ನವದೆಹಲಿ: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಪುಷ್ಪ 2: ದಿ ರೂಲ್‌ನ ಪ್ರಭಾವಶಾಲಿ ಬಾಕ್ಸ್ ಆಫೀಸ್ ಸಾಧನೆಯು ದೇಶಾದ್ಯಂತ ಅಲೆಗಳನ್ನು ಸೃಷ್ಟಿಸುತ್ತಿದೆ. ಮತ್ತು ಚಿತ್ರದ ಯಶಸ್ಸಿನಲ್ಲಿ ಮುಳುಗುತ್ತಿರುವ ಸ್ಟೈಲಿಶ್ ಐಕಾನ್, ಅಲ್ಲು ಅರ್ಜುನ್, ಸ್ವತಃ ಬಿಗ್ ಬಿ, ಅಮಿತಾಬ್ ಬಚ್ಚನ್ ಅವರಿಂದ ಹೆಚ್ಚಿನ ಪ್ರಶಂಸೆಯನ್ನು ಪಡೆದಿದ್ದಾರೆ.
ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಅಲ್ಲು ಅರ್ಜುನ್ ಅವರ ಬಳಿ ಬಾಲಿವುಡ್‌ನಲ್ಲಿ ಯಾವ ನಟ ನಿಮಗೆ ಸ್ಪೂರ್ತಿಯಾಗಿದ್ದಾರೆ ಎನ್ನುವ ಪ್ರಶ್ನೆಗೆ, ನಟ ಅಮಿತಾಬ್ ಬಚ್ಚನ್ ಅವರು ಸಿನಿಮಾ ರಂಗದಲ್ಲಿ ಬೆಳೆಯುತ್ತಿರುವ ನಮ್ಮಂತಹವರ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ ಎಂದು ಹೊಗಳಿದ್ದರು.
ಸೋಮವಾರ ಅಲ್ಲು ಅರ್ಜುನ್ ಅವರು ಮಾತನಾಡಿರುವ ವಿಡಿಯೊದ ತುಣುಕನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅಮಿತಾಬ್ ಬಚ್ಚನ್, ಅರ್ಜುನ್ ಅವರೇ ನಿಮ್ಮ ಮಾತುಗಳಿಂದ ವಿನಮ್ರನಾಗಿದ್ದೇನೆ, ನನ್ನ ಅರ್ಹತೆಗಿಂತ ಹೆಚ್ಚಿನದನ್ನು ನೀಡುತ್ತಿದ್ದೀರಿ, ನಾವೆಲ್ಲರೂ ನಿಮ್ಮ ಕೆಲಸ ಮತ್ತು ಪ್ರತಿಭೆಯ ಅಪಾರ ಅಭಿಮಾನಿಗಳು . ನೀವು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತಿದ್ದೀರಿ .. ನಿಮ್ಮ ನಿರಂತರ ಯಶಸ್ಸಿಗೆ ನನ್ನ ಪ್ರಾರ್ಥನೆ ಮತ್ತು ಶುಭಾಶಯಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.