ಬೆಂಗಳೂರು,ಜ 12: ಪ್ರೌಢಶಾಲೆ ವ್ಯಾಸಂಗ ಮಾಡುವಾಗ ಬೂಕನ ಕೆರೆಯಲ್ಲಿ ನಿಂಬೇಹಣ್ಣು,ತರಕಾರಿ ಮಾರುತ್ತಿದ್ದವನು ಇಂದು ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ,ಅಚಲ ವಿಶ್ವಾಸವಿದ್ದ ಯಾರು ಬೇಕಾದರೂ ಆಗಬಹುದು ಎಂದು ತಮ್ಮ ಜೀವನವನ್ನೇ ಉದಾಹರಣೆ ನೀಡಿ ವಿದ್ಯಾರ್ಥಿಗಳಿಗೆ ಭವಿಷ್ಯದ ಗುರಿಯೊಂದಿಗೆ ಸಂಕಲ್ಪ ತೊಟ್ಟು ಮುನ್ನಡೆ ಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸರ್ಕಾರದಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಗಳ ವಿತರಣೆ ಯೋಜನೆಯಡಿ ಸರ್ಕಾರಿ, ಅನುದಾ ನಿತ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ಪದವಿ ಹಾಗೂ ಇಂಜಿನಿಯರಿಂಗ್, ಮೆಡಿಕಲ್, ಪಾಲಿಟೆಕ್ನಿಕ್ ಡಿಪ್ಲೊಮಾ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ-ಅನುದಾನಿತ ಕಾಲೇಜುಗಳ 1,09,916 ವಿದ್ಯಾರ್ಥಿಗಳಿಗೆ 311 ಕೋಟಿ ರೂ ವೆಚ್ಚದಲ್ಲಿ ಲ್ಯಾಪ್ಟಾಪ್ ವಿತರಣೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಾಂಕೇತಿಕವಾಗಿ ಚಾಲನೆ ನೀಡಿದರು.ಅಲ್ಲದೆ ಯುವ ಸಬಲೀಕರಣ ಕೇಂದ್ರಗಳ ನ್ನು ಉದ್ಘಾಟಿಸಿದರು.
ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು,ನಿಮ್ಮ ತಂದೆ ತಾಯಿ ಗಳು ನಿಮ್ಮ ಮೇಲೆ ಬಹಳ ನಿರೀಕ್ಷೆ ಇಟ್ಟಿದ್ದಾರೆ .ನಾನು ನಿಮ್ಮ ಕುಟುಂಬದ ಪರಿ ಸ್ಥಿತಿ ಬಗ್ಗೆ ಮಾತನಾಡಲು ಹೋಗಲ್ಲ ನೀವು ಮನಸ್ಸು ಮಾಡಿದರೆ ಖಂಡಿತ ನೀವೆಂದುಕೊಂಡದ್ದನ್ನು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಸಾಧಿಸ ಬಹುದು ಇದಕ್ಕೆ ನಾನೇ ನಿದರ್ಶನ.ನಾನು ಮಂಡ್ಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ತರ ಕಾರಿ, ನಿಂಬೆಹಣ್ಣು ಮಾರಿಕೊಂಡು ಇದ್ದೆ ಇಂದು ರಾಜ್ಯದ ಜನರ ಆಶೀರ್ವಾದ ದಿಂದ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಬಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಬೂಕನಕರೆಯಲ್ಲಿ ಹುಟ್ಟಿ ಹಲವು ರಾಜಕೀಯ ನಾಯಕರ ಮಾರ್ಗ ದರ್ಶನ ಪಡೆದು ಈಗ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ನಾನು ಸಂಕಲ್ಪ ಮಾಡಿದ್ದ ರಿಂದಲೇ ಈ ಮಟ್ಟಕ್ಕೆ ನಾನು ಬೆಳೆದಿದ್ದೇನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದು ಸಾಕ್ಷಿ ಎಂದರು.
ಸ್ವಾಮಿ ವಿವೇಕಾನಂದರ ಬದುಕು ಜನರ ಬದುಕನ್ನು ಬದಲಿಸಿದೆ.ಇಂದಿನ ಯುವ ಜನತೆ ಅಧುನಿಕ ಅಲೆಯಲ್ಲಿ ಸಿಲುಕಿ ದೇಶದ ಪರಂಪರೆ ಆಚಾರ ವಿಚಾರ ಮರೆಯುವ ಪರಿಸ್ಥಿತಿ ಬರುತ್ತಿದೆ.
ವಿದ್ಯಾರ್ಥಿಗಳು ವಿದೇಶಿ ವ್ಯಾಮೋಹದಿಂದ ಹೊರಗೆ ಬನ್ನಿ ಜನರ ತೆರಿಗೆ ಹಣದಲ್ಲಿ ನಿಮ್ಮನ್ನು ಸಾಫ್ಟವೇರ್ ಇಂಜನಿಯರ್ಸ, ಡಾಕ್ಟರ್ಸ್ ಮಾಡಿಸ್ತೇವೆ.ಆದರೆ ಇಲ್ಲಿ ಓದಿ ವಿದೇಶದಲ್ಲಿ ನೆಲೆಸುವ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ಮಾಡೋದನ್ನ ಬಿಡಬೇಕು ದೇಶದಲ್ಲೇ ಇದ್ದು ಸಾಧನೆ ಮಾಡಿ ಎಂದು ಕರೆ ಅವರು ನೀಡಿದರು.
ದಿನಕ್ಕೆ ಹತ್ತು ಪುಟವಾದರು ವಿವೇಕಾನಂದರ ಜೀವನ ಚರಿತ್ರೆಯನ್ನ ಓದಿ ಇದರಿಂ ದ ನಿಮಗೆ ಸ್ಪೂರ್ತಿ ಮತ್ತು ಸ್ವಾಭಿಮಾನ ಬರುತ್ತದೆ ಎಂದರು.
ಉಪ ಮುಖ್ಯಮಂತ್ರಿ ಡಾ.ಅಶ್ವಥ ನಾರಾಯಣ ಮಾತನಾಡಿ,ವಿದ್ಯಾರ್ಥಿಗಳಿಗೆ ಸಿಎಎ ಕಾಯ್ದೆ ಬಗ್ಗೆ ಮನವರಿಕೆ ಮಾಡಿಕೊಟ್ಟರು.ಸಿಎಎ ಕಾಯ್ದೆ ಬಗ್ಗೆ ದೇಶಾ ದ್ಯಂತ ಚರ್ಚೆಗಳಾಗುತ್ತಿವೆ.ಸ್ವಾಮಿ ವಿವೇಕಾನಂದರ ಮಾತುಗಳೂ ಸಿಎಎ ಅರ್ಥ ಮಾಡಿಕೊಳ್ಳಲು ಉತ್ತೇಜ,ಸಿಎಎಗೆ ಅನಗತ್ಯ ವಿರೋಧ ವ್ಯಕ್ತವಾಗುತ್ತಿದೆ, ರಾಷ್ಟ್ರ ದಲ್ಲಿ ಒಡೆದು ಆಳುವ ವಾತಾವರಣ ಇದೆ, ವಿರೋಧ ಪಕ್ಷಗಳಿಂದ ಇಂಥ ವಾತಾ ವರಣ ಸೃಷ್ಟಿ, ದೇಶದಲ್ಲಿ ಇಂತಹ ವಾತಾವರಣ ನಿರ್ಮಾಣವಾಗೋದು ಸರಿಯಲ್ಲ ಇದು ವಿವರ ವಿವೇಕಾನಂದರ ಆಶಯಕ್ಕೆ ವಿರುದ್ಧವಾದ ನಡವಳಿಕೆ ಎಂದರು.
ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ವೇದಾಕೃಷ್ಣಮೂರ್ತಿ ಮಾತನಾಡಿ, ಬೇರೆಯವರಿಗೋಸ್ಕರ ಬದುಕಬೇಡಿ,ನಿಮಗೋಸ್ಕರ ಬದುಕಿ,ಸಾಧನೆಗೆ ಅಳುಕು ,ಹಿಂಜರಿಕೆ ಬೇಡ, ಗುರಿಯೊಂದಿಗೆ ಮುನ್ನುಗ್ಗಿ. ಆತ್ಮವಿಶ್ವಾಸದಿಂದ ಮುಂದೆ ಸಾಗಿ ಎಂದು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ರಾಮಕೃಷ್ಣ ಮಠದ ಯುವಕ ಸಂಘದಿಂದ ವಿವೇಕಾನಂದ ವೇಷಧಾರಿಯಲ್ಲಿ ವಿವೇಕಾನಂದರವರು ಶಿಕಾಗೋದಲ್ಲಿ ಉಪನ್ಯಾ ಸವನ್ನ ಕನ್ನಡದಲ್ಲಿ ಪ್ರಸ್ತುತಪಡಿಸಿಲಾಯ್ತು.
ಭಾರತ ಮಹಿಳಾ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿ ವೇದಾಕೃಷ್ಣಮೂರ್ತಿ, ಬೌನ್ಸ್ ಸಿಇಒ ವಿವೇಕಾನಂದ್ ಗೆ ವಿವೇಕಾನಂದಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಿದ್ದರಾಮಯ್ಯ ಕಾಲದ ಉಚಿತ ಲ್ಯಾಪ್ ಟಾಪ್ ಭಾಗ್ಯಕ್ಕೆ ಬಿಜೆಪಿ ಸರ್ಕಾರದಿಂದ ಚಾಲನೆ ಸಿಕ್ಕಿದೆ.2017-18 ನೇ ಸಾಲಿನಿಂದ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದರು.ಆದರೆ ಟೆಂಡರ್ ಸಮಸ್ಯೆ, ರಾಜಕೀಯ ಸಂದರ್ಭಗಳಿಂದ 3 ವರ್ಷಗಳಿಂದ ಲ್ಯಾಪ್ಟಾಪ್ ಗಳ ವಿತರಣೆ ಸಾಧ್ಯವಾಗಿರಲಿಲ್ಲ.ಕಾಂಗ್ರೆಸ್ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಚಾಲನೆ ನೀಡುವ ಮೂಲಕ ಹಳೆಯ ಯೋಜನೆಗೆ ಕಾಯಕಲ್ಪ ನೀಡಿದರು.