ಐ.ಎ.ಎಸ್‌. ಬ್ಯಾಚ್ ನ ರುಚಿ ಬಿಂದಲ್ ಅಧಿಕಾರ ಸ್ವೀಕಾರ

I.A.S. Bach's Ruchi Bindal takes over

ಹಾವೇರಿ  24: 2020ನೇ ಐ.ಎ.ಎಸ್‌. ಬ್ಯಾಚ್ ನ  ರುಚಿ ಬಿಂದಲ್ ರವರು ಶುಕ್ರವಾರ ಹಾವೇರಿ ಜಿಲ್ಲಾ ಪಂಚಾಯತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರಿ ಸ್ವೀಕರಿಸಿದರು.ಈ ಹಿಂದಿನ ಸಿಇಓ   ಅಕ್ಷಯ್ ಶ್ರೀಧರ್, ಭಾ.ಆ.ಸೇ., ರವರ ವರ್ಗಾವಣೆಯಿಂದ ತೆರವಾಗಿತ್ತು, ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾದರು. ರುಚಿ ಬಿಂದಲ್ ಅವರು ಈ ಹಿಂದೆ ಸರ್ಕಾರದ ಉಪ ಕಾರ್ಯದರ್ಶಿಗಳು,ವಿದ್ಯುನ್ಮಾನ,ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ,ಬೆಂಗಳೂರು ಕರ್ತವ್ಯ ನಿರ್ವಹಿಸಿರುತ್ತಾರೆ.  

ಕರ್ತವ್ಯಕ್ಕೆ ಹಾಜರಾದ ಮೊದಲ ದಿನವೇ ಜಿಲ್ಲಾ ಪಂಚಾಯತಿಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಭೆ ನಡೆಸಿದ ಅವರು ಕರ್ತವ್ಯ ನಿರ್ವಹಣೆ ಬಗ್ಗೆ ಹಲವು ನಿರ್ದೇಶನಗಳನ್ನು  ನೀಡಿದರು.ಕಛೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಮತ್ತು ಕೆಲಸಗಳ ವಿಳಂಭಕ್ಕೆ ಆಸ್ಪದ ನೀಡದೆ ಎಚ್ಚರಿಕೆ ವಹಿಸಲು ಖಡಕ್ ಸೂಚನೆ ನೀಡಿದರು. ಕಛೇರಿಯ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು,ಗಾಂಧಿಜಿಯವರ ಕನಸಿನಂತೆ ಸ್ವಚ್ಛ ಪರಿಸರದಿಂದ ಸ್ವಚ್ಚ ಆಡಳಿತ ಹಾಗೂ ಸಮಯ ಪರಿಪಾಲನೆಗೆ ಹೆಚ್ಚಿನ ಆದ್ಯತೆ ನೀಡುವುದು ಮುಖ್ಯ ಎಂದು ತಿಳಿಸಿದರು.ಇನ್ನೂ ಕರ್ತವ್ಯಕ್ಕೆ ಸಂಬಂದಿಸಿದಂತೆ, ಸಿಬ್ಬಂದಿಗಳ ಪತ್ರವ್ಯವಹಾರ ಮತ್ತು ಕಡತಗಳ ವಿಳಂಬಕ್ಕೆ ಆಸ್ಪದ ನೀಡದಂತೆ ತ್ವರಿತವಾಗಿ ನಿರ್ವಹಣೆ ಮಾಡುವುದು. ಸಾರ್ವಜನಿಕ ಅಹವಾಲುಗಳನ್ನು ಪ್ರಥಮ ಆದ್ಯತೆ ಮೇರೆಗೆ ಕೈಗತ್ತಿಕೊಳ್ಳುವುದು ಹಾಗೂ ತ್ವರಿತವಾಗಿ ಸ್ಪಂದನೆ ನೀಡುವುದು ಎಲ್ಲರ ಜವಾಬ್ದಾರಿ ಎಂದು ಎಚ್ಚರಿಸಿದರು. 

ಜಿಲ್ಲೆಯಲ್ಲಿ ಉತ್ತಮ ಆಡಳಿತ ಮತ್ತು ಅಭಿವೃದ್ದಿಗಾಗಿ ಪ್ರಥಮ ಆದ್ಯತೆ ನೀಡುವ ಮೂಲಕ ಅಧಿಕಾರ ವಹಿಸಿಕೊಂಡಿದ್ದೇನೆ.ಹಾವೇರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆಡಳಿತ ಮತ್ತು ಅಭಿವೃದ್ದಿ ಕಾಮಗಾರಿಗಳಗೆ ಸಂಬಂಧಿಸಿದಂತೆ ಯಾವುದೇ ವಿಳಂಬವಾಗದಂತೆ ಎಲ್ಲರೂ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ವಿನಂತಿಸಿದರು. 

ನಂತರ ಜಿಲ್ಲಾ ಪಂಚಾಯತಿ ಎಲ್ಲ ಶಾಖೆಗಳಿಗೆ ಭೇಟಿ ನೀಡಿ ಸಿಬ್ಬಂದಿಗಳ ಕುಂದುಕೊರತೆ ಮತ್ತು ಸ್ವಚ್ಛತೆ ಬಗ್ಗೆ ಪರೀಶೀಲಿಸಿದರು. ಅಲ್ಲದೇ ಸ್ವಚ್ಛತೆ ಬಗ್ಗೆ ಕೆಲವೊಂದು ಬದಲಾವಣೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಇದೇ ವೇಳೆ "ಅಕ್ಕ ಕೆಫೆ"ಗೆ ಭೇಟಿ ನೀಡಿದ ಅವರು ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿದರು.ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ತಿಳಿಸಿ, ಮುಂದಿನ ದಿನದಲ್ಲಿ ಜಿಪಂ ಕಡೆಯಿಂದ ನಿರಂತರ ಪ್ರೋತ್ಸಹ ನೀಡುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ,ಸಿಪಿಓ ಹೆಚ್ ವೈ ಮೀಸಿ ಹಾಗೂ ಸಿಬ್ಬಂದಿಗಳು ಉಪಸ್ಥಿತಿ ಇದ್ದರು.