ಸಿಎಎ-ಎನ್‌ಆರ್‌ಸಿ ವಿರುದ್ಧ ಐಯುಎಂಎಲ್ ಶಾಸಕನ ಉಪವಾಸ ನಿರಶನ

ಕೋಜಿಕೋಡ್,  ಜ 21 :       ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಶಾಸಕ ಎಂ ಕೆ ಮುನೀರ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಯನ್ನು ವಿರೋಧಿಸಿ ಮಂಗಳವಾರ  12 ಗಂಟೆಗಳ ಉಪವಾಸ  ಪ್ರಾರಂಭಿಸಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಇಲ್ಲಿನ  ಬೀಚ್‌ನಲ್ಲಿ ಉಪವಾಸ ಮುಷ್ಕರಕ್ಕೆ ಚಾಲನೆ ನೀಡಿದರು.

ಉಪವಾಸ ಸ್ಥಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನಾಯಕರು ಉಪಸ್ಥಿತರಿದ್ದರು.ಮುನೀರ್ ತಮ್ಮ ಉಪವಾಸವನ್ನು ಇಂದು ರಾತ್ರಿ 9ಗಂಟೆಗೆ  ಕೊನೆಗೊಳಿಸಲಿದ್ದಾರೆ.