ಐಪಿಎಲ್ ಹರಾಜು: ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಗೆ 10.75 ಕೋಟಿ, ಉತ್ತಪ್ಪಗೆ ಮೂರು ಕೋಟಿ

ಕೋಲ್ಕತ್ತಾ, ಡಿ.19 ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆಟಗಾರ ಹರಾಜು ಪ್ರಕ್ರಿಯೆಯಲ್ಲಿ ಎಲ್ಲ ಮಾಲೀಕರ ಚಿತ್ತ ಕದ್ದಿದ್ದ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ ವೆಲ್ ಗೆ ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಹಣದ ಹೊಳೆಯನ್ನೆ ಹರಿಸಿದರು. ಅಂತಿಮವಾಗಿ ಜಿದ್ದು ಗೆದ್ದ   2 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗಿಳಿದಿದ್ದ ಗ್ಲೇನ್ ಮ್ಯಾಕ್ಸ್ ವೆಲ್ ಅವರ ಹೆಸರು ಕೇಳುತ್ತಿದ್ದಂತೆ ಮಾಲೀಕರು ಈ ಆಟಗಾರನನ್ನು ಕೊಂಡುಕೊಳ್ಳಲು ಪ್ಲಾನ್ ಮಾಡಿಕೊಂಡವು. ಅದರಂತೆ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸ್ಟಾರ್ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಣವನ್ನು ಹೂಡಿದರು. ಹಣದ ಹೊಳೆಯನ್ನೇ ಹರಿಸಿದ ಡೆಲ್ಲಿ ಹಾಗೂ ಪಂಜಾಬ್ ತಂಡಗಳು ಶತಾಯ ಗತಾಯ ಗ್ಲೇನ್ ರನ್ನು ಪಡೆಯಲು ಸಿದ್ಧವಾದವು. ಆದರೆ ಅಂತಿಮ ಹಂತದ ವರೆಗೂ ಹಿಂದೆ ಸರಿಯದ ಪಂಜಾಬ್  10.75 ಕೋಟಿ ರೂಪಾಯಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು.   ಹೆಸರು  ಕೋಟಿ ರೂ.  ತಂಡ  ಕ್ರಿಸ್ ವೋಕ್ಸ್   1.5    ಡೆಲ್ಲಿ ಕ್ಯಾಪಿಟಲ್ಸ್   ಕ್ರಿಸ್ ಲೈನ್    2 ಮುಂಬೈ ಇಂಡಿಯನ್ಸ್   ಇಯಾನ್ ಮಾರ್ಗನ್ 5.25   ಕೆಕೆಆರ್  ಜೇಸನ್ ರಾಯ್   1.5   ಡೆಲ್ಲಿ ಕ್ಯಾಪಿಲ್ಸ್   ರಾಬಿನ್ ಉತ್ತಪ್ಪ  3    ರಾಜಸ್ಥಾನ ರಾಯಲ್ಸ್ ಏರಾನ್ ಫಿಂಚ್    4.4   ರಾಯಲ್ ಚಾಲೆಂಜರ್ಸ್ ಬೆಂಗಳೂರು