ಇಂದು ಆಹಾರವನ್ನು ಕೆಡಿಸಿದರೆ ನಾಳೆ ಕೊರತೆ ಎದುರಿಸಬೇಕಾಗುತ್ತದೆ: ರಾಜೇಂದ್ರ

ಲೋಕದರ್ಶನ ವರದಿ

ಗದಗ 18:  ರೈತ ಬತ್ತ ಬೆಳೆಯಲು  ಒಂದು ವರ್ಷ ಕಷ್ಟಪಡಬೇಕು ಆದರೆ, ಜನರು ಅದರಿಂದ ಮಾಡಿದ ಅನ್ನವನ್ನು ಒಂದು ಕ್ಷಣದಲ್ಲಿ  ಎಸೆಯುತ್ತಿರುವದನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ಮೈಸೂರಿನ ಅಕ್ಷಯ ಆಹಾರ ಪೌಂಡೇಷನ್ ಸಂಸ್ಥಾಪಕ ಎಚ್.ಆರ್..ರಾಜೇಂದ್ರ ಅವರು ಹೇಳಿದರು. 

ನಗರದ ಹಳೇ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಅನ್ನಪೂಣರ್ೆಶ್ವರಿ ಪ್ರಸಾದ ನಿಲಯದಲ್ಲಿ 1152 ದಿನ ಪ್ರಸಾದ ಸೇವೆಯ ಅಂಗವಾಗಿ ಹಮ್ಮಿಕೊಂಡ  ಸನ್ಮಾನವನ್ನು  ಸ್ವೀಕರಿಸಿ ಮಾತನಾಡಿ, ಸಿದ್ದಗೊಂಡ ಆಹಾರ ಹಸಿವಿನಿಂದ ಬಳಲುತ್ತಿರುವ ಒಡಲುಗಳಿಗೆ ಸೇರಬೇಕು ಎನ್ನುವ ಉದ್ದೇಶದಿಂದ ಮೈಸೂರಿನಲ್ಲಿ ಕಳೆದ 7 ವರ್ಷಗಳಿಂದ ಅಕ್ಷಯ ಆಹಾರ ಪೌಂಡೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮೈಸೂರಿನ ವಿವಿಧ ಕಲ್ಯಾಣ ಮಂಟಪಗಳಲ್ಲಿ ಶುಭಕಾರ್ಯಗಳಲ್ಲಿ ಉಳಿದ ಅಡುಗೆಯನ್ನು ಸಂಗ್ರಹಿಸಿ ಅವುಗಳನ್ನು  ಮಹಾನಗರದ 70 ಸ್ಲಂ ಗಳಲ್ಲಿ ಹಾಗೂ 50 ಕ್ಕೂ ಹೆಚ್ಚು ಆನಾಥ ಆಶ್ರಮಗಳಲ್ಲಿನ ಸುಮಾರು 2 ಸಾವಿರ ಬಡಜನರಿಗೆ ಪ್ರತಿದಿನ ಅವರು ಇದ್ದಲ್ಲಿಗೆ ಹೋಗಿ ವಿತರಿಸಲಾಗುತ್ತಿದೆ. ಅದರಂತೆ ಹಸಿದ ಬಂದವರಿಗೆ 5 ರೂ. ವಿದ್ಯಾಥರ್ಿನಿಯರಿಗೆ 2 ರೂ. ಹಾಗೂ ಅಂಗವಿಕಲರಿಗೆ ಉಚಿತವಾಗಿ  ಪ್ರಸಾದ  ಸೇವೆಯನ್ನು ನಗರದ ಅನ್ನಪೂಣರ್ೆಶ್ವರಿ ಪ್ರಸಾದ ನಿಯಲದಲ್ಲಿ ಕಳೆದ 3 ವರ್ಷಗಳಿಂದ ನಡೆದು ಬರುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು. 

ಇಂದು ನಮ್ಮ ಸುತ್ತಮುತ್ತ ಸಾವಿರಾರು ಬಡಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅಂತಹವರಿಗೆ ಹಸಿವು ನೀಗಿಸಲು ಎಲ್ಲರೂ ಮುಂದೆ ಬರಬೇಕು. ಪ್ರತಿದಿನ ನಗರದಲ್ಲಿನ ಕಲ್ಯಾಣ ಮಂಟಪಗಳಲ್ಲಿ ನಡೆಯುವ ಶುಭಕಾರ್ಯಗಳಿಲ್ಲಿ ಉಳಿಯುವ ಆಹಾರವನ್ನು ಕಸದ ಗುಂಡಿಗೆ ಹಾಕದೆ ಬಡವರಿಗೆ ನೀಡಬೇಕು. ಇಂದು   ಆಹಾರವನ್ನು ಕೆಡಿಸಿದರೆ ಮುಂದಿನ ಪೀಳಿಗೆಗೆ ಆಹಾರದ ಕೊರತೆ ಮಾಡಿದಂತೆ ಎಂದು   ಎಚ್.ಆರ್..ರಾಜೇಂದ್ರ ಅವರು ಹೇಳಿದರು. 

ಪ್ರಸಾದ ನಿಲಯದ ಅಧ್ಯಕ್ಷ ಎಸ್.ಎಸ್.ಕಳಸಾಪೂರಶೆಟ್ಟರ ಅವರು ಮಾತನಾಡಿ, ಎಚ್.ಆರ್. ರಾಜೇಂದ್ರ ಅವರಂತಹ ಮಹಾನ ವ್ಯಕ್ತಿಗಳು ಜಿಲ್ಲೆಗೆ ಒಬ್ಬರಂತೆ ಇಂದ್ದರೆ ಅಂತಹ ಜಿಲ್ಲೆಗಳಲ್ಲಿ ಬಡಜನರ ಹಸಿವು ಕಡಿಮೆ ಮಾಡಿದಂತೆ, ಅವರು ಮಾಡುತ್ತಿರುವ ಸಮಾಜಸೇವೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. 

ಎಚ್.ಆರ್. ರಾಜೇಂದ್ರ ಅವರ ಧರ್ಮಪತ್ನಿ ಎಂ.ಕೆ.ಶ್ವೇತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗ್ರಾಮೀಣ ಜಿಲ್ಲಾಧ್ಯಕ್ಷ ಡಿ.ಎಸ್.ತಳವಾರ, ಕಾರ್ಯದಶರ್ಿ ಬಿ.ಬಿ.ಹಡಪದ, ಶಿಕ್ಷಕ ರವಿ ಪೂಜಾರ, ಪ್ರಸಾದ ನಿಲಯದ ನಿದರ್ೇಶಕರಾದ  ಸುಭದ್ರಾ  ನೀಲಪ್ಪನವರ, ಶೈಲಜಾ ಕೋಡಿಹಳ್ಳಿ   ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪ್ರಸಾದ ನಿಲಯದ ನಿದರ್ೇಶಕ  ವೆಂಕಟೇಶ ಇಮರಾಪೂರ ಕಾರ್ಯಕ್ರಮ ನಿರೂಪಿಸಿದರು.