ನವದೆಹಲಿ, ಏ. 7, ಕೊರೊನಾ ವೈರಸ್ ಭೀತಿಯಿಂದ ಓಲಿಂಪಿಕ್ಸ್ ನಂತಹ ದೊಡ್ಡ ಕ್ರೀಡೆ ಮುಂದೂಡಲ್ಪಟ್ಟಿವೆ. ವಿಶ್ವದ ದೊಡ್ಡ ಕ್ರಿಕೆಟ್ ಲೀಗ್ ಎಂದೇ ಪ್ರಸಿದ್ಧವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೇಲೂ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಮಾರ್ಚ್ 29 ರಿಂದ ಆರಂಭವಾಗಬೇಕಿದ್ದ ಐಪಿಎಲ್ ಏಪ್ರಿಲ್ 15ರ ವರೆಗೆ ಮುಂದೂಡಲಾಗಿದೆ. ಈ ಬಗ್ಗೆ ಟರ್ಬನೇಟರ್ ಹರ್ಭಜನ್ ಸಿಂಗ್ ಅವರು ಈ ಬಗ್ಗೆ ತುಟಿ ಬಿಚ್ಚಿದ್ದಾರೆ. ಪರಿಸ್ಥಿತಿಗಳು ತಿಳಿಯಾದ ಬಳಿಕ ಐಪಿಎಲ್ ಟೂರ್ನಿ ಆಯೋಜಿಸಬೇಕು. ಇನ್ನು ಕೋವಿಡ್-19 ಹತೋಟಿಗೆ ಬಂದಾಗಲೂ ಖಾಲಿ ಮೈದಾನದಲ್ಲಿ ನಡೆಸಬೇಕು ಖಾಲಿ ಮೈದಾನದಲ್ಲಿ ನಡೆಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಭಾರತೀಯ ಆಫ್ ಸ್ಪಿನ್ನರ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ಸದಸ್ಯ ಹರ್ಭಜನ್ ಸಿಂಗ್ ಮಾತನಾಡಿ, ಅಭಿಮಾನಿಗಳ ಆರೋಗ್ಯ ಮುಖ್ಯ. ಪರಿಸ್ಥಿತಿ ಸುಧಾರಿಸಿದರೂ ಪ್ರೇಕ್ಷಕರಿಲ್ಲದೆ ಆಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಅಭಿಮಾನಿಗಳು ಟಿವಿಯಲ್ಲಿ ಪಂದ್ಯ ನೋಡಿ ಖುಷಿ ಪಡಬಹುದು ಎಂದಿದ್ದಾರೆ. ಶೀಘ್ರವಾಗಿ ಐಪಿಎಲ್ ಆರಂಭವಾಗುವ ಬಗ್ಗೆ ಭಜ್ಜಿ ತಿಳಿಸಿದ್ದಾರೆ.