ಲೋಕದರ್ಶನ ವರದಿ
ಕೊಪ್ಪಳ 29: ಉಪನ್ಯಾಸಕರ ವೃತ್ತಿ ಪವಿತ್ರವಾದದ್ದು. ಉಪನ್ಯಾಸಕರು ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ವಿದ್ಯಾಥರ್ಿಗಳ ಏಳಿಗೆಗಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಉಪನ್ಯಾಸಕರು ಹಲವಾರು ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ಪ್ರೌಢಶಾಲೆಯಿಂದ ಉಪನ್ಯಾಸಕ ಹುದ್ದೆಗೆ ಬಡ್ತಿ ಹೊಂದಿದ ಉಪನ್ಯಾಸಕರಿಗೆ 15,20,25 ವರ್ಷಗಳಿಗೆ ನೀಡುವ ಕಾಲಮಿತಿ ಬಡ್ತಿಯನ್ನು ನೀಡಿರುವುದಿಲ್ಲ. ಪಿಎಚ್.ಡಿ. ಅಧ್ಯಯನ ಮಾಡಿರುವ ಉಪನ್ಯಾಸಕರಿಗೆ ಪದವಿ ಕಾಲೇಜಿಗೆ ಬಡ್ತಿ ನೀಡುತ್ತಿಲ್ಲ. 2008ರ ನಂತರ ನೇಮಕಗೊಂಡ ಉಪನ್ಯಾಸಕರಿಗೆ 500ರೂ ವಿಶೇಷ ಭತ್ಯೆಯನ್ನು ನೀಡುತ್ತಿಲ್ಲ. ಉಪನ್ಯಾಸಕರ ಎಲ್ಲಾ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಶರಣಪ್ಪ ಮಟ್ಟೂರು ಹೇಳಿದರು.
ಅವರು ಕೊಪ್ಪಳ ತಾಲೂಕಿನ ಭಾಗ್ಯನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಕೊಪ್ಪಳ ಜಿಲ್ಲಾಮಟ್ಟದ ಪ್ರಥಮ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಕಂಠೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಇದೊಂದು ಐತಿಹಾಸಿಕ ಕಾರ್ಯಕ್ರಮ. ಇಡೀ ರಾಜ್ಯದಲ್ಲಿಯೆ ಪ್ರಾಚಾರ್ಯರ ಮತ್ತು ಉಪನ್ಯಾಸಕರು ಸಂಯುಕ್ತವಾಗಿ ಹಮ್ಮಿಕೊಂಡ ಏಕೈಕ ಕಾರ್ಯಕ್ರಮ. ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಯಾಗಿಲ್ಲ. ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ಪ್ರಾಚಾರ್ಯರು ಇರುವುದಿಲ್ಲ. ಬಹುತೇಕ ಕಾಲೇಜುಗಳಲ್ಲಿ ಪ್ರಭಾರಿ ಪ್ರಾಚಾರ್ಯರು ಆಡಳಿತ ಮಾಡುತ್ತಿರುವುದು ನೋವಿನ ಸಂಗತಿ ಎಂದರು.
ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ತಿಮ್ಮಯ್ಯ ಪುಲರ್ೆ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಶೈಕ್ಷಣಿಕ ವ್ಯವಸ್ಥೆ ಸುಧಾರಿಸಬೇಕಾದರೆ ಪಾಲಕರು, ಉಪನ್ಯಾಸಕರು, ವಿದ್ಯಾಥರ್ಿಗಳು ಈ ಮೂವರ ಪಾತ್ರವು ಬಹಳ ಮಹತ್ವದಾಗಿದೆ ಎಂದರು.
ಉಪನ್ಯಾಸಕರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಸೋಮನಗೌಡ ಎಂ.ಪಾಟೀಲ ಮಾತನಾಡಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾಥರ್ಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಸರಕಾರವು ಉಚಿತ ಸಮವಸ್ತ್ರವನ್ನು ನೀಡಬೇಕು. ಪದವಿ ಪೂರ್ವ ಕಾಲೇಜುಗಳಿಗೆ ದೈಹಿಕ ಶಿಕ್ಷಕರ ಹುದ್ದೆ ಮಂಜೂರು ಮಾಡಿ ಆ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಆಸಕ್ತಿಯನ್ನು ಮೂಡಿಸಲು, ಅವರ ಪ್ರತಿಭೆಗಳನ್ನು ಹೊರಹಾಕಲು. ಸಾಧ್ಯವಾಗುತ್ತದೆ ಎಂದರು.
ಪ್ರಾಚಾರ್ಯರ ಜಿಲ್ಲಾಧ್ಯಕ್ಷರಾದ ಎಂ.ಶಂಶುದ್ಧೀನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೆಶಕ ಎಲ್.ಜಿ.ರಾಟಿಮನಿ, ಉಪನ್ಯಾಸಕರ ಸಂಘದ ರಾಜ್ಯ ಪ್ರಧಾನ ಕಾರ್ಯದಶರ್ಿ ನಿಂಗೇಗೌಡ, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಶ್ರೀಶೈಲ ಬೀರಕಬ್ಬಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಂತಪ್ಪ ಅಂಡಗಿ ಚಿಲವಾಡಗಿ, ಉಪನ್ಯಾಸಕರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ.ಎಂ.ರಾಜಣ್ಣ, ಪ್ರಧಾನ ಕಾರ್ಯದರ್ಶಿ ಅರ್ಜುನ ಮನ್ನಾಪೂರ, ಗದಗ ಜಿಲ್ಲಾಧ್ಯಕ್ಷ ಸುರೇಶ ರೆಡ್ಡಿ ಸೋಮಣ್ಣನವರ, ರಾಯಚೂರು ಜಿಲ್ಲಾಧ್ಯಕ್ಷ ನರಸಪ್ಪ ಭಂಡಾರಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ, ದಾನಿಗಳಾದ ಲಕ್ಷ್ಮೀ ನಾರಾಯಣ ಬೆಂಗಳೂರು, ಪ್ರಾಚಾರ್ಯರ ಸಂಘದ ಜಿಲ್ಲಾ ಉಪಾಧ್ಯಕ್ಷ ವೆಂಕೋಬ ಭಾವಿತಾಳ, ಕಾರ್ಯದಶರ್ಿ ಜಿ.ಎಂ.ಭೂಸನೂರಮಠ, ಕೋಶಾಧ್ಯಕ್ಷ ಐ.ಎಂ.ಚಿಕ್ಕರೆಡ್ಡಿ, ಸಹ ಕಾರ್ಯದಶರ್ಿಗಳಾದ ಡಾ.ರವಿ ಚವ್ಹಾಣ, ಡಿ.ಬಿ.ಗಡೇದ, ಉಪನ್ಯಾಸಕರ ಸಂಘದ ಜಿಲ್ಲಾ ಕಾರ್ಯದಶರ್ಿಗಳಾದ ಮಾರುತಿ ಗಾವರಾಳ, ರಾಚಪ್ಪ ಕೇಸರಭಾವಿ, ಕೊಪ್ಪಳ ತಾಲೂಕ ಅಧ್ಯಕ್ಷ ಪತ್ರೆಪ್ಪ ಚತ್ತರಕಿ, ಗಂಗಾವತಿ ತಾಲೂಕಾಧ್ಯಕ್ಷ ಮಹಿಬೂಬಅಲೀ ಚಾಗಭಾವಿ, ಕುಕನೂರು ತಾಲೂಕಾಧ್ಯಕ್ಷ ಡಾ.ಫಕೀರಪ್ಪ ವಜ್ರಬಂಡಿ, ಕಾರಟಗಿ ತಾಲೂಕಾಧ್ಯಕ್ಷ ಮಹಾಬಳೇಶ್ವರ, ಕುಷ್ಟಗಿ ತಾಲೂಕಾಧ್ಯಕ್ಷ ರಮೇಶಗೌಡ ಪಾಟೀಲ, ಸರಕಾರಿ ನೌಕರರ ಸಂಘದ ನಿದರ್ೆಶಕ ಎಸ್.ವಿ.ಮೇಳಿ, ಉಪನ್ಯಾಸಕರಾದ ಸುಜಾತ ವಾಲಿಕಾರ, ಎಚ್.ಬಿ.ಚೌಧರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಉಪನ್ಯಾಸಕ ಇಮಾಮಸಾಬ ಹಡಗಲಿ ಇವರ ಅನುವಾದಿತ ಕೃತಿ 'ಮಿರ್ಜಾ ಗಾಲಿಬ್ ಕೃತಿ ಬಿಡುಗಡೆಯಾಯಿತು. ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ, ನಿವೃತ್ತ ನೌಕರರಿಗೆ ಸನ್ಮಾನಿಸಲಾಯಿತು. ಅಕ್ಷತಾ ಗೋಪಾಲ ಮೋನಿ ಪ್ರಾಥರ್ಿಸಿದರು. ಭಾಗ್ಯನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ರಾಜಶೇಖರ ಪಾಟೀಲ ನಿರೂಪಿಸಿದರು. ಉಪನ್ಯಾಸಕ ಇಮಾಮಸಾಬ ಹಡಗಲಿ ಸ್ವಾಗತಿಸಿದರು. ಉಪನ್ಯಾಸಕ ಸೋಮಶೇಖರಗೌಡ ಪಾಟೀಲ ವಂದಿಸಿದರು.