ಕ್ಷಣ ವ್ಯವಸ್ಥೆ ಸುಧಾರಿಸಲು ಹೆಚ್ಚಿನ ಅನುದಾನವನ್ನು ತರಲು ಪ್ರಯತ್ನಿಸುತ್ತೇನೆ: ಮಹಾದೇವಪ್ಪ


ಕಟಕೊಳ : ಸ್ಥಳೀಯ ಕ.ವಿ.ವ. ಸಮಿತಿಯ ಎಸ್.ಎಸ್.ಎಸ್.ವಿ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಎಸ್.ಜಿ.ಟಿ. ಪದವಿ ಪೂರ್ವ ಮಹಾವಿದ್ಯಾಲಯ , ಎಸ್.ಜಿ.ಕೆ.ಹೈಸ್ಕೂಲ್ದ 2018-19 ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾಥರ್ಿಗಳ ಸ್ವಾಗತ ಮತ್ತು ಕ್ರೀಡೆ , ಸಾಂಸ್ಕೃತಿಕ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಉದ್ಘಾಟಿಸಿ ಮಾತನಾಡುತ್ತ ತಾಲೂಕಿನಲ್ಲಿಯೇ ಶಿಕ್ಷಣಕ್ಕೆ ಉತ್ತೇಜನ ನೀಡುತ್ತೀರುವ ಕಟಕೋಳ ಗ್ರಾಮದಲ್ಲಿ ಉನ್ನತ ಶಿಕ್ಷಣಕ್ಕೆ ವಿವಿಧ ಗ್ರಾಮಗಳಿಂದ ಬರುವ ವಿದ್ಯಾಥರ್ಿಗಳಿಗೆ ಅನುಕೂಲಕ್ಕಾಗಿ ಒಂದು ಮೆಟ್ರೀಕ ನಂತರದ ಮಹಿಳಾ ವಿದ್ಯಾಥರ್ಿ ವಸತಿ ನಿಲಯ ಹಾಗೂ ವಿದ್ಯಾಥರ್ಿಗಳ ವಸತಿ ನಿಲಯ ಪ್ರಾರಂಭಿಸಲು ಸರಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದರು. 

ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸರಕಾರದಿಂದ ಹೆಚ್ಚಿನ ಅನುದಾನವನ್ನು  ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಎಂದು ಶಾಸಕ ಮಹಾದೇವಪ್ಪ ಯಾದವಾಡ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಜಿ.ಜಿ.ಚೋಪ್ರಾ ಸರಕಾರಿ ಪ.ಪೂ ಮಹಾವಿದ್ಯಾಲಯದ ಉಪನ್ಯಾಸಕ ಸಾಹಿತಿ  ಡಾ. ವಾಯ್.ಎಮ್. ಯಾಕೊಳ್ಳಿ ಮಾತನಾಡುತ್ತ ಉತ್ತಮ ರಾಷ್ಟ್ರ ನಿಮರ್ಾಣದಲ್ಲಿ ಶಿಕ್ಷಣದ ಮಹತ್ವ ಅಧಿಕವಾಗಿದ್ದು. ವಿದ್ಯಾ ಸಂಸ್ಥೆಗಳು ದೇಶ ಕಟ್ಟುವ ಕೆಲಸ ಮಾಡುತ್ತೀರುವುದು ಶ್ಲಾಗನೀಯ , ಕಳೆ 50 ವರ್ಷಗಳಿಂದ ಕ.ವಿ.ವ. ಸಮಿತಿಯೂ ಸಾರ್ಥಕವಾದ ಶಿಕ್ಷಣ ದಾನವನ್ನು ಗ್ರಾಮೀಣ ಪ್ರದೇಶದಲ್ಲಿ ಮಾಡುತ್ತಿದೆ. 

ಪೂಜ್ಯ ಶ್ರೀಗಳ ಆಶರ್ಿವಾದ ಹಿರಿಯರ ಶ್ರಮದ ಫಲ ಇಂದು ಇಲ್ಲಿ ಪ್ರೌಢಶಾಲೆಯಿಂದ ಪದವಿ ಮಟ್ಟದ ವರೆಗೂ ಶಿಕ್ಷಣ ನೀಡಲಾಗುತ್ತಿದೆ. ಅನ್ನ ದಾನಕ್ಕಿಂತಲೂ ವಿದ್ಯಾದಾನವು ಶ್ರೇಷ್ಠವಾದದ್ದು. ಅನ್ನ ಒಂದು ಹೊತ್ತಿನ ಹೊಟ್ಟೆ ತುಂಬಿಸಿದರೆ ವಿದ್ಯೆ ಮನುಷ್ಯನ ಬದುಕನ್ನು ಕಲ್ಪಿಸಿ ಕೊಡುತ್ತದೆ. ಎಂದರು.

ಅಧ್ಯಕ್ಷತೆ ವಹಿಸಿ ಎ.ಸಿ.ಸುರಗ ಮಾತನಾಡಿದರು. ಸಾನಿಧ್ಯ ವಹಿಸಿ ವಿರಕ್ತಮಠದ ಶ್ರೀ ಸಚ್ಚಿದಾನಂದ ಸ್ವಾಮಿಗಳು ಆಶರ್ಿವಚನ ನೀಡಿದರು.

ಕಾರ್ಯಕ್ರಮದಲ್ಲಿ   ಎ.ಕೆ. ತೋರಣಗಟ್ಟಿ, ಸಿ.ಎ.ದೇಸಾಯಿ, ವಿ.ಜಿ. ಶಿನಣ್ಣವರ, ಎನ್.ಬಿ.ತೋಡಕರ, ಸಿ.ಬಿ. ಕಳಸಪ್ಪನವರ, ಟಿ.ಪಿ. ಮುನವಳ್ಳಿ, , ಪ್ರಾಚಾರ್ಯ ಶಿವಾನಂದ ಹುದ್ದಾರ,  ಎನ್.ಡಿ. ಪಾಟೀಲ, ಮುಖ್ಯೋಪಾಧ್ಯಾಯ ಎಮ್.ಎನ್.ನಡುಗೇರಿ, ಸಿ.ಎಸ್.ಹೊರಕೇರಿ, ಗ್ರಾ.ಪಂ ಸದಸ್ಯರು ಹಾಗೂ ಮಹಾವಿದ್ಯಾಲಯಗಳ ಮತ್ತು ಪ್ರೌಢಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಇದ್ದರು.ಶಿಕ್ಷಕ ರವಿ ಗೊರವರ ಸ್ವಾಗತಿಸಿದರು. ಉಪನ್ಯಾಸಕ ಅಂಬೋಜಿ ವಂದಿಸಿದರು. ಪ್ರಾಧ್ಯಾಪಕ ರಮೇಶ ಕಟಪಟ್ಟಿ ನಿರೂಪಿಸಿದರು.