾಡುತ್ತಲಿದೆ. ರೊಟ್ಟಿ ಆಸೆಗೆ ಹೇಗೆ ನಾು ಬಾಲ ಅಲ್ಲಾಡಿಸುತ್ತದೆಯೋ, ಮಕರಂದದ ಆಸೆಗಾಗಿ ಹೇಗೆ ದುಂಬಿ ಹೂ"ನ ಬಳಿ ಸುಳಿಯುತ್ತದೆಯೋ, ದುಡ್ಡಿನ ಆಸೆಗಾಗಿ ಹೇಗೆ ಮತಗಳನ್ನು ಮಾರಿಕೊಳ್ಳಲಾಗುತ್ತದೆಯೋ ಹಾಗೆ ದುಡ್ಡುಕೊಟ್ಟು ಮಾನ"ಯತೆಯನ್ನು ಕೊಂಡುಕೊಳ್ಳುವ ಯತ್ನ ಮಾಡಲಾಗುತ್ತಿದೆ. ಅಂದರೆ ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದವರಿಗೆ 5 ಸಾ"ರ ರೂಪಾುಗಳ ಬಹುಮಾನ ಹಾಗೂ ಪ್ರಸಂಶಾ ಪತ್ರವನ್ನು ನೀಡುವುದಕ್ಕೆ ಮುಂದಾಗುತ್ತಿದೆ. ಮಾನ"ಯತೆಗಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸದೇ ಹೊದರೂ ಕೂಡ ದುಡ್ಡಿನಾಸೆಗಾಗಿಯಾದರೂ ಆಸ್ಪತ್ರೆಗೆ ಸೇರಿಸಿ ಬದುಕಿಸಬಹುದು ಎನ್ನುವ ದೂರಾಲೋಚನೆುಂದ ಸರ್ಕಾರ ಈ ಹೆಜ್ಜೆ ಇಡುವುದಕ್ಕೆ ಮುಂದಾಗಿದೆ. ಇದು ದೂರಾಲೋಚನೆ ಎಂದು ಕಂಡು ಬಂದರೂ ಕೂಡ ನಮ್ಮ ಜನಗಳ ದುರಾಲೋಚನೆಗೆ ಸರ್ಕಾರ "ಡಿದ ಕನ್ನಡಿ ಎನ್ನುವುದಂತೂ ಇಲ್ಲಿ ಸ್ಪಷ್ಟವಾಗುತ್ತದೆ. ಒಬ್ಬರಿಗೊಬ್ಬರು ಸಹಾಯ ಮಾಡಬೇಕಾದ ಮೂಲಗುಣವನ್ನೇ ಮರೆತ ಜನಗಳಿಗೆ ಆಸೆ ತೋರಿಸಿ ಸಹಾಯ ಗುಣ ಮೂಡಿಸುವ ಕಾರ್ಯ ಮಾಡುತ್ತಿರುವುದನ್ನು ಕಂಡರೆ ಇಲ್ಲಿ ಮಾನ"ಯತೆಯೂ ಕೂಡ ಮಾರಾಟಕ್ಕಿಡಲಾಗುತ್ತಿದೆ ಎನ್ನುವುದು ನಮಗೆ ಅರ್ಥವಾಗುತ್ತದೆ. ಪರಂಪರೆಯುಳ್ಳ ಭಾರತ ಇಂದು ಈ ಮಟ್ಟಕ್ಕೆ ಬಂದು ತಲುಪಿರುವುದನ್ನು ಕಂಡಾಗ ಎಲ್ಲೋ ಮನಸ್ಸಿಗೆ ಬೇಸರ ಎನಿಸಿತು. ಮೊದಲೇ ಮಾನ"ಯತೆ ಸತ್ತು ಹೋಗಿದೆ. ಸತ್ತ ಮಾನ"ಯತೆಯನ್ನು ಮತ್ತೆ ಹುಟ್ಟಿಸುವುದಕ್ಕೆ ಸಾಧ್ಯವಾಗದೇ ಇದ್ದರು ಪರವಾಗಿಲ್ಲ. ಆದರೆ ದುಡ್ಡಿನಾಸೆಗಾಗಿ ಆದರೂ ಸಾಯುವ ಮಾನವನನ್ನು ಬದುಕಿಸಿದರೆ ಸಾಕು ಎನ್ನುವ ನಿಟ್ಟಿನಲ್ಲಿ ಕೊಂಚ ನಿಟ್ಟುಸಿರು ಬಿಡುತ್ತಿರುವಾಗಲೇ ಈ ದೇಶದಲ್ಲಿ ಮಾನ"ಯತೆ ಸತ್ತು ಹೋಗಿರುವುದು ಒಂದೆಡೆಯಾದರೆ ನೈತಿಕತೆ ನಡುಗುತ್ತ ನೆಲಕಚ್ಚುತ್ತಿದೆ ಎನ್ನುವ ಪರಮಸತ್ಯವನ್ನು  ನಾಯಕ ನಟನೊಬ್ಬ ತೋರಿಸಿಕೊಟ್ಟಿದ್ದು ನಮ್ಮ ದೇಶದ ದೌರ್ಭಾಗ್ಯ.  

ನಿಜ...! ಮೇಲೆ ಸರ್ಕಾರ ಜಾರಿಗೆ ತರಲು ಹೊರಟಿರುವ ಕ್ರಮವನ್ನು ಕಂಡಾಗ ನಮ್ಮ ಮೇಲೆ ನಮಗೇ ಅಸಹ್ಯ ಹುಟ್ಟಿದ ಅನುಭವವಾಗುತ್ತದೆ. ಈಗ ಹೇಳಲು ಹೊರಟಿರುವ ಮತ್ತೊಂದು "ಚಾರ ನಮ್ಮ ದೇಶದಲ್ಲಿ ಮೊದಲು ನೀಡುತ್ತಿದ್ದ ಮೌಲ್ಯ ಶಿಕ್ಷಣಕ್ಕೆ ಬದಲಾಗಿ ಕೇವಲ ಮಾ"ತಿ ಶಿಕ್ಷಣವನ್ನು ಕೊಟ್ಟು ಭಾರತವನ್ನು ಹೇಗೆ ಹಾಳು ಮಾಡುತ್ತಿದ್ದೇವೆ. ಸಮಾಜವನ್ನು ಹೇಗೆ ದಾರಿ ತಪ್ಪಿಸುತ್ತಿದ್ದೇವೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ತನ್ನ ನಟನೆಯ ಮೂಲಕವೇ ಅಭಿಮಾನಿ ಬಳಗವನ್ನು ಹುಟ್ಟು ಹಾಕಿ, ಬಾಲಿವುಡ್‌ನಲ್ಲಿ ಮೆರೆಯುತ್ತಿರುವ ಶಾರೂಖ ಖಾನ್ ಎನ್ನುವ ವ್ಯಕ್ತಿಯ ಬೇಜಾಬ್ದಾರಿ ನಡೆ ಇಂದು ತಿವೃ ಚರ್ಚೆಗೆ ಗ್ರಾಸವಾಗಿರುವುದು ನಮ್ಮ ಸಮಾಜದಲ್ಲಿ ನೈತಿಕ ಮೌಲ್ಯಗಳು ಹೇಗೆ ಅಳಿ"ನಂಚಿಂಗೆ ಬಂದು ನಿಂತಿವೆ ಎನ್ನುವುದಕ್ಕೆ ಸಾಕ್ಷಿ ಒದಗಿಸುತ್ತಿದೆ. ಒಂದು ವಾರದ "ಂದೆ ಶಾರೂಖ್ ಪುತ್ರ ಆರ್ಯನ್ ಖಾನ್ ಮಾದಕ ವಸ್ತುಗಳನ್ನು ಸೇ"ಸಿದ ಆರೋಪದಡಿಯಲ್ಲಿ ಬಂಧಿತರಾಗಿ ಸುದ್ದಿಯಾದರು. ಆದರ ಬೆನ್ನಲ್ಲೇ ತನ್ನ ಈ ಎಲ್ಲ ಚಟಗಳು ತಮ್ಮ ಹೆತ್ತವರಿಗೆ ಗೊತ್ತಿದೆ ಎನ್ನುವ ಆಘಾತಕಾರಿ ಅಂಶವೊಂದನ್ನು ಬಾುಬಿಟ್ಟಿದ್ದಾನೆ. ಇದು ನಿಜಕ್ಕೂ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ತಮ್ಮ ನಟನೆಯ ಮೂಲಕ ದೇಶದ ಗಮನ ಸೆಳೆದ ಒಬ್ಬ ವ್ಯಕ್ತಿ ನಿಜ ಜೀವನದಲ್ಲಿ ಸನಾತನ ಭಾರತದ ಸಂಸ್ಕೃತಿಗೆ ಕೊಳ್ಳಿ ಇಟ್ಟು, ಭಾರತ ಯುವ ಪೀಳಿಗೆಗೆ ಏನು ಸಂದೇಶವನ್ನು ರವಾನಿಸುವುದಕ್ಕೆ ಹೊರಟಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಇಲ್ಲಿ ಆರ್ಯನ್ ಖಾನ್ ಮಾದಕ ವಸ್ತು ಸೇ"ಸಿದ ತಪ್ಪಿಗಿಂತ ಅದೂ ಗೊತ್ತಿದ್ದರೂ ಕೂಡ ಅದನ್ನು ತಡೆಯದೇ ಪ್ರೋತ್ಸಾ"ಸಿದ ಹೆತ್ತವರ ತಪ್ಪು ನಮ್ಮನ್ನು ಗೊಂದಲಕ್ಕೆ ದೂಡುತ್ತಿದೆ. ಬೆಳ್ಳಿ ಪರದೆಯ ಮೇಲೆ ನಟನೆ ಮಾಡುವ ಜನಗಳನ್ನು ಅವರ ಅಭಿಮಾನಿಗಳು ಅಂಧಾನುಕಣೆ ಮಾಡುತ್ತಾರೆ. ಒಬ್ಬ ನಟ ಯಾವುದಾರೊಂದು ಚಿತ್ರದಲ್ಲಿ ತನ್ನ ಕೇಶ "ನ್ಯಾಸವನ್ನು "ನೂತನವಾಗಿ ಮಾಡಿಸಿಕೊಂಡರೆ ಅಭಿಮಾನಿಗಳು ಕೂಡ ಅದೇ ದಾರಿ "ಡಿಯುತ್ತಾರೆ. ಇದೇ ಕಾರಣಕ್ಕಾಗಿಯೇ ಡಾ.ರಾಜಕುಮಾರ ತಾವು ನಟಿಸಿದ ಯಾವುದೇ ಚಿತ್ರದಲ್ಲಿಯೂ ಕೂಡ ಮಧ್ಯ ಸೇವನೆ ಹಾಗೂ ದೂಮ್ರಪಾನ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇದರಿಂದಾಗಿಯೇ ರಾಜಣ್ಣನನ್ನು ಎಲ್ಲರೂ ಅಭಿಮಾನಿಸುವುದು ಪ್ರೀತಿಸುವುದು. ಆದರೆ ಹೆಸರು ಮಾಡಿದ ಶಾರೂಖ್‌ರಂತಹ ನಟ ಯಾವುದೋ ವಾ"ನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮಗನಿಗೆ ಸಿಗರೇಟ್ ಸೇದಬಹುದು, ಕುಡಿಯಬಹುದು, ಡ್ಸಗ್ಸ್‌ ಸೇವನೆ ಮಾಡಬಹುದು, ಸೆಕ್ಸ್‌ ಮಾಡಬಹುದು ಎಂದೆಲ್ಲ ಹೇಳುವುದರೊಂದಿಗೆ ಮಕ್ಕಳಿಗೆ ಸ್ವಾತಂತ್ರ್ಯ ಕೊಡಬೇಕು ಎನ್ನುತ್ತ ಅವರನ್ನು ಸ್ವೇಚ್ಚಾಚಾರದ ಸುಳಿಗೆ ನೂಕುತ್ತಾರೆ. ಎಲ್ಲಿ ಸ್ವಾತಂತ್ರ್ಯಕ್ಕೆ ಚೌಕಟ್ಟುಗಳು ಇರುವುದಿಲ್ಲವೋ ಅದು ಸ್ವಾತಂತ್ರ್ಯ ಎಂದು ಕರೆಸಿಕೊಳ್ಳುವುದಿಲ್ಲ. ಬದಲಿಗೆ ಸ್ವೇಚ್ಛಾಚಾರದ ಪರಮಾವಧಿಯಾಗುತ್ತದೆ. ಸ್ವಾತಂತ್ರ್ಯ ಎನ್ನುವುದು ವ್ಯಕ್ತಿತ್ವ ನಿರ್ಮಾಣಕ್ಕೆ ನೆರವು ನೀಡಿದರೆ, ಸ್ವೇಚ್ಚಾಚಾರ ಎನ್ನುವುದು ವ್ಯಕ್ತಿತ್ವವನ್ನೇ ನಾಶ ಮಾಡುತ್ತದೆ. ಆ ನಿಟ್ಟಿನಲ್ಲಿ ಶಾರೂಖ್ ಖಾನ್ ಮಾಡಿದ ಎಡವಟ್ಟಿನಿಂದ ಅವರ ಪುತ್ರ ಇಂದು ಕಂಬಿಯ "ಂದೆ ಕಣ್ಣಿರು ಹಾಕುತ್ತ ಕೂತಿದ್ದಾನೆ.  

ಮಾತೃ ದೇವೋಭಃವ, ಪಿತೃ ದೇವೋಭಃವ, ಆಚಾರ್ಯ ದೇವೋಭಃವ ಎನ್ನುವ ನೀತಿಯನ್ನು ಕಲಿಸಿಕೊಡುತ್ತಿದ್ದ ಭಾರತದಲ್ಲಿ ಇಂಥ ಹೆತ್ತವರು ಆಧುನಿಕ ಸ್ಪರ್ಶದ ಹೆಸರಿನಲ್ಲಿ ಕಲಿಸಬಾರದನ್ನು ಕಲಿಸಿಕೊಡುವ ಕಾರ್ಯ ಮಾಡುತ್ತಿರುವುದು ಭಾರತದ ಮುಂದಿನ ಭ"ಷ್ಯದ ಕರಾಳತೆಯನ್ನು ತೋರಿಸುತ್ತಿದೆ. ಬಂಧಿಸಿಟ್ಟ ಮಗನನ್ನು ಬಿಡಿಸಿಕೊಂಡು ಬರುವುದಕ್ಕೆ ಹರಸಾಹಸ ಪಡುತ್ತಿರುವ ಈ ಪುಣ್ಯಾತ್ಮ ಮಕ್ಕಳನ್ನು ಬೆಳೆಸುವಾಗಲೇ ಉತ್ತಮ ಸಂಸ್ಕಾರ ನೀಡಿದ್ದರೆ ಇಂದು  ಮಾಧ್ಯಮಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಮೇಯವೇ ಬರುತ್ತಿರಲಿಲ್ಲ. ಆರ್ಯನ್‌ಖಾನ್ ಕಣ್ಣೀರಿಡುವ ಅಗತ್ಯವೇ ಇರುತ್ತಿರಲಿಲ್ಲ. ಆದರೆ ಇವರು ಮಾಡಿದ್ದಾದರೂ ಏನು? ದುಡ್ಡಿದೆ ಎನ್ನುವ ಕಾರಣಕ್ಕಾಗಿ ದೊಡ್ಡ ದೊಡ್ಡ ಶಾಲೆಗಳಿಗೆ ಕಳಿಸಿ ಮಾ"ತಿ ಶಿಕ್ಷಣವನ್ನು ನೀಡಿದ್ದಾರೆ. ಅಲ್ಲಿ ಕಲಿತು ಬಂದ ಪುಣ್ಯಾತ್ಮರು ಸಮಾನತೆ ಸ್ವಾತಂತ್ರ್ಯ ಎನ್ನುವ ಪದಗಳನ್ನು ತಪ್ಪು ಅರ್ಥದಲ್ಲಿ ಗ್ರ"ಸಿಕೊಂಡು ಮಾಡಬಾರದನ್ನು ಮಾಡಿ ಇಂದು ಸಮಾಜದ ಎದುರು ಮಂಡಿಯೂರುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಒಂದು ಕಡೆ ಅವರ ಪಾಲಕರಾದರೆ ಮತ್ತೊಂದು ಕಡೆ ನೈತಿಕತೆ ಇಲ್ಲದ ನಮ್ಮ ಶಿಕ್ಷಣ ಪದ್ಧತಿ. ಮೆಕಾಲೆಯ ಶಿಕ್ಷಣ ಪದ್ಧತಿಂದಾಗಿ ನಮ್ಮ ಗುರುಕುಲ ಸಂಸ್ಕೃತಿ ನಾಶವಾುತು. ಅದರೊಂದಿಗೆ ನಮ್ಮ ನೈತಿಕತೆಯುಳ್ಳ ಬದುಕು "ನಾಶದ ಅಂಚಿಗೆ ತಲುಪಿತು. ಒಟ್ಟಿನಲ್ಲಿ ಪರಂಪರೆಯುಳ್ಳ ಭಾರತ ಮಾತ್ರ ಎಲ್ಲರೆದುರು ಮುಜುಗರಕ್ಕೆ ಒಳಗಾುತು. ಇದೆನ್ನೆಲ್ಲವನ್ನು ಗಮನಿಸಿ ಬರೆಯುವಾಗ ನಿಜಕ್ಕೂ ಸಂಕಟವಾುತು. ಹೆಮ್ಮೆುಂದ ಬೀಗಬೇಕಾದ ಭಾರತೀಯರು ಅವಮಾನದಿಂದ ತಲೆ ತಗ್ಗಿಸುವಂತಾಗುತ್ತಿರುವುದಕ್ಕೆ ಕಾರಣವಾದರೂ ಏನು ಎನ್ನುವ ಪ್ರಶ್ನೆಗೆ ಉತ್ತರವಾಗಿ ನಮ್ಮಲ್ಲಿ ನೆಲಕಚ್ಚಿರುವ ನೈತಿಕತೆ ಎನ್ನುವ ಉತ್ತರ ಸಿಕ್ಕು ನಮ್ಮನ್ನು ಕಂಗಾಲು ಮಾಡುತ್ತದೆ. ಭಾರತಕ್ಕೆ ಬಂದ "ದೇಶಿಗರು ಈ ದೇಶದ ಸಂಸ್ಕೃತಿಗೆ ಮನಸೋತು ಇಲ್ಲಿನ ಪರಂಪರೆಯನ್ನು ಒಪ್ಪಿಕೊಳ್ಳುತ್ತಾರೆ. ಸ್ವಾ"ು"ವೇಕನಂದರ ಮಾತುಕೇಳಿ ನಿವೇದಿತಾರಂತ ತ್ಯಾಗಮುಗಳು ಭಾರತಕ್ಕೆ ಬಂದು ನೆಲೆಸುತ್ತಾರೆ. ಮದರ ಥೇರೆಸಾರಂತವರು ಭಾರತದಲ್ಲಿ ಬಂದು ಸೇವೆ ಮಾಡುತ್ತಾರೆ. ಅನಿ ಬೇಸಂಟ್‌ರಂಥವರು ಭಾರತಕ್ಕೆ ಬಂದು ಸುಧಾರಕ ಸಂಘವನ್ನು ಸ್ಥಾಪಿಸುತ್ತಾರೆ. ಆದರೆ ಭಾರತದಲ್ಲಿಯೇ ಇದ್ದು ಈ ಸಂಸ್ಕೃತಿ ಅರ್ಥ ಮಾಡಿಕೊಳ್ಳದ ಶಾರೂಖ್‌ರಂತ ದುರಹಂಕಾರಿಗಳು ತಮ್ಮ ಮಕ್ಕಳಿಗೆ ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಚಾಚಾರದ ಹಾದಿಯಲ್ಲಿ ನಡೆಸಿ ಕಂಬಿ "ಂದೆ ನಿಲ್ಲುವಂತೆ ಮಾಡುತ್ತಾರೆ. ಬೈಜುನಲ್ಲಿ ಕಲಿತರೆ ನಿಮ್ಮ ಮಕ್ಕಳು ಜ್ಞಾನಿಗಳಾಗುತ್ತಾರೆ ಎಂದು ಹೇಳುವ ಇವರೆ "ಮಲ್ ಪಾನ್‌ಮಸಾಲಾ ತಿನ್ನಿ ಎಂದು ಪ್ರೋತ್ಸಾಹ ನೀಡುವ ಜಾ"ರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಕೊನೆಗೆ ತಮ್ಮ ಮಕ್ಕಳಿಗೆ ನಿಜ ಜೀವನದಲ್ಲಿ ಇಂಥದ್ದು ತಿಂದರೆ ಪರವಾಗಿಲ್ಲ ಎಂದು ಹೇಳಿ ಅವರ ಬದುಕನ್ನು ನಾಶ ಮಾಡುವುದರೊಂದಿಗೆ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಾರೆ. "ಗಾಗಿ ಜವಾಬ್ದಾರಿಯೇ ಇಲ್ಲದ ಇವರಿಂದ ನಾವೇನು ನೀರೀಕ್ಷೆ ಮಾಡುವುದಕ್ಕೆ ಸಾಧ್ಯ"ದೆ ನೀವೇ ಹೇಳಿ. ಅದಕ್ಕೆ ಹೇಳಿದ್ದು ಈ ದೇಶದಲ್ಲಿ ನೈತಿಕತೆ ಎಂಬುದು ನೆಲಕಚ್ಚಿದರೆ ಮಾನ"ಯತೆ ಎನ್ನುವುದು ಮಾರಾಟದ ವಸ್ತುವಾಗುತ್ತಿದೆ ಎಂದು. ಬದಲಾವಣೆ ಆಗುವ ಭರವಸೆ ಉಳಿಯುತ್ತಿಲ್ಲ ಎಂದ ಮೇಲೆ ಭಾರತದ ಭ"ಷ್ಯ ಏನಾಗಬಹುದು ನೀವೇ ಊ"ಸಿ. 


ಮಂಜುನಾಥ ಮ. ಜುನಗೊಂಡ 

ವಿಜಯಪುರ