ಮಾಂಜರಿ 07: ಬೆಳಗಾವಿಯಲ್ಲಿ ಸೋಮವಾರದಿಂದ ನಡೆಯುವ ಚಳಿಗಾಲದ ಅಧಿವೇಶನವನ್ನು ಗಮನಸೆಳೆಯುವ ನಿಟ್ಟಿನಲ್ಲಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಆಗ್ರಹಿಸಿ ಡಿಸೆಂಬರ್ 9 ರಿಂದ ಅಧಿವೇಶನ ಮುಗಿಯುವವರೆಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಜಿಯವರು ಹೇಳಿದರು.
ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಐದು ದಶಕಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಹೋರಾಟಗಳನ್ನು, ಸತ್ಯಾಗ್ರಹಗಳನ್ನು, ಧರಣಿಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ. ಆದ್ರೂ ಸಹ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಕನಸು ಈಡೇರುತ್ತಿಲ್ಲ. ಚಿಕ್ಕೋಡಿ ಭಾಗದ ಶಾಸಕರು ಜಿಲ್ಲೆಯ ಕುರಿತು ಒಗ್ಗಟ್ಟು ಕಾಣುತ್ತಿಲ್ಲ, ಜಿಲ್ಲೆಗಾಗಿ ಶಾಸಕರು ಒಗ್ಗಟ್ಟು ತೋರಿಸಿದರೆ ಜಿಲ್ಲೆಯಾಗಲು ಸಾಧ್ಯ ಎಂದರು. ದೂರದ ಅಥಣಿಯಿಂದ ಜನರು ಯಾವುದೇ ಕೆಲಸಕ್ಕೆ ಅಂತ ಜಿಲ್ಲಾಧಿಕಾರಿಗಳ ಕಚೇರಿಗೆ ಹೋದಾಗ ಹೋಗಿಬರಲು ಎರಡು ದಿನಗಳು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚಿಕ್ಕೋಡಿ ಜಿಲ್ಲೆ ಮಾಡಿದರೆ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.ಬೈಟ್-1ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ ಮಾತನಾಡಿ ಕಳೆದ ಹಲವು ವರ್ಷಗಳಿಂದ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟವನ್ನು ಮಾಡಿಕೊಂಡು ಬರುತ್ತಿದ್ದೇವೆ. ಈ ಬಾರಿ ಅಧಿವೇಶನದ ಒಳಗಾಗಿ ಚಿಕ್ಕೋಡಿ ಜಿಲ್ಲೆಯನ್ನು ಘೋಷಿಸುತ್ತಿದ್ದರೆ, ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯಕ್ಕಾಗಿ ಘೋಷಣೆ ಕೂಗುಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ಬೈಟ್-2ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಸದ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡುತ್ತಾರೆ ಎಂಬ ಭರವಸೆ ಇದೆ. ಒಂದು ವೇಳೆ ಭರವಸೆ ಈಡೇರಿದಿದ್ದರೆ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರತಾಪಗೌಡ ಪಾಟೀಲ, ಸಂತೋಷ ಪೂಜೇರಿ, ಬಸವರಾಜ ಮಗದುಮ್, ಸಚೀನ ದೊಡ್ಡಮನಿ, ಮಂಜುನಾಥ ಬಾನೂಸೆ, ಅಮೂಲ ನಾವಿ, ಸುದರ್ಶನ ತಮ್ಮಣ್ಣವರ, ಕಾಡಗೌಡ ಪಾಟೀಲ, ಮೋಹನ ಪಾಟೀಲ, ಬೀರು ವಗ್ಗೆ, ಸೌರಭ ಹಿರೇಮಠ, ರಮೇಶ ಡಂಗೇರ, ಮಾಳು ಕರೆಣ್ಣವರ, ರುದ್ರಯ್ಯಾ ಹಿರೇಮಠ, ರಫೀಕ ಪಠಾಣ ಹಾಗೂ ಹಲವಾರು ಹೋರಾಟಗಾರರು ಉಪಸ್ಥಿತರಿದ್ದರು.