ಐಸಿಸಿ ಟೆಸ್ಟ್‌ ಶ್ರೇಯಾಂಕ: ಅಗ್ರ ಸ್ಥಾನದ ಸನಿಹದಲ್ಲಿ ವಿರಾಟ್ ಕೊಹ್ಲಿ

kohli

ದುಬೈ, ನ 26: ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಹೊನಲು-ಬೆಳಕಿನ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಮಂಗಳವಾರ ಬಿಡುಗಡೆಯಾದ ಐಸಿಸಿ ಟೆಸ್ಟ್‌ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ನಡುವಿನ ಅಂತರ ಕಡಿಮೆ ಮಾಡಿಕೊಂಡಿದ್ದಾರೆ. ಕಳೆದ ಸರಣಿಯಲ್ಲಿ ಸಂಘಟಿತ ಪ್ರದರ್ಶನ ತೋರಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಅಗ್ರ 10ರೊಳಗೆ ಚೊಚ್ಚಲ ಪದಾರ್ಪಣೆ ಮಾಡಿದ್ದಾಾರೆ. ಇದರೊಂದಿಗೆ ವೃತ್ತಿ ಜೀವನದ ಶ್ರೇಷ್ಠ  ಶ್ರೇಯಾಂಕ ಪಡೆದಿದ್ದಾರೆ.

ಬಾಂಗ್ಲಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ 136 ರನ್ ಸಿಡಿಸಿದ ಕೊಹ್ಲಿ (928 ಅಂಕಗಳು), ಸ್ಟೀವ್ ಸ್ಮಿತ್ (931 ಅಂಕಗಳು) ಅವರೊಂದಿಗೆ 25 ರಿಂದ ಕೇವಲ ಮೂರು ಅಂಕಗಳ ಅಂತರಕ್ಕೆೆ ತಲುಪಿ ಎರಡನೇ ಸ್ಥಾನದಲ್ಲಿದ್ದಾರೆ.

ಇಂದೋರ್ ಟೆಸ್ಟ್‌ ಪಂದ್ಯದಲ್ಲಿ ವೃತ್ತಿ ಜೀವನದ ಎರಡನೇ ದ್ವಿಶತಕ ಸಿಡಿಸಿದ ಮಯಾಂಕ್ ಅಗರ್ವಾಲ್, 700 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡು ಒಂದು ಸ್ಥಾನ ಜಿಗಿದು 10ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಇದರೊಂದಿಗೆ ಅಗ್ರ 10ರೊಳಗಿರುವ ಐದನೇ ಬ್ಯಾಟ್ಸ್‌‌ಮನ್ ಎಂಬ ಗೌರವ ಕನ್ನಡಿಗನಿಗೆ ದೊರೆಯಿತು.

ಚೇತೇಶ್ವರ ಪೂಜಾರ (791) ಹಾಗೂ ಅಜಿಂಕ್ಯ ರಹಾನೆ (759) ಅವರು ಕ್ರಮವಾಗಿ ನಾಲ್ಕು ಐದನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 91 ಹಾಗೂ 28 ರನ್ ಗಳಿಸಿದ ಇಂಗ್ಲೆೆಂಡ್ ತಂಡ ಸ್ಟಾಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಮೂರು ಸ್ಥಾನಗಳು ಜಿಗಿಯುವ ಮೂಲಕ ಮೊಟ್ಟ ಮೊದಲ ಬಾರಿ ಅಗ್ರ 10ರೊಳಗೆ ಪದಾರ್ಪಣೆ ಮಾಡಿದರು. ಪಿಂಕ್ ಟೆಸ್ಟ್‌ ನಲ್ಲಿ 74 ರನ್ ಗಳಿಸಿದ ಬಾಂಗ್ಲಾದೇಶದ ಮುಷ್ಫಿಕರ್ ರಹೀಮ್ ಅವರು ನಾಲ್ಕು ಸ್ಥಾನಗಳಲ್ಲಿ ಏರಿಕೆ ಕಂಡು 26ನೇ ಶ್ರೇಯಾಂಕ ಪಡೆದರೆ, ನ್ಯೂಜಿಲೆಂಡ್‌ನ ಲಿಟನ್ ದಾಸ್ ಎಂಟು ಸ್ಥಾನಗಳನ್ನು ಜಿಗಿದು 78ನೇ ಶ್ರೇಯಾಂಕ ಪಡೆದರು.