ಹಿರಿಯ ಅಧಿಕಾರಿಗಳಿಂದ ಪ್ರಗತಿ ಪರೀಶೀಲನೆ ಮಾಡಿಸಿ ಚುರುಕು ಮುಟ್ಟಿಸುತ್ತೇನೆ : ಪಠಾಣ

I will speed things up after reviewing the progress by senior officials: Pathan

 ಹಿರಿಯ ಅಧಿಕಾರಿಗಳಿಂದ ಪ್ರಗತಿ ಪರೀಶೀಲನೆ ಮಾಡಿಸಿ ಚುರುಕು ಮುಟ್ಟಿಸುತ್ತೇನೆ : ಪಠಾಣ  

ಶಿಗ್ಗಾವಿ 25: ತಾಲೂಕಿನ ಆಡಳಿತ ವ್ಯವಸ್ಥೆಯಲ್ಲಿ ಮತ್ತು  ಕಾಮಗಾರಿಗಳಲ್ಲಿ ಪ್ರಗತಿಗೆ ಬಹಳಷ್ಟು ಸಮಸ್ಯೆಗಳಿದ್ದು ಕೆಲ ಇಲಾಖೆಗಳ ಪ್ರಗತಿಯನ್ನು ಪರೀಶೀಲಿಸಲು ಹಿರಿಯ ಅಧಿಕಾರಿಗಳ ನಿಯೋಗದ ಮೂಲಕ ಪ್ರಗತಿ ಪರೀಶೀಲನೆ ಮಾಡಿ ಚುರುಕು ಮುಟ್ಟಿಸಲಾಗುವುದು ಎಂದು ಶಾಸಕ ಯಾಸೀರಖಾನ ಪಠಾಣ ಅಧಿಕಾರಿಗಳಿಗೆ ಎಚ್ಚರಿಸಿದರು. 

       ಪಟ್ಟಣದ ತಾಪಂ ಸಭಾಭವನದಲ್ಲಿ ಆಯೋಜಿಸಿದ ತಾಲೂಕುಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ ಕಾಮಗಾರಿಗಳ ಪ್ರಗತಿ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಕೆಡಿಪಿ ಸಭೆಯನ್ನು ನಿರ್ಲಕ್ಷಿಸುವ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ದ್ರೋಹ ಮಾಡಿದಂತೆ ತ್ರೈಮಾಸಿಕ ಸಭೆಯನ್ನು ಮಾಡುವ ಮೂಲಕ ತಾಲೂಕಿನ ಅಭಿವೃದ್ದಿ ಕಾಮಗಾರಿಗಳು ಮತ್ತು ಆಡಳಿತ ವ್ಯವಸ್ತೆಯನ್ನು ಉತ್ತಮಗೊಳಿಸುವ ಮೂಲಕ ಸಾರ್ವಜನಿಕರಿಗೆ ಸರ್ಕಾರಿ ಸೇವೆ ತ್ವರಿತ ಗತಿಯಲ್ಲಿ ಮುಟ್ಟಿಸುವ ಉದ್ದೇಶವನ್ನು ಹೊಂದಿದ್ದೇನೆ ಎಂದರು.  

ಪ್ರತಿಯೊಂದು ಇಲಾಖೆಗಳ ಸರ್ಕಾರದ ಹೊಸ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಬೇಕು. 

ಆರೋಗ್ಯ ಇಲಾಖೆಯಲ್ಲಿ ಸಮಿತಿಯ ಸಭೆಗಳು ನಿರಂತರವಾಗಿ ನಡೆಯಬೇಕು, ಶಾಲೆಗಳ ಶೌಚಾಲಯಗಳ ಸ್ವಚ್ಚತೆ ಕಾಪಾಡುವಲ್ಲಿ ಗ್ರಾಪಂಗಳು ಕೈಜೋಡಿಸಬೇಕು, ಪುರಸಭೆಗಳು ಕೊಳಚೆ ಪ್ರದೇಶಗಳತ್ತ ಹೆಚ್ಚಿನ ಗಮನ ನೀಡಬೇಕು. ಸರ್ಕಾರಿ ಶಾಲೆಗಳ ಶಿಕ್ಷಕರು ಮೆರಿಟ್ ಅಲ್ಲಿ ಆಯ್ಕೆಯಾಗಿ ಶಿಕ್ಷಕ ವೃತ್ತಿ ಪಡೆದಿರುತ್ತಾರೆ. ಆದರೆ ಅವರ ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ಹೊರತೆಗೆಯುವಲ್ಲಿ ವಿಫಲರಾಗಿದ್ದಾರೆ. ಗರಿಷ್ಟ ಸಂಬಳ ಪಡೆದು ಕನಿಷ್ಟ ಸೇವೆ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದ್ದು, ತಾಲೂಕಿನಲ್ಲಿ ಬಹುತೇಕ ಶಿಕ್ಷಕರು ಎಲ್‌.ಐ.ಸಿ ಏಜೆಂಟರಾಗಿದ್ದು, ಗುಂಪುಗಳನ್ನು ಕಟ್ಟಿಕೊಂಡು ರಾಜಕೀಯ ಮಾಡುವುದರಿಂದ ಸರ್ಕಾರಿ ಶಾಲೆಯ ಮಕ್ಕಳು ಜಾಗತಿಕ ಸ್ಪರ್ದೇಯಲ್ಲಿ ಯಶಸ್ಸು ಕಾಣುತ್ತಿಲ್ಲಾ. 

   ನರೇಗಾ ಯೋಜನೆಯ ಕಾಮಗಾರಿಗಳ ಪ್ರಗತಿ ಕುಂಟಿತವಾಗಿದ್ದು, ಚುರುಕು ಪಡೆಯಬೇಕಾಗಿದೆ. ಹುಲಗೂರ ಗ್ರಾಮಕ್ಕೆ ಮೌಲಾನಾ ಆಜಾದ ಶಾಲೆಯನ್ನು ಸರ್ಕಾರ ನೀಡಿದ್ದು ಅಧಿಕಾರಿಗಳ ನಿರ್ಲಕ್ಷದಿಂದ ನಿವೇಶನ ನಿಗದಿಯಾಗಿಲ್ಲಾ, ಅಂಗನವಾಡಿ ಕಟ್ಟಡಗಳನ್ನು ಕಟ್ಟಲು ನಿವೇಶನಗಳನ್ನು ಹುಡುಕಲು ನಿಯೋಗವನ್ನು ಮಾಡಲಾಗುತ್ತದೆ. ಶಾಲಾ ಆವರಣಗಳ ಪಕ್ಕದಲ್ಲಿರುವ ಟಿಸಿಗಳನ್ನು ಹೆಸ್ಕಾಂ ಇಲಾಖೆ ಸ್ಥಾಳಾಂತರಿಸಬೇಕು ಮತ್ತು ರೈತರ ಹೊಸ ಬೋರವೆಲ್ಲಗಳಿಗೆ ತೊಂದರೆಯಾಗದಂತೆ ಟಿಸಿ ಸಾಮರ್ಥ್ಯವನ್ನು ಹೆಚ್ಚಿಸಬೇಕು. ತೋಟಗಾರಿಕಾ ಇಲಾಖೆಯಲ್ಲಿ ಪ್ರಧಾನಮಂತ್ರಿ ಸಿಂಚಾಯಿ ಯೋಜನೆಯಲ್ಲಿ 1.13 ಕೋಟಿ ಹಣವಿದ್ದು, ಇಲಾಖೆ ಸರಿಯಾದ ಫಲಾನುಭವಿಗಳನ್ನು ಹುಡುಕಿ ಯೋಜನೆಯನ್ನು ತಲುಪಿಸದಕಾರಣ 48.72 ಲಕ್ಷ ಮಾತ್ರ ಬಳಕೆಯಾಗಿದೆ. ವಿಮೆ ವಿಷೆಯದಲ್ಲಿ ಕೆಲವು ವ್ಯಕ್ತಿಗಳು ರೈತರನ್ನು ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದು ಕೃಷಿ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲಾ ಎಂದರು. 

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹ್ಮದ ಖಿಜರ, ತಹಶೀಲ್ದಾರ ಮಲ್ಲಿಕಾರ್ಜುನ, ಇಓ ಕುಮಾರ ಮಣ್ಣವಡ್ಡರ, ಎಸ್‌.ಎಪ್‌.ಮಣಕಟ್ಟಿ, ಗುಡ್ಡಪ್ಪಾ ಜಲದಿ, ಬಾಬರ ಬಾವೂಜಿ, ಪರಶುರಾಮ ಕಟ್ಟೆಪ್ಪನವರ, ಬಸವರಾಜ ರಾಗಿ, ಕವಿತಾ ಮಲ್ಲಾಪುರ ಇತರರಿದ್ದರು. ಪ್ರಕಾಶ ಓಂಧಕರ ಸ್ವಾಗತಿಸಿದರು.