ಲಕ್ನೋ, ಫೆ13 : ಯೋಗಿ ಆದಿತ್ಯನಾಥ ಸರ್ಕಾರ ಶಾಸಕರಿಗೆ ಐ-ಪ್ಯಾಡ್‌ಗಳನ್ನು ನೀಡಲು ನಿರ್ಧರಿಸಿದ್ದು ಇನ್ನು ಮುಂದೆ ಸಚಿವ ಸಂಪುಟ ಸಭೆ ಕಾಗದರಹಿತವಾಗಲಿದೆ.
ಸಿಎಂ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಎಲ್ಲಾ ಸಂಪುಟ ಸಚಿವರಿಗೆ ಐ-ಪ್ಯಾಡ್ ನೀಡಲಾಗುವುದು. ಮುಂದಿನ ವಾರದಿಂದಲೇ ನಡೆಯಲಿರುವ ಎಲ್ಲ ಸಂಪುಟ ಸಭೆ ಕಾಗದರಹಿತವಾಗಲಿದೆ ಎಂದೂ ಸಿಎಂ ಕಚೇರಿ ಗುರುವಾರ ಪ್ರಕಣೆಯಲ್ಲಿ ತಿಳಿಸಿದೆ.
ಆದಿತ್ಯನಾಥ್ ಅವರು ತಮ್ಮ ಹೆಚ್ಚಿನ ಕೆಲಸಗಳನ್ನು ಪತ್ರಗಳ ರೂಪಕ್ಕೆ ಬದಲಾಗಿ ಗೆ ಐಪ್ಯಾಡ್ ಮೂಲಕವೇ ಮಾಡುತ್ತಿದ್ದು, ಇದನ್ನು ಇತರೆ ಮಂತ್ರಿಗಳು ಅನುಸರಿಸಬೇಕೆಂದು ಬಯಸುತ್ತಿದ್ದಾರೆ.
ಮುಂದಿನವಾರ ನಡೆಯಲಿರುವ ಸಚಿವ ಸಂಪುಟ ಸಭೆ ಕಾಗದರಹಿತವಾಗಿರುತ್ತದೆ ಮತ್ತು ಟಿಪ್ಪಣಿಗಳನ್ನು ಆಯಾ ಐಪ್ಯಾಡ್ ಮೂಲಕ ಸಚಿವರಿಗೆ ಕಳುಹಿಸಲಾಗುತ್ತದೆ. ತೊಂದರೆಗಳನ್ನು ಎದುರಿಸುತ್ತಿರುವ ಶಾಸಕರಿಗೆ ಸರ್ಕಾರವು ತಮ್ಮ ಟ್ಯಾಬ್ಲೆಟ್‌ಗಳನ್ನು ಸುಲಭವಾಗಿ ನೋಡುವಂತೆ , ಉತ್ತರಿಸುವಂತೆ ತರಬೇತಿ ಸಹ ನೀಡುತ್ತದೆ.
ಇತ್ತೀಚಿನ ದಿನಗಳಲ್ಲಿ, ಆದಿತ್ಯನಾಥ್ ಐಪ್ಯಾಡ್ ಅನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ ಮತ್ತು ಡಿಫೆನ್ಸ್ ಎಕ್ಸ್ಪೋ 2020 ನಲ್ಲಿ ಟಿಪ್ಪಣಿಗಳನ್ನು ಓದುವುದು ಮತ್ತು ತೆಗೆದುಕೊಳ್ಳುವುದನ್ನು ಸಹ ಗುರುತಿಸಲಾಗಿದೆ.
ಇದನ್ನು ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಭಾವಿತರಾಗಿ ಕಲಿತಿದ್ದಾರೆ ಎಂದು ಯುಪಿ ಮುಖ್ಯಮಂತ್ರಿಯ ಆಪ್ತ ಸಹಾಯಕ ಹೇಳಿದ್ದಾರೆ.