ಬೆಳಗಾವಿ: ಮಕ್ಕಳ ಅಸಹಜ ವರ್ತನೆ ಗುರುತಿಸಿ: ಪಾಟೀಲ

ಲೋಕದರ್ಶನ ವರದಿ

ಬೆಳಗಾವಿ 05:  ಶಿಕ್ಷಕರು ಮಕ್ಕಳಲ್ಲಿ ಕಂಡು ಬರುವ ಅಸಹಜ ವರ್ತನೆಗಳನ್ನು ಗುರುತಿಸಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಮುಖ್ಯ ವಾಹಿನಿಗೆ ತರಬೇಕು ಎಂದು ಪೊಲೀಸ್ ಸಬ್ ಇನ್ಸಪೆಕ್ಟರ್ ಸಿದ್ದನಗೌಡ ಪಾಟೀಲ ಹೇಳಿದರು.

ನಗರದ ಜೈನ್ ಹೆರಿಟೇಜ್ ಶಾಲೆಯಲ್ಲಿ 2019-20ನೇ ಸಾಲಿನಲ್ಲಿ ನಡೆದ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿದ್ಯಾಥರ್ಿಗಳು ರಸ್ತೆ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಮುಖ್ಯವಾಗಿ ಮಾದಕ ವ್ಯಸನಗಳಿಂದ ದೂರವಿರಬೇಕು. ಲೈಂಗಿಕ ಕಿರುಕುಳಕ್ಕೆ ತುತ್ತಾಗದಂತೆ, ವೈಯಕ್ತಿಕ ಸುರಕ್ಷತೆ ಬಗ್ಗೆ ಜಾಗೃತಿಯಿಂದಿರಬೇಕು. ಅಪಾಯ ಎದುರಾದಾಗ ರಕ್ಷಣೆಗೆ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಇಂದ್ರಜಾಲದ ಮೂಲಕ ಯಾವುದೇ ಕನಸು ನನಸಾಗದು. ಕಠಿಣ ಪರಿಶ್ರಮ, ದೃಢ ನಿಶ್ಚಯದ ಮೂಲಕ ನಿಗದಿತ ಗುರಿ ಮುಟ್ಟಲು ಸಾಧ್ಯ ಎಂದರು.

ಶಾಲಾ ನಿದರ್ೇಶಕಿ ಶ್ರದ್ಧಾ ಕಟವಟೆ, ಪ್ರಾಚಾರ್ಯ ಡಾ. ಮಂಜೀತ ಜೈನ್, ಮುಖ್ಯ ನಿವರ್ಾಹಕಿ ಅಮೀ ದೋಶಿ ಮತ್ತಿತರರು ಉಪಸ್ಥಿತರಿದ್ದರು. ನಂತರ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.