ನಾನೊಬ್ಬ ಸಾಹಿತ್ಯದ ಸೇವಕ: ಕಂಬಳಿ


ಲೋಕದರ್ಶನ ವರದಿ

ಕೊಪ್ಪಳ: ತಿರುಳ್ಗನ್ನಡ ನಾಡೆಂದು ಹೆಸರುಗಳಿಸಿದ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿಯೇ ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಪ್ರಸಿದ್ಧಿಯಾಗಿದೆ. ಈ ಜಿಲ್ಲೆಗೆ ಉಜ್ವಲವಾದ ಸಾಹಿತ್ಯಿಕ ಪರಂಪರೆಯಿದೆ. ನಾನು ಈ ಸಮ್ಮೇಳನಾಧ್ಯಕ್ಷತೆಯ ಪದವಿಯನ್ನು ಕನಸು ಮನಸ್ಸಿನಲ್ಲಿಯೂ ಕಲ್ಪಿಸಿಕೊಂಡಿರಲಿಲ್ಲ. ನನ್ನ ಬದುಕಿನ ಅಧ್ಯಯದಲ್ಲಿ ಸಂತಸದ ಕ್ಷಣಗಳನ್ನು ಆಸ್ವಾಧಿಸಲು ಅನುವು ಮಾಡಿಕೊಟ್ಟು ಈ ಸಮ್ಮೇಳನಾಧ್ಯಕತೆಯ ಪದವಿನ್ನಿತ್ತು ಗೌರವಿಸಿದ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿಗೆ ನಾನು ಚಿರಋಣಿಯಾಗಿದ್ದೇನೆ. ನನಗಿಂತಲೂ ಹಿರಿಯರು, ಸಮರ್ಥರು, ಸಮ್ಮೇಳನಾಧ್ಯಕ್ಷರಾಗಲು ಅರ್ಹರಿದ್ದರೂ ಕೂಡ ನನ್ನನ್ನು ಈ ಕನ್ನಡಮ್ಮನ ತೇರನ್ನು ಎಳೆದು ಸಂಭ್ರಮಿಸುವ ಪವಿತ್ರ ಕಾರ್ಯಕ್ಕೆ ಹಚ್ಚಿದ್ದಕ್ಕೆ ನಾನು ಋಣಿಯಾಗಿದ್ದೇನೆ. ಚುಟುಕು ರಚನೆ, ನಾಟಕ ರಚನೆ, ಗೀತ ರಚನೆ ಮಾಡುವುದರ ಜೊತೆಗೆ ಚಲನಚಿತ್ರಗಳಲ್ಲಿ ನಟನೆ ಮಾಡುತ್ತಾ ನನ್ನ ಕೈಲಾದಮಟ್ಟಿಗೆ ಕನ್ನಡಮ್ಮನ ಸೇವೆ ಮಾಡುತ್ತಿದ್ದೇನೆ. ನಾನೊಬ್ಬ ಕನ್ನಡ ಸಾಹಿತ್ಯದ ಸೇವಕ. ಈಗ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಮುಂದಿನ ದಿನಮಾನಗಳಲ್ಲಿಯೂ ಕೂಡ ನನ್ನ ಕೈಲಾದಮಟ್ಟಿಗೆ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದು ಕೊಪ್ಪಳ ಜಿಲ್ಲಾ 9ನೇ ಚುಟುಕು ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಸುರೇಶ ಕಂಬಳಿ ಹೇಳಿದರು.

ಅವರು ಕೊಪ್ಪಳ ತಾಲೂಕಿನ ಗಬ್ಬೂರಿನಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಸಮ್ಮೇಳನಾಧ್ಯಕ್ಷರ ಅಧಿಕೃತ ಆಹ್ವಾನದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. 

    ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸುರೇಶ ಕಂಬಳಿಯರಿಗೆ ಸನ್ಮಾನಿಸಿ ಮಾತನಾಡುತ್ತಾ, ಚುಟುಕು ಸಾಹಿತ್ಯ ಪರಿಷತ್ತಿಗೆ ಸರಕಾರದಿಂದ  ಯಾವುದೇ ನಯಾಪೈಸೆ ಅನುದಾನವಿರುವುದಿಲ್ಲ. ಆದರೂ ಕೂಡ ನಾನು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದ ಮೇಲೆ ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯಮಟ್ಟದ 14ನೇ ಹಾಗೂ 17ನೇ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಕೊಪ್ಪಳ ಜಿಲ್ಲಾಮಟ್ಟದ 8 ಸಮ್ಮೇಳನಗಳನ್ನು ಪೂರೈಸಿ ಈಗ ಬರುವ ಸೆಪ್ಟಂಬರ್ 30ರಂದು ಕೊಪ್ಪಳ ಜಿಲ್ಲಾ 9ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದೇನೆ. ಇದಕ್ಕಾಗಿ ನಾನು ಅರ್ಧ ಆಯುಷ್ಯ ಹಾಗೂ ಅರ್ಧ ಪಗಾರವನ್ನು ಕಳೆದುಕೊಂಡಿದ್ದೇನೆ. ಆದರೆ ನನಗೆ ಯಾವುದೇ ಬೇಜಾರಿಲ್ಲ. ಇದರಿಂದ ನನಗೆ ಆತ್ಮತೃಪ್ತಿ ಇದೆ, ಸಂತೋಷ ಇದೆ ಎಂದರು.

ಕನರ್ಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರ ಬಸವರಾಜ ಆಕಳವಾಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಸುರೇಶ ಕಂಬಳಿಯವರು ಬಹುಮುಖ ಪ್ರತಿಭೆವುಳ್ಳವರು. ಬಹಳ ಚಿಕ್ಕವಯಸ್ಸಿನಲ್ಲಿಯೇ ಸಾಹಿತ್ಯಿಕವಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಮಾನಗಳಲ್ಲಿಯೂ ಕೂಡ ಕನ್ನಡಮ್ಮನ ಸೇವೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಲಿ ಎಂದರು.

    ಗಮಕ ಕಲಾಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಫಕೀರಪ್ಪ ವಜ್ರಬಂಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಸುರೇಶ ಕಂಬಳಿಯವರು ಉತ್ತಮ ಬರಹಗಾರರು ಹಾಗೂ ಉತ್ತಮ ಗಾಯಕರು. ಗ್ರಾಮೀಣ ಪ್ರದೇಶದ ಈ ಪ್ರತಿಭಾವಂತ ಯುವ ಕವಿಯನ್ನು ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಸುರೇಶ ಕಂಬಳಿಯವರು ಒಳ್ಳೆಯ ಚುಟುಕು ಕವಿಗಳು. ಇವರು ನನ್ನ ವಿದ್ಯಾಥರ್ಿ ಎಂದು ಹೇಳಿಕೊಳ್ಳಲು ನನಗೆ ತುಂಬಾ ಸಂತಸವೆನಿಸುತ್ತಿದೆ ಎಂದರು. 

ಗುಳದಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರಮೇಶ ಹಳ್ಳಿ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಕರಿಯಪ್ಪ ಕಂಬಳಿ, ರಾಮನಗೌಡ ಗೌಡರ, ಶಿವಪ್ರಸಾದ ಮಜ್ಜಿಗಿ, ಹಂಪಣ್ಣ ಕಂಬಳಿ, ರೇಣುಕಾ ಕಂಬಳಿ, ಹಿರಿಯರಾದ ಪಂಪಣ್ಣ ಪೂಜಾರ, ವೆಂಕಣ್ಣ ಗೌಡರ, ಮಂಜುನಾಥಗೌಡ ಗೌಡರ, ಅಣ್ಣಪ್ಪ ಪೂಜಾರ, ಮೇಲಪ್ಪ ಮಜ್ಜಿಗಿ, ಹೊನ್ನೂರಸಾಬ ಬಾಗಲಿ, ಶ್ಯಾವಂತ್ರಮ್ಮ ಕಂಬಳಿ, ಶರಣಪ್ಪ ರಡ್ಡೇರ, ಬಸವರಾಜ ಸಿರುಗುಂಪಿಶೆಟ್ಟರ್, ಸೋಮಲಿಂಗಪ್ಪ ಬೆಣ್ಣಿ, ಕನಕಪ್ಪ ಕಮ್ಮಾರ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಲಾವಿದರಾದ ರೇವಣ್ಣ ಕೋಳೂರು ಪ್ರಾಥರ್ಿಸಿದರು.  ಗಂಗಾವತಿ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಧ್ಯಾಪಕರಾದ ನಿಂಗಪ್ಪ ಕಂಬಳಿ ನಿರೂಪಿಸಿದರು. ಪತ್ರಕರ್ತರಾದ ಕುಬೇರ ಮಜ್ಜಿಗಿ ಸ್ವಾಗತಿಸಿದರು. ಮಹೇಶ ಯತ್ನಟ್ಟಿ ವಂದಿಸಿದರು.