ನೊಂದವರಿಗೆ ಪ್ರಾಮಾಣಿಕ ಸೇವೆ ನೀಡಲು ಪ್ರಯತ್ನಿಸುವೆ : ಅನಿಲ ಮುಳವಾಡಮಠ

ಬೆಳಗಾವಿ, 1: ಬೆಳಗಾವಿ ಜಿಲ್ಲೆಯಲ್ಲಿ ಸದೃಢವಾದ ನ್ಯಾಯವಾದಿಗಳ ಸಂಘ ಮರು ಸ್ಥಾಪನೆ ಮಾಡಿ ನೊಂದವರಿಗೆ ಹಾಗೂ ನಿರ್ಗತಿಕರಿಗೆ ನ್ಯಾಯ ಒದಗಿಸಿಕೊಡುವ ಪ್ರಯತ್ನ ಪ್ರಾಮಾಣಿವಾಗಿ ಮಾಡುವೆ ಎಂದು ಬಾರ್ ಅಸೋಸಿಯೇಷನ್ ನೂತನ ಅಧ್ಯಕ್ಷ ಅನಿಲ್ ಮುಳವಾಡಮಠ ಹೇಳಿದರು.

ಗುರುವಾರ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯ ಆಶೀವರ್ಾದ ಪಡೆದು ಮಾತನಾಡಿದರು. ನ್ಯಾಯವಾದಿಗಳ ಸಮಸ್ಯೆ ಏನು ಎಂಬುದನ್ನು ಅರ್ಥ ಮಾಡಿಕೊಂಡು ಒಂದು ಸದೃಢವಾದ ನ್ಯಾಯವಾದಿಗಳ ಸಂಘವನ್ನು ಮರು ಸ್ಥಾಪನೆ ಮಾಡಿ ಇದರಿಂದ ಸಾರ್ವಜನಿಕ ಕ್ಷೇತ್ರದಲ್ಲಿ ನೊಂದವರು ನ್ಯಾಯವಾದಿಗಳ ಹತ್ತಿರ ಬಂದಾಗ ಅವರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗುವುದು ಯಾವುದೇ ಒಂದು ಹುದ್ದೆ ಅಲಂಕರಿಸುವುದರ ಸಲುವಾಗಿ ಅಲ್ಲ. ಸಾರ್ವಜನಿಕರ ಸಲುವಾಗಿ ನ್ಯಾಯವಾದಿಗಳು ಯಾವ ರೀತಿ ಸೇವೆ ಸಲ್ಲಿಸಬೇಕು. ಶಾರೀರಿಕ, ಆಥರ್ಿಕ, ಸಾಮಾಜಿಕವಾಗಿ ಸದೃಢವಾಗಿರಬೇಕು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರೀರಕ್ಷೆಯಿರುವುದರಿಂದ ನಾನು ಈ ಹುದ್ದೆ ಏರಲು ಸಾಧ್ಯವಾಯಿತು. ಆದ್ದರಿಂದ ಸಾರ್ವಜನಿಕ ಕ್ಷೇತ್ರದಲ್ಲಿ ನೊಂದವರು, ಬಡವರು, ನಿರ್ಗತಿಕರಿಗೆ ನ್ಯಾಯವಾದಿಗಳ ಸಂಘದಿಂದ ಮಾಡುವುದಾಗಿ ಭರವಸೆ ನೀಡಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಳಗಾವಿ ಜಿಲ್ಲೆಯ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿ ಅನಿಲ್ ಮುಳವಾಡಮಠ ಆಯ್ಕೆಯಾಗಿರುವುದು ಅಭಿಮಾನದ ಸಂಗತಿ.  ಬೆಳಗಾವಿ ಜಿಲ್ಲೆ ಕನರ್ಾಟಕದ ಎರಡನೇ ರಾಜಧಾನಿ ಎಂದು ಘೋಷಣೆಯಾಗಿದೆ. ಅಲ್ಲದೆ ಹಿಂದಿನ ಸರಕಾರದಲ್ಲಿ ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧಕ್ಕೆ 9 ಸರಕಾರಿ ಕಚೇರಿಯನ್ನು ಸ್ಥಳಾಂತರ ಮಾಡುವುದಾಗಿ ಘೋಷಣೆ ಮಾಡಿಯಾಗಿದೆ. ಆದರೆ ಈ ಕುರಿತು ಇಲ್ಲಿಯವರೆಗೂ ಯಾರು ಚಕಾರ ಎತ್ತುತ್ತಿಲ್ಲ. ಈ ದೃಷ್ಟಿಕೋನದಿಂದ ಅನಿಲ್ ಮುಳವಾಡಮಠ ಅವರು ಇದಕ್ಕೆ ಹೆಚ್ಚಿನ ಒತ್ತು ನೀಡಿ ಜಿಲ್ಲಾ ಮತ್ತು ಈ ಭಾಗವನ್ನು ಅಭಿವೃದ್ಧಿಯನ್ನಾಗಿಸುವ ಕೆಲಸ ಮಾಡಲಿ. ನ್ಯಾಯವಾದಿಯಾಗಿಯೂ  ಹೆಚ್ಚು ಹೆಚ್ಚಾಗಿ ಸಮಾಜ ಮುಖಿ ಕೆಲಸ ಮಾಡುವಂತಾಗಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿ ಎಂ.ವಿ.ಹಿರೇಮಠ, ಅರವಿಂದ ಜೋಶಿ, ವೀರುಪಾಕ್ಷಯ್ಯ ನಿರಲಗಿಮಠ, ಡಾ.ನಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.