ಗಾಂಧಿ ವಿಚಾರ ಕೈಬಿಟ್ಟರೆ ಶಾಂತಿಗೆ ಧಕ್ಕೆಯಾಗುತ್ತದೆ: ಕೆ.ನೀಲಾ


ಧಾರವಾಡ 10:  ಕೈಯೊಳಗೆ ಭಗವದ್ಗೀತೆ ಹಿಡಿದು ಎಲ್ಲರನ್ನೂ ಪ್ರೀತಿಸುವ, ಅಹಿಂಸೆಯ ಸಂದೇಶ ಸಾರಿದ ಮಹಾತ್ಮ ಗಾಂಧಿ ಇಂದಿಗೂ ಪ್ರತಿಯೊಬ್ಬ ಭಾರತೀಯನನ್ನು ಕಾಡುವ ಮಹಾನ್ ಚೇತನವಾಗಿದೆ. ಅವರ ಚಿಂತನೆಗಳನ್ನು ಕೈಬಿಟ್ಟು ಕೇವಲ ಅವರ ಚಿತ್ರದ ಮೂಲಕ ವ್ಯಕ್ತಿತ್ವವನ್ನು ಬೇರೆಯಾಗಿ ಕಟ್ಟಿಕೊಡುತ್ತಿರುವ ಕಾರ್ಯಗಳು ನಿಲ್ಲಬೇಕು. ಅವರ ಸಂದೇಶಗಳನ್ನು ನಿಜವಾದ ಅರ್ಥದಲ್ಲಿ ಆಚರಿಸಿ,ಸೌಹಾರ್ದ ಭಾರತ ನಿಮರ್ಿಸಬೇಕು ಎಂದು ಹೆಸರಾಂತ ಚಿಂತಕಿ ಕೆ.ನೀಲಾ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ, ಕವಿವಿ ಗಾಂಧಿ ಅಧ್ಯಯನ ವಿಭಾಗದ ಸಹಯೋಗದಲ್ಲಿ ಕವಿವಿ ಆವರಣದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಆಯೋಜಿಸಿದ್ದ  ಸಮಾರಂಭದಲ್ಲಿ ಬೋಳುವಾರು ಮಹ್ಮದ್ ಕುಂಇ ಅವರ "ಪಾಪು ಗಾಂಧಿ-ಗಾಂಧಿ ಬಾಪು ಆದ ಕಥೆ " ಆಧರಿಸಿದ ರಂಗರೂಪ ಗಾಂಧಿ 150 ಒಂದು ರಂಗ ಪಯಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾತ್ಮ ಗಾಂಧಿಯವರ ಹುಟ್ಟಿನಿಂದ ಹಿಡಿದು ಅವರು ಮಹಾತ್ಮರಾಗುವವರೆಗೆ ಬೆಳೆದ ಚರಿತ್ರೆಯನ್ನು ರಂಗರೂಪಕ್ಕೆ ಅಳವಡಿಸಿರುವ ರಂಗಾಯಣದ ಕಾರ್ಯ ಪ್ರಶಂಸನೀಯವಾದುದು. ಭಾರತ ಎಲ್ಲ ಧಮರ್ೀಯರ ನೆಲ, ಇಲ್ಲಿ ಶಾಂತಿ ಬೇಕು ಯುದ್ಧ ಬೇಡ, ಪರಸ್ಪರ ಪ್ರೀತಿಸುವ ,ಗೌರವಿಸುವ ಭಾವವನ್ನು ಯುವ ಜನಾಂಗ ಬೆಳೆಸಿಕೊಳ್ಳಬೇಕು. ಈ ನಾಟಕವು ಕನರ್ಾಟಕ ರಾಜ್ಯದ ಎಲ್ಲೆಡೆ ಸತತ ನಾಲ್ಕು ತಿಂಗಳ ಕಾಲ ಪ್ರದರ್ಶನಗೊಳ್ಳಲಿದೆ.

ಪ್ರತಿಯೊಬ್ಬ ಕನ್ನಡಿಗ ಈ ನಾಟಕ ನೋಡಬೇಕು ಎಂದರು.

ಇಡೀ ಭಾರತವನ್ನು ಸೈಕಲ್ ಮೂಲಕ ಸುತ್ತಿ ಮಹಾತ್ಮ ಗಾಂಧೀಜಿಯವರ ಚಟುವಟಿಕೆಗಳನ್ನು ದಾಖಲಿಸುತ್ತಿರುವ ಎಂ.ಆರ್.ಪ್ರಭಾಕರ್ ಮಾತನಾಡಿ, ಬರಿ ಮೈ ಫಕೀರ ಎಂದು ಕರೆದ ಬ್ರಿಟಿಷರೇ ಮಹಾತ್ಮ ಗಾಂಧೀಜಿಯವರ ಕುರಿತು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ, ಅಮೇರಿಕ,ಜರ್ಮನಿ,ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ 137 ರಾಷ್ಟ್ರಗಳು ಮಹಾತ್ಮ ಗಾಂಧಿಯವರ ಅಂಚೆ ಚೀಟಿಗಳನ್ನು ಹೊರತಂದಿದೆ.ವಿಶ್ವದಲ್ಲೇ ಅತಿ ಹೆಚ್ಚು ದೇಶಗಳಿಂದ ಗೌರವ ಪಡೆದ ವ್ಯಕ್ತಿ ಗಾಂಧೀಜಿಯಾಗಿದ್ದಾರೆ.ಅವರ ಕುರಿತ 450 ಹೆಚ್ಚು ಪ್ರಕಾರದ ಅಂಚೆ ಚೀಟಿಗಳನ್ನು ಸಂಗ್ರಹಿಸುತ್ತಿದ್ದೇನೆ ಎಂದರು.

ಸಾಹಿತಿ , ಹಿರಿಯ ಪತ್ರಕರ್ತ ಡಾ.ರಂಜಾನ್ ದಗರ್ಾ ಮಾತನಾಡಿ, ಗಾಂಧಿ ತತ್ವಗಳನ್ನು ಈ ದೇಶದಿಂದ ಓಡಿಸುವ ಶಕ್ತಿಗಳ ವಿಚಾರಗಳನ್ನು. ಸಾಹಿತಿಗಳು, ಕಲಾವಿದರು,ಪತ್ರಕರ್ತರು, ಯುವಜನ,ವಿದ್ಯಾಥರ್ಿಗಳು ಅರ್ಥ ಮಾಡಿಕೊಳ್ಳಬೇಕು. ಗಾಂಧಿ ವಿಚಾರಗಳ ಆಚರಣೆಯಿಂದ ಮಾತ್ರ ದೇಶದಲ್ಲಿ ಉಗ್ರಗಾಮಿ ,ಹಿಂಸಾತ್ಮಕ ಚಟುವಟಿಕೆಗಳನ್ನು ತಡೆದು ಶಾಂತಿ ಸ್ಥಾಪಿಸಬಹುದು ಎಂದರು. 

ರಂಗ ನಿದರ್ೇಶಕ ಡಾ.ಶ್ರೀಪಾದಭಟ್ ಮಾತನಾಡಿ, ಗಾಂಧೀಜಿಯವರ ಕುರಿತ ಸಣ್ಣಪುಟ್ಟ ವಿಚಾರಗಳನ್ನು ಅರಿಯದ ಎಷ್ಟೋ ಜನ ಅವರನ್ನು ಟೀಕಿಸುವಂತೆ ಪ್ರೇರೆಪಿಸುವ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ವಿದ್ಯಾಥರ್ಿ, ಯುವಜನರಿಗೆ ಸರಿಯಾದ ತಿಳುವಳಿಕೆ ನೀಡಿ. ಗಾಂಧಿ ಚಿಂತನೆಗಳ ಆಚರಣೆಯಿಂದ ಸಿಗುವ ಸುಖ,ಶಾಂತಿಗಳನ್ನು ನೆಲೆಗೊಳಿಸುವ ಆಶಯವಿದೆ ಎಂದರು.

ಹಿರಿಯ ರಂಗಕಮರ್ಿ ಪ್ರಸನ್ನ ಮಾತನಾಡಿ, ಪಾತ್ರಗಳನ್ನು ನಾವೆಲ್ಲ ನಿಜಜೀವನದಲ್ಲಿ ನಿರ್ವಹಿಸುತ್ತಿರುತ್ತೇವೆ. ಗಾಂಧೀ ಅವರ ಅನುಕರಣೆಗಿಂತ ವಿಚಾರಗಳ ಅಳವಡಿಕೆ ಮುಖ್ಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿದರ್ೇಶಕ ಬಲವಂತರಾವ್ ಪಾಟೀಲ ಮಾತನಾಡಿದರು. ರಂಗಾಯಣದ ನಿದರ್ೇಶಕ ಪ್ರಮೋದ ಶಿಗ್ಗಾಂವ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿದರ್ೇಶಕ ,ರಂಗಾಯಣ ಆಡಳಿತಾಧಿಕಾರಿ ಬಸವರಾಜ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿವಿ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಶೆಟ್ಟರ್ ವಂದಿಸಿದರು. ಡಾ.ಶ್ರೀಪಾದಭಟ್  ನಿದರ್ೇಶನದ ಗಾಂಧಿ 150 ಒಂದು ರಂಗ ಪಯಣ ನಾಟಕದ ಮೊದಲ ಪ್ರದರ್ಶನ ನಡೆಯಿತು. ನಾಡಿನಾದ್ಯಂತ ಸುಮಾರು 4 ತಿಂಗಳ ಕಾಲ ಪ್ರದರ್ಶನ ಗಳು ಮುಂದುವರೆಯಲಿದೆ.