ತಿರುವನಂತಪುರ 09: ದೇಶದ ಅತೀ ಹೆಚ್ಚು ಪ್ರಮಾಣದ ನೀರನ್ನು ಸಂಗ್ರಸಬಲ್ಲ ಕೇರಳದ ಇಡುಕ್ಕಿ ಡ್ಯಾಂ ನ ಗೇಟ್ ಗಳನ್ನು ಬರೊಬ್ಬರಿ 26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಗಿದ್ದು, ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗಿದೆ.
ಮುಂಗಾರು ನಿಮಿತ್ತ ಕೇರಳದಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಈಗಾಗಲೇ ಡ್ಯಾಂ ಭತರ್ಿಯಾಗಿ ಅಪಾಯದ ಮಟ್ಟದ ಸನಿಹದಲ್ಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು ಡ್ಯಾಂನ ಗೇಟ್ ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. ಇನ್ನು ಇಂದು ಕೇವಲ ಪ್ರಯೋಗಾರ್ಥವಾಗಿ ಗೇಟ್ ನ ಒಂದು ಗೇಟ್ ತೆರೆದು ನೀರು ಬಿಡಲಾಗುತ್ತಿದ್ದು, ಮುಂದಿನ ಪರಿಸ್ಥಿತಿಗಳನ್ನು ನೋಡಿಕೊಂಡು ಇತರೆ ಗೇಟ್ ಗಳ ತೆರೆಯುವ ಕುರಿತು ನಿರ್ಧರಿಸಲಾಗುತ್ತದೆ ಎಂದು ಡ್ಯಾಂ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಡ್ಯಾಂ ಗೇಟ್ ಗಳನ್ನು ಪ್ರಯೋಗಾರ್ಥವಾಗಿ 50 ಸೆಮೀಗಳ ವರೆಗೂ ತೆರೆದು ನೀರು ಹೊರ ಬಿಡಲಾಗುತ್ತಿದೆ.
ಕೇರಳದ ಕುರತ್ತಿ ಗುಡ್ಡಗಾಡು ಪ್ರದೇಶದಲ್ಲಿರುವ ಪೆರಿಯಾರ್ ನದಿಗೆ ಅಡ್ಡಲಾಗಿ ಕಟ್ಟಿರುವ ಇಡುಕ್ಕಿ ಡ್ಯಾಂ ನ ಗೇಟ್ ಗಳನ್ನು 26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಗಿದೆ. ಮುಂಗಾರು ಮಳೆ ಹಿನ್ನಲೆಯಲ್ಲಿ ಕೇರಳದಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಇಡುಕ್ಕಿ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ.
ಈಗಾಗಲೇ ಡ್ಯಾಂ ತುಂಬಿದ್ದು, ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿಂದೆ 1981ರಲ್ಲಿ ಆ ಬಳಿಕ 1992ರಲ್ಲಿ ಗೇಟ್ ತೆರೆದು ನೀರು ಬಿಡಲಾಗಿತ್ತು.
ಆ ಬಳಿಕ ಇದೇ ಮೊದಲ ಬಾರಿಗೆ ಆಂದರೆ 26 ವರ್ಷಗಳ ಬಳಿಕ ಡ್ಯಾಂ ತುಂಬಿದ್ದು, ಇದೇ ಕಾರಣಕ್ಕೆ ಹೆಚ್ಚುವರಿ ನೀರನ್ನು ಹೊರಗೆ ಬಿಡಲು ಆದೇಶಿಸಲಾಗಿದೆ. ಇನ್ನು ನೀರು ಬಿಡುತ್ತಿರುವ ಹಿನ್ನಲೆಯಲ್ಲಿ ಪೆರಿಯಾರ್ ನದಿ ಪಾತ್ರದ ಗ್ರಾಮಗಳಿಗೆ ಆರೆಂಜ್ ಅಲಟರ್್ ಘೋಷಣೆ ಮಾಡಲಾಗಿದ್ದು, ಎತ್ತರ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಇಡುಕ್ಕಿ ಡ್ಯಾಂ ಒಟ್ಟು 2,400 ಅಡಿಗಳ ನೀರಿನ ಸಂಗ್ರಹ ಸಾಮಥ್ರ್ಯವನ್ನು ಹೊಂದಿದ್ದು, ಈಗಾಗಲೇ ಡ್ಯಾಂಗೆ ಬರೊಬ್ಬರಿ 2,398 ಅಡಿಗಳಷ್ಟು ನೀರು ಸಂಗ್ರಹವಾಗಿದೆ.