ನಾನು ಹಣದ ಗಿಡ ನೆಟ್ಟಿಲ್ಲ ನನ್ನ ಕಷ್ಟ ನನಗೇ ಗೊತ್ತು: ಸಿಎಂ


ಬೆಂಗಳೂರು 09: ಸಾಲ ಮನ್ನಾ ವಿಚಾರವಾಗಿ ನಾನು ಹುಡುಗಾಟಿಕೆ ಮಾಡುತ್ತಿಲ್ಲ. ನನ್ನ ಕಷ್ಟ ನನಗೇ ಗೊತ್ತು. ಅದನ್ನು ಯಾರಿಗೂ ಹೇಳುವ ಹಾಗಿಲ್ಲ ಎಂದು ಸಿಎಂ ಕುಮಾರಸ್ವಾಮಿ ತಮ್ಮ ಅಸಹಾಯಕತೆ ಹೊರಹಾಕಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ 24ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 48 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದು ಸಣ್ಣ ವಿಚಾರವಲ್ಲ. ಅದಕ್ಕಾಗಿ ಹಣ ಹೊಂದಿಸಬೇಕಾಗಿದೆ. ನಾನೇನು ಹಣದ ಗಿಡ ನೆಟ್ಟಿಲ್ಲ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರಾತ್ರೋರಾತ್ರಿ ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. 

ಇದೇ ವೇಳೆ ಮಾಧ್ಯಮದವರ ವಿರುದ್ಧ ತಮ್ಮ ಅಸಮಾಧಾನವನ್ನು ಮುಂದುವರಿಸಿರುವ ಸಿಎಂ, ಮಾಧ್ಯಮವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಏಕೆ ಮಾಡುತ್ತಾರೋ ಗೊತ್ತಿಲ್ಲ. ಅದಕ್ಕಾಗಿ ನಾನು ಮಾಧ್ಯಮದವರ ಜತೆ ಮಾತನಾಡುವುದನ್ನೇ ಕಡಿಮೆ ಮಾಡಿದ್ದೇನೆ ಎಂದು ತಿಳಿಸಿದರು. 

ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ನಾನು ನಿಮ್ಮ ಕ್ಷಮೆ ಕೋರುತ್ತೇನೆ. ಅನ್ಯ ಕೆಲಸಗಳು ಮತ್ತು ವೈಯಕ್ತಿಕ ಕೆಲಸದ ನಿಮಿತ್ತ ಇಲ್ಲಿಗೆ ಬರಲು ತಡವಾಗಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಸಕರ್ಾರದ ಮಂತ್ರಿಗಳನ್ನು ಕಳುಹಿಸಿದ್ದೆ. ಆದರೆ ಸಮಾಜಕ್ಕೆ ಸಿಎಂ ಅಗೌರವ ತೋರಿದರು ಎಂದು ಕೆಲವರು ಬಿಂಬಿಸುವ ಸಾಧ್ಯತೆ ಇರುವುದರಿಂದ ನಾನೇ ಕಾರ್ಯಕ್ರಮಕ್ಕೆ ಬಂದೆ ಎಂದು ವಿವರಿಸಿದರು. 

ಮಗನ ಸಿನಿಮಾ ಬಗ್ಗೆ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಅದಕ್ಕಾಗಿ ಐದು ನಿಮಿಷ ಅಲ್ಲಿಗೆ ಹೋಗಿದ್ದೆ. ಒಬ್ಬ ತಂದೆಯಾಗಿ ಮಗನ ಜೀವನ ರೂಪಿಸಬೇಕಾದ ಕರ್ತವ್ಯವೂ ನನ್ನ ಮೇಲಿದೆ. ದಿನದ 24 ಗಂಟೆಯಲ್ಲಿ ಮಗನ ಮುಖ ನೋಡಲೂ ಆಗುತ್ತಿಲ್ಲ. ನನ್ನ ಕಷ್ಟ ನನಗೆ ಗೊತ್ತು ಎಂದು ಬೇಸರ ವ್ಯಕ್ತಪಡಿಸಿದರು. 

ಆದಿವಾಸಿ, ಅಲೆಮಾರಿಗಳಿಗೆ ಮನೆ ನಿಮರ್ಾಣ, ಶಿಕ್ಷಣ, ಮೀಸಲಾತಿ ಪತ್ರ ನೀಡಲು ಸಕರ್ಾರ ಬದ್ಧ ವಾಗಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ಎಂದೂ ನಿಮ್ಮ ಹಕ್ಕುಗಳಿಗಾಗಿ ದೊಡ್ಡ ಮಟ್ಟಿಗೆ ಹೋರಾಟವನ್ನು ಮಾಡಿಲ್ಲ. ನನಗೆ ನಿಮ್ಮ ಬಗ್ಗೆ ನೋವಿದೆ. ನಿಮ್ಮ ಸಮಾಜ ಕಷ್ಟದಲ್ಲಿದೆ. ಎಲ್ಲ ಸಕರ್ಾರಗಳು ನಿಮ್ಮನ್ನು ಕಡೆಗಣಿಸಿವೆ. ಇದರಲ್ಲಿ ನಮ್ಮೆಲ್ಲರ ತಪ್ಪಿದೆ ಎಂದು ಸಿಎಂ ವಿಷಾದ ವ್ಯಕ್ತಪಡಿಸಿದರು. 

ಸಕರ್ಾರದ ಮೀಸಲಾತಿಯೂ ನಿಮಗೆ ಸಿಕ್ಕಿಲ್ಲ. ನಿಮ್ಮ ಹಕ್ಕುಗಳನ್ನು ಪಡೆಯುವಲ್ಲಿ ನಿಮಗೆ ಅನ್ಯಾಯವಾಗಿದೆ. ಮನೆ ನಿಮರ್ಾಣ, ಬಡಾವಣೆ, ಮೀಸಲು ಪತ್ರ, ನೀಡಲು ನಾನು ಬದ್ಧನಾಗಿದ್ದೇನೆ. ಶೈಕ್ಷಣಿಕವಾಗಿ ವಸತಿ ಶಾಲೆಗಳನ್ನು ನಿಮರ್ಿಸಿ ಮುಕ್ತ ಶಿಕ್ಷಣ ನೀಡಲು ನಾವು ಸಿದ್ಧರಿದ್ದೇವೆ ಎಂದು ಆಶ್ವಾಸನೆ ನೀಡಿದರು.