ಹಕ್ಕುಚ್ಯುತಿ ಮಂಡಿಸುವೆ: ಕಂದಾಯ ಇಲಾಖೆ ಕಾರ್ಯದರ್ಶಿ ವಿರುದ್ಧ ಗರಂ

I will file a waiver: Complaint against the Revenue Department Secretary

ಹಕ್ಕುಚ್ಯುತಿ ಮಂಡಿಸುವೆ: ಕಂದಾಯ ಇಲಾಖೆ ಕಾರ್ಯದರ್ಶಿ ವಿರುದ್ಧ ಗರಂ 

ಕಾಗವಾಡ: ರಾಜ್ಯ ಸರ್ಕಾರದ ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಿಯಾರ ತಾವು ತೆಗೆದುಕೊಂಡು ನಿರ್ಣಯವೇ ಅಂತಿಮ ನಿರ್ಣಯವೆಂದು ಹೇಳಿ, ನಾವು ಹೇಳಿದ ಮಾತನ್ನು ಕೇಳದೇ ಅವಮಾನಿಸಿದ್ದಾರೆ. ಅವರ ವಿರುದ್ಧ ವಿಧಾನ ಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಹಿರಿಯ ಕಾಂಗ್ರೆಸ್ ಶಾಸಕ ರಾಜು ಕಾಗೆ ಕಠಿಯಾರ ವಿರುದ್ಧ ಕಿಡಿ ಕಾರಿದ್ದಾರೆ. ಅವರು ಶನಿವಾರ ದಿ. 15 ರಂದು ಕಾಗವಾಡ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕಂದಾಯ ಇಲಾಖೆಯಿಂದ ಪಟ್ಟಣದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಜಾಗ ಗುರುತಿಸಲಾಗಿದ್ದು, ಅದು ಯೋಗ್ಯವಾದ ಜಾಗವಿದೆ. ಅದನ್ನು ಕೂಡಲೇ ಪ್ರಾರಂಭಿಸಿ, ಅನುಮೋದನೆ ನೀಡುವಂತೆ ಕೇಳಿದಾಗ.. ನನಗೆ ಎನ್ರೀ ನಿಮಗೆ ತೆಲೆ ಕಟ್ಟಿದೆಯಾ, ಅಲ್ಲಿ ಕೆರೆ ಇದೆ. ಅಲ್ಲಿ ಪ್ರಜಾಸೌಧ ಹೇಗೆ ನಿರ್ಮಾಣ ಮಾಡುತ್ತಿರಾ..? ಎಂದು ಹಿರಿಯ ಶಾಸಕನಾದ ನನಗೆ ಅವಮಾನಿಸಿದ್ದಾರೆ. ಅವರ ವಿರುದ್ದ ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಸಭಾಧ್ಯಕ್ಷರಿಗೆ ಹಕ್ಕುಚ್ಯುತಿ ಮಂಡಿಸುತ್ತನೆ ಎಂದು ತಿಳಿಸಿದ್ದಾರೆ. ಸ್ಥಳೀಯವಾಗಿ ನಾನು ಶಾಸಕನಾಗಿ ತಹಶಿಲ್ದಾರ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಅವರು ಒಪ್ಪಿಗೆ ನೀಡಿದರೂ ಸಹ ಕಂದಾಯ ಇಲಾಖೆ ಕಾರ್ಯದರ್ಶಿ ಅಲ್ಲಿ ಕೆರೆ ಇದೆ. ಅನುದಾನ ನೀಡಲು ಆಗುವುದಿಲ್ಲವೆಂದು ಸ್ಥಳೀಯ ಶಾಸಕನಾದ ನನಗೆ ಉದ್ಧಟತನದಿಂದಾ ಮಾತನಾಡಿದ್ದಾರೆ. ಅಲ್ಲದೇ ಈ ಹಿಂದೆ ಲಕ್ಷ್ಮಣ ಸವದಿ ಹಾಗೂ ನಾನು ಅವರನ್ನು ಭೇಟ್ಟಿಯಾಗಿ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದ ಬಗ್ಗೆ ಮಾತನಾಡಿದಾಗ, ಅವರಿಗೆ ಕೆಲಸವಿಲ್ಲಾ ಮುಷ್ಕರ ಮಾಡುತ್ತಾರೆಂದು ಉಡಾಫೆ ಉತ್ತರ ನೀಡುರುತ್ತಾರೆ. ಆತ ಒಬ್ಬ ಜನಪ್ರತಿನಿಧಿ ಹಾಗೂ ಮಾಜಿ ಉಪ ಮುಖ್ಯಮಂತ್ರಿಗೆ ಉದ್ಧಟತನದ ಹೇಳಿಕೆ ನೀಡುತ್ತಾನೆಂದರೇ ಇವನೇನು ಸರ್ವಾಧಿಕಾರಿಯೇ ಎಂದು ಏಕ ವಚನದಲ್ಲೆ ವಾಗ್ದಾಳಿ ನಡೆಸಿದರು. ಈ ಅಧಿಕಾರಿಗೆ ಜನಪ್ರತಿನಿಧಿಗಳ ಹತ್ತಿರವೂ ಸೌಜನ್ಯದಿಂದ ಮಾತನಾಡುವುದಿಲ್ಲಾ ಅಂದರೆ ಇವನಿಗೆ ಮುಖ್ಯ ಮಂತ್ರಿಗಳಿಗಿಂತಾ ಹೆಚ್ಚಿನ ಅಧಿಕಾರ ಇದಿಯಾ..? ಕೆಳ ಹಂತದ ಅಧಿಕಾರಿಗಳಿಗೂ ಇದೆ ರೀತಿಯಾಗಿ ಉದ್ಧಟತನದಿಂದ ವರ್ತಿಸಿ, ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾನೆ. ಈ ಕುರಿತು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳದು, ಆತನ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದಾರೆ.