ಲೋಕದರ್ಶನ ವರದಿ
ಕೊಪ್ಪಳ 21: ಏತ ನೀರಾವರಿ ಯೋಜನೆಗಾಗಿ ಸತತವಾಗಿ ಶ್ರಮಿಸಿ ಈಗ ಕಾಮಗಾರಿ ಶುರು ಮಾಡಿದ್ದೇವೆ. ಯಲಬುಗರ್ಾ ಕ್ಷೇತ್ರದ ನೀರಾವರಿ ಯೋಜನೆಗಾಗಿ ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಒಟ್ಟು 1,729 ಕೋಟಿ ರುಪಾಯಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಯ ಅಗ್ರಿಮೆಂಟ್ ಆಗಿ ಕೆಲಸ ಪ್ರಾರಂಭವಾಗಲಿದೆ. ಕೃಷ್ಣಾ ಬಿ. ಸ್ಕೀಂ ಜಾರಿ ಕುರಿತಂತೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಧಿಕಾರವಿದ್ದ ವೇಳೆ ಏನೂ ಮಾಡದೆ ಈಗ ಅಧಿಕಾರವಿಲ್ಲದಾಗ ಏನೇನೋ ಮಾತನಾಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಯಲಬುಗರ್ಾ ಶಾಸಕ ಹಾಲಪ್ಪ ಆಚಾರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನೆಡೆಸಿ ಅವರು ಮಾತನಾಡಿ, ಕೊಪ್ಪಳ ಏತ ನೀರಾವರಿ ಯೋಜನೆಗೆ ರಾಯರೆಡ್ಡಿ ಅವರು ಅಡ್ಡಗಲ್ಲು ಹಾಕಿದರು. ಬಳಿಕ ಅವರದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಚುನಾವಣೆ ವೇಳೆ ಕಾಂಗ್ರೆಸ್ ನಾಯಕರು ದೊಡ್ಡದಾಗಿ ಪಾದಯಾತ್ರೆ ಮಾಡಿದರು. ನೀರಾವರಿ ಯೋಜನೆಗೆ ಹಣ ನೀಡಿದ್ದರೆ ನಮ್ಮ ನೀರಾವರಿ ಯೋಜನೆಗಳು ಪೂರ್ಣಗೊಳ್ಳುತ್ತಿದ್ದವು. ಆಗ ಅವರು ನೀರಾವರಿ ಯೋಜನಗೆ ಬೇಕಾದ ಕೆಲಸ ಮಾಡಲಿಲ್ಲ. ಈಗ ಚನಾವಣೆಯಲ್ಲಿ ರಾಯರೆಡ್ಡಿ ಸೋತ ಬಳಿಕ ಈ ವಿಷಯದಲ್ಲಿ ಈಗ ರಾಜಕಾರಣ ಮಾಡುತ್ತಿದ್ದಾರೆ. ಸೋಲಿನ ಹತಾಷೆಯಿಂದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕೊಪ್ಪಳ ಏತ ನೀರಾವರಿ ಯೋಜನೆಗಾಗಿ ಸತತವಾಗಿ ಶ್ರಮಿಸಿ ಈಗ ಕಾಮಗಾರಿ ಶುರು ಮಾಡಿದ್ದೇವೆ. ಒಟ್ಟು 1,729 ಕೋಟಿ ರುಪಾಯಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಯ ಅಗ್ರಿಮೆಂಟ್ ಆಗಿ ಕೆಲಸ ಪ್ರಾರಂಭವಾಗಲಿದೆ. ನೀರಾವರಿ ಯೋಜನೆಗಾಗಿ ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಕೃಷ್ಣ ಬಿ. ಸ್ಕೀಂ ವಿಷಯದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಅವರು ಸಹ ಋಣಾತ್ಮವಾಗಿ ಮಾತನಾಡಬಾರದು ಎಂದರು.
ಇನ್ನು ಕೃಷ್ಣ ಕೊಳ್ಳದ ಕುರಿತು ಆಂಧ್ರ ಮತ್ತು ತೆಲಂಗಾಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಇದನ್ನು ಇತ್ಯರ್ಥ ಮಾಡುವ ಪ್ರಯತ್ನ ಮಾಡುವಂತೆ ಸರ್ಕಾರದ ಮೇಲೆ ಉತ್ತರ ಕರ್ನಾಟಕದ ಶಾಸಕರನ್ನು ಜೊತೆಗೂಡಿಸಿಕೊಂಡು ಒತ್ತಡ ಹೇರುತ್ತೇನೆ. ಪ್ರಸಕ್ತ ಬಜೆಟ್ ಅಧಿವೇಶನದಲ್ಲಿಯೇ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವುದಾಗಿ, ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿರುವ ಯಲಬುಗರ್ಾ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ. ರೈತನ ಮಗನಾಗಿ ಜನ್ಮ ತಾಳಿರುವ ನನಗೆ ರೈತರ ಕಷ್ಟಗಳ ಅರಿವು ನನಗೆ ಇದೆ. ಕ್ಷೇತ್ರ 24 ಕೆರೆಗಳ ಅಭಿವೃದ್ಧಿ ಜೊತೆಗೆ ಕೆರೆ ತುಂಬಿಸುವ ಭರವಸೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರತನ್ ದೇಸಾಯಿ, ಶರಣಪ್ಪ ಬಣ್ಣದಬಾವಿ, ವಿಶ್ವನಾಥ ಮರಿಬಸಪ್ಪನವರ್, ಹಂಚ್ಯಾಳಪ್ಪ ತಳವಾರ, ಈರಪ್ಪ ಕುಡಗುಂಟಿ, ಶಿವಕುಮಾರ ನಾಗಲಾಪುರಮಠ, ಬಸಲಿಂಗಪ್ಪ ಭೂತೆ, ಸಿ.ಎಚ್.ಪೋಲೀಸ್ಪಾಟೀಲ್ ಉಪಸ್ಥಿತರಿದ್ದರು.