ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ

ಕೊಪ್ಪಳ 29: ನೆಹರು ಯುವ ಕೇಂದ್ರದ ಉದ್ದೇಶವು ಗ್ರಾಮೀಣ ಪ್ರದೇಶದಲ್ಲಿನ ಯುವ ಪ್ರತಿಭೆಗಳನ್ನ ಗುರುತಿಸಿ ಅವರನ್ನು ತಾಲ್ಲೂಕು, ಜಿಲ್ಲೆ, ರಾಜ್ಯ, ಹಾಗೂ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದವರೆಗೆ ಗುರುತಿಸುವಂತಹ ಕೆಲಸವನ್ನು ಮಾಡುತ್ತದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಅವರು ಹೇಳಿದರು.

ಭಾರತ ಸಕರ್ಾರ ನೆಹರು ಯುವ ಕೇಂದ್ರ ಕೊಪ್ಪಳ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೊಪ್ಪಳ ಮಾರುತೇಶ್ವರ ಯುವ ಸಾಂಸ್ಕೃತಿಕ ಸೇವಾ ಸಂಘ  ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ (ನ. 28) ನಡೆದ ಕೊಪ್ಪಳದ ಕೃಷಿ ವಿಸ್ತರಣಾ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 3 ದಿನಗಳ ಜಿಲ್ಲಾ ಮಟ್ಟದ ಯುವ ನಾಯಕತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನೆಹರು ಯುವ ಕೇಂದ್ರದ ಉದ್ದೇಶವು ಗ್ರಾಮೀಣ ಪ್ರದೇಶದಲ್ಲಿನ ಯುವ ಪ್ರತಿಭೆಗಳನ್ನ ಗುರುತಿಸಿ ಅವರನ್ನು ತಾಲ್ಲೂಕು, ಜಿಲ್ಲೆ, ರಾಜ್ಯ, ಹಾಗೂ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದವರೆಗೆ ಗುರುತಿಸುವಂತಹ ಕೆಲಸವನ್ನು ಮಾಡುತ್ತಿದೆ. ಈ ಎಲ್ಲಾ ಸೌಲಭ್ಯಗಳು  ಪಡೆಯಬೇಕಾದರೆ ಅವರು ಕಾನೂನು ಬದ್ಧವಾಗಿ ಸಂಘಗಳನ್ನು ರಚಿಸಿಕೊಂಡು ಅದರ ಮುಖಾಂತರ ಹೆಚ್ಚಿನ ಪ್ರಮಾಣದಲ್ಲಿ ನೆಹರು ಯುವ ಕೇಂದ್ರದ ಸೌಲಭ್ಯಗಳನ್ನು ಪಡೆಯಬಹುದು ಎಂದು ಹೇಳಿದರು.    ಕಾರ್ಯಕ್ರಮದಲ್ಲಿ ಕೊಪ್ಪಳ ಕೃಷಿ ವಿಸ್ತರಣಾ  ಶಿಕ್ಷಣ ಕೇಂದ್ರ  ಕೀಟಶಾಸ್ತ್ರ ತಜ್ಞರಾದ ಡಾ. ಬದರಿಪ್ರಸಾದ ಪಿ.ಆರ್, ನೆಹರು ಯುವ ಕೇಂದ್ರದ ಲೆಕ್ಕ ಪರಿಶೋಧಕರಾದ  ರಾಮರಾವ ಬಿರಾದರ, ಯುವ ಸ್ಪಂದನಾ ಸಮಾಲೋಚಕರಾದ ಭೀಮೇಶ ಕುರಿ, ಎನ್.ಎಸ್.ಎಸ್. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಲಲಿತಾ ಅಂಗಡಿ, ಮಾರುತೇಶ್ವರ ಯುವ ಸಾಂಸ್ಕೃತಿಕ ಸೇವಾ ಸಂಘದ ಕಾರ್ಯದಶರ್ಿ ಪುಷ್ಪವತಿ, ತಾಲ್ಲೂಕು ವರದಿಗಾರರಾದ ಫಕೀರಸ್ವಾಮಿ ಬಂಡಿನಿಂಗಪ್ಪನವರು, ಜಿಲ್ಲಾ ಸಂಘಟಕರು, ಭಾರತ ಸೇವಾದಲ್ನ ಬಸವನಗೌಡ ಮಾಲಿಪಾಟೀಲ್, ಸಂಪನ್ಮೂಲ ವ್ಯಕ್ತಿಗಳು ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ವನಿತಾ ಗಡದ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘದಗಳಿಂದ ಒಟ್ಟು 45 ಶಿಬಿರಾರ್ಥಿಗಳು  ಭಾಗವಹಿಸಿದ್ದರು. ಹಾಗೂ ರಾಷ್ಟ್ರೀಯ ಸೇವಾ ಕಾರ್ಯಕರ್ತರಾದ ಹುಲ್ಲಪ್ಪಾ ಗುರಿಕಾರ ಸ್ವಾಗತಿಸದರು. ಸಿದ್ದುಸ್ವಾಮಿ ನಿರೂಪಿಸಿದರು.