ಲೋಕದರ್ಶನ ವರದಿ
ಶಿರಹಟ್ಟಿ 01: ಕನ್ನಡ ಭಾಷೆಯು ತನ್ನದೇ ಆದ ಸಂಸ್ಕೃತಿ ಇತಿಹಾಸವನ್ನು ಹೊಂದಿದ್ದು, ಇಂಥಹ ಭಾಷೆಯ ರಕ್ಷಣೆ ಮಾಡಿ ಪೋಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಯುವ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಹಾಗೂ ಅವರ ಪುಸ್ತಕಗಳನ್ನು ಪ್ರಕಟಿಸಲು ಸಹಾಯಾರ್ಥವಾಗಿ ಸ್ವತಃ ಎಲ್ಲ ಪದಾಧಿಕಾರಿಗಳು ಸಾಹಿತಿಗಳ ಮನೆ ಮನೆಗೆ ಹೋಗಿ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದೇಶವಾಗಿದೆ ಎಂದು ಎಂ.ಕೆ ಲಮಾಣಿ ಹೇಳಿದರು.
ಇತ್ತೀಚೆಗೆ ಅವರು ತಾಲೂಕಿನ ಪರಸಾಪೂರ ಗ್ರಾಮದ ಹಿರಿಯ ಸಾಹಿತಿ ಮಹಾಂತೇಶ ಬೆರಗಣ್ಣವರ ಮನೆಯಲ್ಲಿ ನಡೆದ ಮನೆ ಅಂಗಳದಲ್ಲಿ ಸಾಹಿತ್ಯ ಕಲರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಹಿರಿಯ ಸಾಹಿತಿ ಮಹಾಂತೇಶ ಬೆರಗಣ್ಣವರ ಅವರು ಬರೆದ ಕಿಮ್ಮತ್ತಿನ ಮಾತುಗಳು ಎಂಬ ಪುಸ್ತಕದಲ್ಲಿ 1000ಕ್ಕೂ ಹೆಚ್ಚಿನ ಬರೆದಿದ್ದು, ಅವರು ಈ ರೀತಿಯ ಇನ್ನೂ ಹತ್ತು ಹಲವಾರು ಪುಸ್ತಕಗಳನ್ನು ಪ್ರಕಟಿಸುವ ಹಂತದಲ್ಲಿದ್ದು ಅವರ ಈ ಕನ್ನಡ ಸಾಹಿತ್ಯದ ಪರಿಶ್ರಮಕ್ಕೆ ಉತ್ತಮ ಅವಕಾಶ ಸಿಗಲಿ ಹಾಗೂ ಅವರ ಈ ಪರಿಶ್ರಮ ಇನ್ನೂ ಆಕಾಶದೆತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಸಾಪ ತಾಲೂಕಾಧ್ಯಕ್ಷರಾದ ಪ್ರೋ. ಫಕ್ಕೀರೇಶ ಅಕ್ಕಿ ನೆರವೇರಿಸಿ ಸಕರ್ಾರ ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗದೇ ಕನ್ನಡದ ಅಳಿವು ಉಳಿವಿಗಾಗಿ ಶ್ರಮಿಸಬೇಕೆಂದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರೋ. ಕೆ.ಎ ಬಳಿಗೇರ, ನಿವೃತ್ತ ಪ್ರಾಧ್ಯಾಪಕ ಎಚ್.ಎಂ ದೇವಗಿರಿ, ಎಫ್.ಎಂ ಹಳ್ಳೆಮ್ಮನವರ, ಎಸ್.ಎಲ್. ಮುಳಗುಂದ, ವಿ.ಆರ್ ಅರ್ಕಸಾಲಿ, ಹನಮಂತಪ್ಪ ವಡ್ಡರ, ಮಂಜುನಾಥ ಜೋಗಿ, ಮಾರುತಿ ಭಜಂತ್ರಿ, ಲಕ್ಷ್ಮವ್ವ ಈಳಗೇರ, ಗಂಗಾಧರ ಡೊಂಬರ, ಪಿ.ಎಚ್ ಬಂತಿ, ಜಿ.ಬಿ ಚಿಂಚಲಿ, ಎಸ್. ಎಫ್ ಬಡಭೀಮಪ್ಪನವರ ಇನ್ನೂ ಅನೇಕರು ಉಪಸ್ಥಿತರಿದ್ದರು.