ಐಎಸ್ಎಲ್: ಎಟಿಕೆ ಸೇರಿದ ದೇಶೀಯ ಇಬ್ಬರು ಆಟಗಾರರು

ಕೊಲ್ಕತಾ, ಆ 24     ಇಂಡಿಯನ್ ಸೂಪರ್ ಲೀಗ್ ಫ್ರಾಂಚೈಸಿ ಎಟಿಕೆ ತಂಡ ಇಬ್ಬರು ದೇಶೀಯ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ. ಐದು ವರ್ಷಗಳಿಗೆ ಧೀರಜ್ ಸಿಂಗ್ ಮತ್ತು ಒಂದು ವರ್ಷಕ್ಕೆ ಸೆಹ್ನಾಜ್ ಸಿಂಗ್ ಅವರು ಸಹಿ ಮಾಡಿದ್ದಾರೆ. ಧೀರಜ್ ಸಿಂಗ್ ಗೋಲ್ ಕೀಪರ್ ಆಗಿ ಆಡಿದರೆ, ಸೆಹ್ನ್ರಾಜ್  ಸಿಂಗ್ ಅವರು ಮಿಡ್ಫೀಲ್ಡರ್ ಆಗಿ ಕಣಕ್ಕೆ ಇಳಿಯಲಿದ್ದಾರೆ.  19ರ ಪ್ರಾಯದ ಧೀರಜ್ ಸಿಂಗ್ ಅವರು 2017ರ 17 ವಯೋಮಿತಿ ಫಿಫಾ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. ಇದಾದ ಬಳಿಕೆ ಧೀರಜ್ ಭಾರತ ಏರೋಸ್ ತಂಡಕ್ಕೆ ಆಡಿದ್ದರು. 2018-19ರ ಇಂಡಿಯನ್ ಪ್ರೀಮಿಯರ್ ಋತುವಿನಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ, ಮುಂಬರುವ ಆವೃತ್ತಿಯಲ್ಲಿ ಧೀರಜ್ ಸಿಂಗ್ ಎಟಿಕೆ ತಂಡದ ಜೆಸರ್ಿಯಲ್ಲಿ ಕಾಣಲಿದ್ದಾರೆ. ಗುರುದಾಸ್ಪುರ್ ಫುಟ್ಬಾಲ್ ಅಕಾಡೆಮಿ ಹಾಗೂ ಚಡೀಗಢ ಫುಟ್ಬಾಲ್ ಅಕಾಡೆಮಿಯಿಂದ ಬೆಳಕಿಗೆ ಬಂದ ದೇಶದ ಪ್ರತಿಭಾವಂತ ಯುವ ಫುಟ್ಬಾಲ್ ಆಟಗಾರ ಸೆಹ್ನರಾಜ್ ಸಿಂಗ್, ಐ-ಲೀಗ್ ಟೂರ್ನಿಯಲ್ಲಿ ಇಂಡಿಯನ್ ಏರೋಸ್ ತಂಡದ ಪರ ಆಡಿದ್ದರು. 2014-15 ರ ಆವೃತ್ತಿಯಲ್ಲಿಯೂ ಅವರು ಮೊಹುನ್ ಬಾಗನ್ ಪರ ಆಡಿದ್ದರು.  2015ರ ಇಂಡಿಯನ್ ಸೂಪರ್ ಲೀಗ್ನಲ್ಲಿ  ಡೆಲ್ಲಿ ಡೈನಾಮೋಸ್ ಪರ ಸೆಹ್ನಾಜ್ ಆಡಿದ್ದರು.  ಐಎಸ್ಎಲ್ನಲ್ಲಿ ಮುಂಬೈ ಸಿಟಿ ಎಫ್ಸಿ ಪರವೂ ಅವರು ಆಡಿದ್ದರು. ಈ ಬಾರಿ ಅವರು ಎಟಿಪಿ ತಂಡದ ಪದ ಕಣಕ್ಕೆ ಇಳಿಯಲಿದ್ದಾರೆ.