ಐಡಿಯಾ-ವೋಡಫೋನ್ ವಿಲೀನ ಪ್ರಕ್ರಿಯೆ ಪೂರ್ಣ: ಏರ್ ಟೆಲ್ ನಂ.1 ಸ್ಥಾನಕ್ಕೆ ಕುತ್ತು!

ಐಡಿಯಾ ಸೆಲ್ಯುಲರ್ ಹಾಗೂ ವೋಡಫೋನ್ ಇಂಡಿಯಾ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟಾರೆ 408 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಭಾರತದ ದೊಡ್ಡ ಟೆಲಿಕಾಂ ಸೇವಾ ಪೂರೈಕೆ ಸಂಸ್ಥೆಯಾಗಿದೆ.  

ವೋಡಫೋನ್ ಐಡಿಯಾ  ಲಿಮಿಟೆಡ್ ಎಂಬ ಹೆಸರಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆಯಲ್ಲಿ 12 ನಿದರ್ೆಶಕರಿದ್ದು, ಕುಮಾರ್ ಮಂಗಲಂ ಬಿಲರ್ಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಜಂಟಿ ಹೇಳಿಕೆಯಿಂದ ತಿಳಿದುಬಂದಿದೆ. ಭಾರತ ಆದಾಯ ಮಾರುಕಟ್ಟೆಯಲ್ಲಿ ಶೇ.32.2 ರಷ್ಟನ್ನು ಐಡಿಯಾ-ವೋಡಫೋನ್ ಹೊಂದಿರಲಿದ್ದು, 9 ಟೆಲಿಕಾಂ ಸಂಸ್ಥೆಗಳ ಪೈಕಿ ಅಗ್ರಸ್ಥಾನ ಹೊಂದಿರಲಿವೆ ಎಂದು ವೋಡಫೋನ್ ಐಡಿಯಾ ಲಿಮಿಟೆಡ್ ಹೇಳಿದೆ.  

ಪ್ರಸ್ತುತ ಭಾತರ್ಿ ಏಟರ್ೆಲ್ ನಂ.1 ಸ್ಥಾನದಲ್ಲಿದ್ದು ಈಗ ಆ ಸ್ಥಾನವನ್ನು ವೋಡಫೋನ್ ಐಡಿಯಾ ಲಿ. ಪಡೆದುಕೊಳ್ಳಲಿದೆ.