ಸರ್ಕಾರ ನೀಡಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತನದಿಂದ ನಿಭಾಯಿಸುವೆ: ಕೀರ್ತಿ
I will handle the responsibility given by the government with utmost honesty: Keerthi
ಲೋಕದರ್ಶನ ವರದಿ
ಡಾ. ಬೆಳಗಲಿ ನಿವಾಸದಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶರಿಗೆ ಸನ್ಮಾನ
ಮಹಾಲಿಂಗಪುರ 10: ಸರ್ಕಾರ ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ಸ್ಥಾನ ನೀಡಿ ಮತ್ತು ಸಚಿವ ಸ್ಥಾನ ಮಾನ ನೀಡಿ ಗೌರವಿಸಿದ್ದಕ್ಕೆ ನಾನು ಅವರಿಗೆ ಚರಖುಣಿಯಾಗಿದ್ದೇನೆ. ಅಷ್ಟೆ ಅಲ್ಲದೆ ನನ್ನಗೆ ಕೊಟ್ಟ ಈ ಜವಾಬ್ದಾರಿಯನ್ನು ಯಾವುದೆ ಆಸೆ ಆಮಿಶಗಳಿಗೆ ಒಳಗಾಗದೆ, ಪಕ್ಷದ ನಿಷ್ಟೆ ಮತ್ತು ಪ್ರಾಮಾಣಿಕತೆಯನ್ನು ಉಳಿಸಿಬೆಳೆಸಲು ನನ್ನ ಕೈಲಾದ ಪ್ರಯತ್ನ ಮಾಡುವೆ ಎಂದು ದೇವರಾಜ ಅಭಿವೃದ್ದಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ ಹೇಳಿದರು.
ಡಾ. ಎ.ಆರ್. ಬೆಳಗಲಿಯವರ ನಿವಾಸದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ದೇವರಾಜ ನಿಗಮದಿಂದ ಬರುವ ಯೋಜನೆಗಳನ್ನು ಸರಿಯಾದ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸದೊಂದಿಗೆ , ಕಾಂಗ್ರೆಸ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದನಾಗಿ ನಡೆದುಕೊಳ್ಳುತ್ತೇನೆ. ಅಲ್ಲದೆ ದೇವರಾಜ ಅರಸು ನಿಗಮದಿಂದ ಬರುವ ಎಲ್ಲ ಯೋಜನೆಗಳು ಸಹ ಎಲ್ಲ ಸಮಾಜದ ಕಟ್ಟಕಡೆಯ ವ್ಯೆಕ್ತಿಗಳಿಗೂ ಮುಟ್ಟಿಸುವ, ಮತ್ತು ಅವುಗಳನ್ನು ಸರಿಯಾಗಿ ಅನುಷ್ಠಾನಗೋಳಿಸುವ ಪ್ರಾಮಾಣಿಕ ಪ್ರಯತ್ನ ನಾನು ಮಾಡುವೆ ಎಂದರು.
ನಂತರ ಮಾತನಾಡಿದ ಡಾ. ಎ.ಆರ್. ಬೆಳಗಲಿ ಯಾವುದೇ ಹುದ್ದೆಗಳು ಸರಿಯಾಗಿ ಬಳಕೆಯಾಗಬೇಕಾದರೆ ಯುವಕರಿಂದ ಸಾಧ್ಯ. ಇಂಥ ಯುವಮನಿಗಳಿಂದ ಪಕ್ಷ ಸಂಘಟನೆಯ ಜೋತೆಗೆ ಎಲ್ಲ ಕಾರ್ಯಗಳನ್ನು ಎಲ್ಲರೋಳಗೊಂದಾಗಿ ಮಾಡುವ ಯುವಕರಿಂದ ಮಾತ್ರ ದೇಶದ ಅಭಿವೃದ್ದಿ ಸಾದ್ಯ. ಕೀತಿ ಗಣೇಶ ಅಂತಾ ಯುವಕರು ಯಾವ ಕೆಲಸಕ್ಕೂ ಸಿದ್ದರಾಗಿ, ಬಡಜನರ ಸೇವೆಗಾಗಿ ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಟ್ಟು ಸರ್ಕಾರ ವಹಿಸಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಾರೆ ಎಂದು ನಮಗೆ ನಂಬಿಕೆ ಇದೆ ಎಂದರು.
ಈ ಸಂದರ್ಭದಲ್ಲಿ ಬನಹಟ್ಟಿಯ ನೇಕಾರ ಸಮಾಜದ ಮುಖಂಡ ರವಿ ಬಾಡಗಿ, ಪತ್ರಕರ್ತರಾದ ಜಯರಾಂ ಶೆಟ್ಟಿ, ಮಹೇಶ ಆರಿ, ಮೀರಾ ತಟಗಾರ, ಲಕ್ಷ್ಮಣ ಕಿಶೋರಿ, ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 