ಕೋಲಾರ,ಡಿ
28, ಪೌರತ್ವ ಕಾಯ್ದೆ ವಿರೋಧಿ ಹೋರಾಟದ ವೇಳೆ ಮಂಗಳೂರು ಗೋಲಿಬಾರ್ ನಲ್ಲಿ ಜೀವ ಕಳೆದುಕೊಂಡವರು ಅಮಾಯಕರು.ರಾಜ್ಯ
ಸರ್ಕಾರ ಪರಿಹಾರ ನೀಡುವುದಾಗಿ ಹೇಳಿ ಬಳಿಕ ನಿರ್ಧಾರದಿಂದ ಹಿಂದೆ ಸರಿಯುವ ಕೆಟ್ಟ ನಿರ್ಧಾರ ಕೈಗೊಂಡಿದೆ
ಎಂದು ಕಾಂಗ್ರೆಸ್ನ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು,ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೃತರಿಗೆ ನೀಡಬೇಕಾದ ಪರಿಹಾರವನ್ನು ವಾಪಸ್ ಪಡೆದಕ್ಕಿಂತ ಕೆಟ್ಟ
ಕೆಲಸ ಮತ್ತೊಂದಿಲ್ಲ.ಯಡಿಯೂರಪ್ಪ ಅವರು ಇಂತಹ ನಿರ್ಧಾರ ತೆಗೆದು ಕೊಂಡಿದ್ದು ದೇಶದ ದುರಾದೃಷ್ಟ.ಯಾರೇ
ಆಗಲಿ ಇಂತಹ ಸಮಯದಲ್ಲಿ ಪರಿಹಾರ ನೀಡುವುದು ಅವರ ಧರ್ಮ,ಇದು ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಕೆಲಸವಲ್ಲ
ಎಂದು ಕಿಡಿ ಕಾರಿದರು. ಬೇರೆ ರಾಜ್ಯ ಸರ್ಕಾರಗಳು ಗೋಲಿಬಾರ್
ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿ ಎಂದು ಹೇಳುತ್ತಿದ್ದಾರೆ.ಇದು ನಮಗೆ ನಾಚಿಕೆ ಆಗಬೇಕು.ಮುಖ್ಯಮಂತ್ರಿ
ಗಳೇ ಮೊದಲು ಪರಿಹಾರ ಕೊಡಿ,ವಚನ ಭ್ರಷ್ಟರಾಗಬೇಡಿ ಹೇಳಿದ ಹಾಗೆ ನಡೆದುಕೊಳ್ಳಿ ಎಂದು ಅವರು ಯಡಿಯೂರಪ್ಪ
ಅವರಿಗೆ ಒತ್ತಾಯಿಸಿದರು. ಬಿಜೆಪಿ ಅಧಿಕಾರದಲ್ಲಿರುವ
ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದೆಶದ ಅಧಿಕಾರದ
ಚುಕ್ಕಾಣಿ ಹಿಡಿಯುತ್ತದೆ. ಬಿಜೆಪಿ ರಾಷ್ಟ್ರವನ್ನ ಧರ್ಮ ಹಾಗೂ ಜಾತಿ ಹೆಸರಿನಲ್ಲಿ ವಿಭಜಿಸಲು ಹೊರಟಿ
ದ್ದಾರೆ.ಇದಕ್ಕೆ ತಕ್ಕ ಉತ್ತರವನ್ನ ಇತ್ತೀಚೆಗೆ ನಡೆದ ಜಾರ್ಖಂಡ್ ವಿಧಾನ ಸಭೆ ಚುನಾವಣೆಯಲ್ಲಿ ಜನ
ನೀಡಿದ್ದಾರೆ.ಬಿಜೆಪಿಗೆ ಮುಂಬರುವ ದೆಹಲಿ ವಿಧಾನ ಸಭೆ ಚುನಾವಣೆಯಲ್ಲಿ ಸೋಲು ಖಚಿತ.ದೇಶವನ್ನ ಅಭಿವೃದ್ಧಿ
ವಂಚಿತವಾಗಿ ಮಾಡಿದ್ದು ಪ್ರಧಾನಿ ಮೋದಿ ಅವರ ನಾಯಕತ್ವದ ಪರಿಣಾಮ,ದೇಶದಲ್ಲಿ ಶಾಂತಿಯಿಲ್ಲ, ರೈತರ ಜೀವಹಾನಿ
ಹೆಚ್ಚಾಗಿದೆ.ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಇವೆಲ್ಲ ಕಾರಣ ಎಂದು
ಅವರು ವಿಶ್ವಾಸ ವ್ಯಕ್ತಪಡಿಸಿದರು. ನಾನು ಕೆಪಿಸಿಸಿ
ಅಧ್ಯಕ್ಷ್ಯ ಸ್ಥಾನ ಪಡೆಯುತ್ತೇನೆಂದು ಎಲ್ಲಿವೂ ಶಪಥ ಮಾಡಿಲ್ಲ.ಅಧ್ಯಕ್ಷರ ಆಯ್ಕೆ ವಿಚಾರವು ಪಕ್ಷದ
ಹೈಕ ಮಾಂಡ್ ಗೆ ಬಿಟ್ಟದ್ದು.ನನ್ನನ್ನ ಅಧ್ಯಕ್ಷ್ಯರನ್ನಾಗಿ ಆಯ್ಕೆ ಮಾಡುವಂತೆ ಹಿರಿಯ ಸಂಸದರು ಹೈಕಮಾಂಡ್
ಗೆ ಮನವಿ ಮಾಡಿ ದ್ದಾರೆ.ಯಾರೇ ಅಧ್ಯಕ್ಷರಾದರು ಒಗ್ಗಟ್ಟಾಗಿ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇವೆ
ಎಂದು ಅವರು ತಿಳಿಸಿದರು.