ಕೋಲ್ಕತಾ, ಡಿ 19 : ಭಾರತದ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ವೆಸ್ಟ್ ಇಂಡೀಸ್ ತಂಡ ಆರಂಭಿಕ ಬ್ಯಾಟ್ಸ್ಮನ್ ಶಾಯ್ ಹೋಪ್ ಹಾಗೂ ದಕ್ಷಿಣ ಆಫ್ರಿಕಾದ ಹಿರಿಯ ವೇಗಿ ಡೇಲ್ ಸ್ಟೈನ್ ಅವರನ್ನು ಫ್ರಾಂಚೈಸಿಗಳು ಖರೀದಿಸುವಲ್ಲಿ ಹಿಂದೇಟು ಹಾಕಿದವು. ಪರಿಣಾಮ ಅವರ ಅನ್ಸೋಲ್ಡ್ ಆದರು. ಜತೆಗೆ, ಬಾಂಗ್ಲಾದೇಶ ನಾಯಕ ಮುಷ್ಪಿಕರ್ ರಹೀಮ್ ಹಾಗೂ ಶ್ರೀಲಂಕಾದ ಕುಸಾಲ್ ಪೆರೆರಾ ಅವರು ಅನ್ ಸೋಲ್ಡ್ ಆದರು.
ಪ್ರಸಕ್ತ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಲಯದಲ್ಲಿರುವ ವೆಸ್ಟ್ ಇಂಡೀಸ್ ತಂಡದ ಶಾಯ್ ಹೋಪ್ ಅವರನ್ನು ಯಾವುದೇ ತಂಡಗಳು ಖರೀದಿಸಲು ಮುಂದಾಗಲಿಲ್ಲ. ಇವರು ಭಾರತದ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಅಜೇಯ 102 ರನ್ ಹಾಗೂ ಎರಡನೇ ಪಂದ್ಯದಲ್ಲಿ 78 ರನ್ ಗಳಿಸಿದ್ದರು. ಭಾರತದ ನಮನ್ ಓಜಾ ಅವರು ಕೂಡ ಅನ್ಸೋಲ್ಡ್ ಆದರು.
ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಝಂಪಾ, ನ್ಯೂಜಿಲೆಂಡ್ ಇಶ್ ಸೋಧಿ ಕೂಡ ಅನ್ಸೋಲ್ಡ್ ಆದರು.