ಹಾವೇರಿ 21:ರೈತರು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದು, ನಾವೆಲ್ಲ ಒಟ್ಟಾಗಿ ಸಂಘಟನಾತ್ಮಕವಾದ ಮನೋಭಾವನೆ ಹೊಂದಿದರೆ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಸವರಾಜ ಕರಿಗಾರ ಹೇಳಿದರು. ಜಿಲ್ಲೆಯ ಹಿರೇಕೆರೂರ ತಾಲೂಕಿನ ಕೋಡ ಗ್ರಾಮದ ಅರುಣೋದಯ ಶಾಲಾ ಮೈದಾನದಲ್ಲಿ ಉತ್ತರ ಕರ್ನಾಟಕ ರೈತ ಸಂಘದ ಸದಸ್ಯತ್ವ ಅಭಿಯಾನ, ರೈತರ ಹಾಗೂ ರೈತ ಮಹಿಳೆಯರ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಮತ್ತು ತಾಲೂಕ ಮಟ್ಟದ ರೈತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ದುಡಿದು ತಿನ್ನುವ ಜಾಯಿಮಾನದವರು ಆದರೆ ಭಾರತದಲ್ಲಿ ಮಳೆಯಾದಾರಿತ ಕೃಷಿ ಅವಲಂಬಿಸಿದ್ದರಿಂದ ಅತಿವೃಷ್ಠಿ-ಅನಾವೃಷ್ಠಿಯಿಂದ ಸರಿಯಾಗಿ ಬೆಳೆ ಬಾರದೇ ಜೀವನ ನಿರ್ವಹಣೆ ಕಷ್ಟಕರವಾಗುತ್ತದೆ. ಸರ್ಕಾರರ ರೈತರ ನೆರವಿಗೆ ಬರುವುದು ಅಗತ್ಯವಾಗಿದೆ. ಸರ್ಕಾರವನ್ನು ಎಚ್ಚರಿಸಲು ಹಾಗೂ ಸೌಲಭ್ಯ ಪಡೆಯಲು ರೈತರ ಸಂಘಟನೆ ಮಾಡಿ ಎಂದರು.
ಜಿಲ್ಲಾಧ್ಯಕ್ಷ ಹನುಮಂತಪ್ಪ ದಿವಿಗಿಹಳ್ಳಿ ಮಾತನಾಡಿ ಉತ್ತರ ಕರ್ನಾಟಕ ರೈತ ಸಂಘ ಕೇವಲ ರೈತರಿಗೆ ಮಾತ್ರವಲ್ಲದೆ ಯಾವುದೇ ಇಲಾಖೆಯ ಕೆಲಸಗಳು ಇದ್ದರೂ ಬಡವರ ಕಾರ್ಮಿಕರಿಗೆ ನ್ಯಾಯವಾದ ಹೋರಾಟ ಮಾಡುತ್ತದೆ. ರೈತ ಸಂಘ ನೊಂದವರ ಪರವಾಗಿ, ರೈತರ ಪರವಾಗಿ ಸೇವೆಗೆ ಸದಾಸಿದ್ಧವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ರೈತ ಮುಖಂಡ ಪರಮೇಶಪ್ಪ ಹಲಗೇರಿ ರೈತ ಬಂಧುಗಳೆಲ್ಲಾ ಒಂದಾಗಿ ಯಾವುದೇ ಜಾತಿ, ಮತ, ಬೇಧವಿಲ್ಲದೆ ಎಲ್ಲರೂ ನಮ್ಮವರೆ ಎಂದು ತಿಳಿಯಿವುದೇ ರೈತ ಸಂಘವೆಂದು ಹೇಳಿದರು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸರ್ವತೋಮುಖ ಮನ್ನಣೆ ಕೊಡುವಂತಹ ಸಂಘವಾಗಿದೆ ಎಂದರು. ಹಿರೇಕೆರೂರು ತಾಲೂಕಿನ ಕೋಡ, ಬಾವಾಪುರ ತಾಂಡಾ,ಚಿಕ್ಕ ಬೂದಿಹಾಳ, ಗಂಗಾಪುರ, ಹಿರೇಬೂದಿಹಾಳ ಗ್ರಾಮ ಘಟಕಗಳನ್ನು ಒಂದೇ ವೇದಿಕೆಯಲ್ಲಿ ಅನಾವರಣ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ವೃಷಬ ರೂಪಿ ಶಿವಾಲಿ ಬಸವೇಶ್ವರ ಮೂಕಪ್ಪ ಸ್ವಾಮಿಗಳು ಸುಕ್ಷೇತ್ರ ಸಾತೇನಹಳ್ಳಿ ವಹಿಸಿಕೊಂಡಿದ್ದರು. ಜಿಲ್ಲಾ ಗೌರವಾಧ್ಯಕ್ಷ ಚಂದ್ರಶೇಖರ ಉಪ್ಪಿನ, ಜಿಲ್ಲಾ ಪ್ರಧಾನ ಕಾರ್ಯ ದರ್ಶ ಫಕ್ಕಿರೇಶ ಕಾಳಿ, ಹಾವೇರಿ ತಾಲೂಕಾಧ್ಯಕ್ಷ ಫಕ್ಕಿರಗೌಡ್ರ ಗಾಜೀಗೌಡ್ರ, ಹಿರೇಕೆರೂರು ತಾಲೂಕಾಧ್ಯಕ್ಷರಾದ ಜಗದೀಶ ಕುಸಗೂರ, ಮಂಜುನಾಥ ಹಿರೇಮಠ, ಹೊನ್ನಪ್ಪ ಸಣ್ಣಭಾಕರ್ಿ, ರಾಮನಗೌಡ ತರ್ಲಗಟ್ಟ, ರೇಣುಕಾಸ್ವಾಮು ಹಿರೇಮಠ, ಮುಸ್ತಾಫ್ ಅಹ್ಮದ್ ಮೋನಿನ್ ಸೇರಿದಂತೆ ನೂರಾರು ರೈತ ಮುಖಂಡರು, ರೈತ ಮಹಿಳೆಯರು ಪಾಲ್ಗೊಂಡಿದ್ದರು.