ಲೋಕದರ್ಶನ ವರದಿ
ಕೊಪ್ಪಳ 09: ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಬೇಕು ಎಂದು ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆ ಸಿಪಿಐ ರವಿ ಉಕ್ಕುಂದ ಹೇಳಿದರು.
ತಾಲೂಕಿನ ಬೇವಿನಹಳ್ಳಿ ಗ್ರಾಮದ ಶ್ರೀಮಾತೋಶ್ರೀ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ ಶಾಲಾ ವಾಷರ್ಿಕೋತ್ಸವ ಸಮಾರಂಭ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿ ಮಗು ಕೂಡ ತನಗೆ ಸಿಗಬೇಕಾದ ಮೂಲಭೂತ ಶಿಕ್ಷಣದಿಂದ ವಂಚಿತಆಗಬಾರದು. ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆಗಳಾಗಿದ್ದು, ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಶಿಕ್ಷಕರಷ್ಟೇ ಪಾಲಕರ ಜವಾಬ್ದಾರಿ ಇದೆ. ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಪಾಲಿಸುವುದು ಕಡಿಮೆಯಾಗಿದೆ. ಎಲ್ಲಾರೂ ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂದರು.
ಶ್ರೀಮಾತೋಶ್ರೀ ಪ್ರಶಸ್ತಿ ಸ್ವೀಕರಿಸಿ ಸುರೇಶ ಕಂಬಳಿ ಮಾತನಾಡಿ, ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವದು ಸಾಮಾನ್ಯ ಕೆಲಸವಲ್ಲ, ಆದರೆ ಈ ಸಂಸ್ಥೆಯು ಸಹಕಾರಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ಕನಕಗುರು ಪೀಠ ಹಾಲವರ್ತಿಯ ಶಾಖಾಮಠದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳುವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಯಂಕನಗೌಡ ಪಾಟೀಲ್ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯ ಮೂತರ್ೆಪ್ಪ ಗುಳದಳ್ಳಿ, ಬೇವನಹಳ್ಳಿ ಗ್ರಾಮದ ಸುತ್ತಮುತ್ತಾ ಸಕರ್ಾರಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಯಮನೂರಪ್ಪ, ಶಿವಪುತ್ರಪ್ಪ, ಮಲ್ಲಿಕಾಜರ್ುನ್, ಅಶೋಕ, ವಿವೇಕಾನಂದ ಶಾಲೆಯ ರಮೇಶಹೊಳೆಯಾಚೆ, ದ್ಯಾಮಣ್ಣ ಅಬ್ಬಿಗೇರಿ, ಭೀಮಣ್ಣ ಮೂಲಿಮನಿ, ಗಿರೀಶ ಹಿರೇಮಠ, ಫಕೀರಪ್ಪ ಅಜ್ಜಿ, ರಾಘವೇಂದ್ರ, ಆಡಳಿತ ಮಂಡಳಿಯ ಶಿವಮೂತರ್ಿ, ನಾಗರಾಜ, ಮಾರುತಿ, ಷಣ್ಮುಖಪ್ಪ, ಗವಿಸಿದ್ದಪ್ಪ ಬೆಟಗೇರಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾಥರ್ಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರಿಗೆ ಸನ್ಮಾನಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ವಾಷರ್ಿಕ ವರದಿಯನ್ನು ಮುಖ್ಯೋಫಾದ್ಯಯ ವೀರಯ್ಯ ಮೂಲಿಮಠ ವಾಚಿಸಿದರು. ಸಂಸ್ಥೆಯ ಅಧ್ಯಕ್ಷ ಮುದ್ದಪ್ಪ ಗೊಂದಿಹೊಸಳ್ಳಿ ಸ್ವಾಗತಿಸಿ ಹಾಗೂ ನಿರೂಪಿಸಿದರೆ, ದೇವರಾಜ ಮೇಟಿ ವಂದಿಸಿದರು.