ಐಎಂಎಫ್: ಭಾರತ ಜಗತ್ತಿನಲ್ಲೇ ವೇಗಗತಿಯ ಆಥರ್ಿಕತೆಯ ದೇಶ


ನವದೆಹಲಿ 08: ಭಾರತ ಈಗಲೂ ಜಗತಿನಲ್ಲೇ ಅತಿ ವೇಗಗತಿಯ ಆಥರ್ಿಕತೆ ಹೊಂದಿರುವ ದೇಶವಾಗಿದೆ ಎಂದು ಅಂತಾರಾಷ್ಟ್ರೀಯ ಆಥರ್ಿಕ ನಿಧಿ ಹೇಳಿದೆ.  

2019 ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಐಎಂಎಫ್ ಈ ರೀತಿಯಲ್ಲಿ ಹೇಳಿರುವುದು ನರೇಂದ್ರ ಮೋದಿ ನೇತೃತ್ವದ ಸಕರ್ಾರಕ್ಕೆ ವರದಾನವಾಗಲಿದೆ. ಭಾರತದ ಆಥರ್ಿಕತೆ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿರುವ ಐಎಂಎಫ್, ಸಕರ್ಾರದ ಸುಧಾರಣಾ ಕ್ರಮಗಳಿಂದಾಗಿ ಭಾರತ ಈಗಲೂ ಜಗತ್ತಿನಲ್ಲೇ ವೇಗಗತಿಯ ಆಥರ್ಿಕತೆ ಹೊಂದಿರುವ ದೇಶವಾಗಿದೆ ಎಂದು ಹೇಳಿದೆ.  

2018-19 ನೇ ಸಾಲಿನಲ್ಲಿ ಭಾರತದ ಜಿಡಿಪಿಯನ್ನು ಶೇ.7.3 ರಿಂದ ಶೇ. 7.5 ರಷ್ಟಕ್ಕೆ ಐಎಂಎಫ್ ಅಂದಾಜಿಸಿದೆ. ಭಾರತದ ಆಥರ್ಿಕತೆ ವೇಗವಾಗಿ ಬೆಳವಣಿಗೆ ಯಾಗುತ್ತಿದೆಯಾದರೂ ಏರುತ್ತಿರುವ ತೈಲ ಬೆಲೆ, ರೂಪಾಯಿ ಮೌಲ್ಯದ ಕುಸಿತದ ಬಗ್ಗೆ ಐಎಂಎಫ್ ಎಚ್ಚರಿಕೆ ನೀಡಿದೆ.