ಲೋಕದರ್ಶನ ವರದಿ
ಬೆಳಗಾವಿ 18: ಇನ್ಸ್ಟಿಟ್ಯೂಟ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಕಂಪ್ಯೂಟರ್ ಮತ್ತು ಮೂಲಭೂತ ಕಂಪ್ಯೂಟರ್ ಕೌಶಲ್ಯಗಳ ಬಳಕೆಯ ಬಗ್ಗೆ ಗ್ರಾಮೀಣ ಸಕರ್ಾರಿ ಶಾಲೆಗಳ ವಿದ್ಯಾಥರ್ಿಗಳಿಗೆ ಶಿಕ್ಷಣ ನೀಡಲು ಕೆಎಲ್ಎಸ್ ದಿ.17 ರಂದು ಒಂದು ದಿನ ಐಟಿ ಸಾಕ್ಷರತಾ ಶಿಬಿರವನ್ನು ನಡೆಸಿತು. 21 ವಿದ್ಯಾಥರ್ಿಗಳೊಂದಿಗೆ ಐಟಿ ತಂಡವು ಮೂರು ಶಾಲೆಗಳನ್ನು ಒಳಗೊಂಡ ಉಚಾಗಾಂವ್ ಮತ್ತು ಕಲ್ಲೆಹೋಲ್ನಂತಹ ಗ್ರಾಮೀಣ ಸ್ಥಳಗಳಿಗೆ ಭೇಟಿ ನೀಡಿ ಗ್ರಾಮೀಣ ವಿದ್ಯಾಥರ್ಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಹನ ನಡೆಸಿ ಕಂಪ್ಯೂಟರ್ಗಳ ಮೂಲ ಅನ್ವಯಿಕೆಗಳ ಬಗ್ಗೆ ತರಬೇತಿ ನೀಡಿತು. ಈ ಘಟನೆಯಿಂದ 10 ಸಿಬ್ಬಂದಿಗಳನ್ನು ಹೊಂದಿರುವ ಸುಮಾರು 300 ವಿದ್ಯಾಥರ್ಿಗಳಿಗೆ ಅನುಕೂಲವಾಗಿದೆ.
ಈ ಚಟುವಟಿಕೆಯ ಉದ್ದೇಶ ಗ್ರಾಮೀಣ ಸಕರ್ಾರಿ ಶಾಲೆಗಳ ವಿದ್ಯಾಥರ್ಿಗಳಿಗೆ ಎಂಎಸ್- ವಡರ್್, ವಡರ್ಾ್ಪ್ಯಡ್, ಪೇಂಟ್, ಕ್ಯಾಲ್ಕುಲೇಟರ್ ಮತ್ತು ಇಂಟನರ್ೆಟ್ ಬ್ರೌಸಿಂಗ್, ಸೈಬರ್ ಸೆಕ್ಯುರಿಟಿ ಮುಂತಾದ ಮೂಲಭೂತ ಕಂಪ್ಯೂಟರ್ ಅಪ್ಲಿಕೇಶನ್ಗಳ ಬಗ್ಗೆ ಶಿಕ್ಷಣ ನೀಡುವುದು.
ಕೆಎಲ್ಎಸ್ ಐಎಂಇಆರ್ನ ಐಟಿ ತಂಡ, ಪ್ರೊ. ದೀಪಾ ಸೈಬನ್ನವರ್, ಸಪ್ನಾ ಕುಲಕಣರ್ಿ, ಸುಷ್ಮಾ ರಾವೂತ್ ಮತ್ತು ಆದಿತ್ಯ ನಾರಂಗ್ ಅವರು ಇಡೀ ಚಟುವಟಿಕೆಯನ್ನು ಸಂಘಟಿಸಿದರು. ಕೆಎಲ್ಎಸ್ ಐಎಂಇಆರ್ ನಿದರ್ೆಶಕ ಡಾ.ಅತುಲ್ ಆರ್. ದೇಶಪಾಂಡೆ ಅವರು ಶಿಬಿರಕ್ಕೆ ಸಿಬ್ಬಂದಿ ಮತ್ತು ಕೆಎಲ್ಎಸ್ ಐಎಂಇಆರ್ ವಿದ್ಯಾಥರ್ಿಗಳನ್ನು ಪ್ರೆರೇಪಿಸಿದರು.