ಗಂಡ ಹೆಂಡತಿ ಜಗಳದಲ್ಲಿ ಬಾವಿಗೆ ಹಾರಿದ ಗಂಡ: ರಕ್ಷಣೆಗೆ ತೆರಳಿದ್ ನಾಲ್ವರು ಸೇರಿ ಐದು ಮಂದಿ ದಾರುಣ ಸಾವು

Husband jumped into well during husband and wife quarrel: Five people died tragically including four

ಹಜಾರಿಬಾಗ್ 02: ಗಂಡ ಹೆಂಡತಿ ನಡುವೆ ಜಗಳ ನಡೆದು ಕೋಪಗೊಂಡ ಗಂಡ ತನ್ನ ಬೈಕನ್ನು ಬಾವಿಗೆ ದೂಡಿದ್ದಾನೆ. ಇದಾದ ಸ್ವಲ್ಪ ಸಮಯದ  ಬಾವಿಗೆ ದೂಡಿದ ಬೈಕನ್ನು ಮೇಲಕ್ಕೆ ತೆಗೆಯಲು ಬಾವಿಗೆ ಇಳಿದಿದ್ದಾನೆ. ಈ ವೇಳೆ ಸುಂದರ್ ಅಸ್ವಸ್ಥಗೊಂಡಿದ್ದಾನೆ ಇದನ್ನು ಕಂಡ ಪತ್ನಿ ರೂಪ ತನ್ನ ಗಂಡನನ್ನು ರಕ್ಷಣೆ ಮಾಡುವಂತೆ ಬೊಬ್ಬೆ ಹೊಡೆದಿದ್ದಾಳೆ ಮಹಿಳೆಯ ಬೊಬ್ಬೆ ಕೇಳಿ ನೆರೆಮನೆಯ ನಾಲ್ವರು ಯುವಕರು  ರಕ್ಷಣೆಗೆ ಮುಂದಾಗಿ ಒಬ್ಬರ ಹಿಂದೆ ಒಬ್ಬರಂತೆ ಬಾವಿಗೆ ಇಳಿದಿದ್ದಾರೆ, ಹೀಗೆ ಬಾವಿಗೆ ಇಳಿದ ಎಲ್ಲರೂ ಅಸ್ವಸ್ಥಗೊಂಡು ಬಾವಿಯಲ್ಲೇ ಪ್ರಾಣ ಬಿಟ್ಟಿದ್ದಾರೆ.


ಒಟ್ಟು ಐದು ಮಂದಿ ಮೃತಪಟ್ಟಿರುವ ದಾರುಣ ಘಟನೆಯೊಂದು ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಸುಂದರ್ ಕರ್ಮಾಲಿ ಹಾಗೂ ಪತ್ನಿ ರೂಪಾ ದೇವಿ ಅದ್ಯಾವುದೋ ವಿಚಾರಕ್ಕೆ ಹೊಸ ವರ್ಷದ ಮೊದಲ ದಿನ ಜಗಳವಾಡಿಕೊಂಡಿದ್ದಾರೆ ಅದ್ಯಾಕೋ ಜಗಳ ವಿಪರೀತ ಹಂತಕ್ಕೆ ತಲುಪಿ ಈ ಘಟನೆ ಸಂಭವಿಸಿದೆ


ಮೃತರನ್ನು ಸುಂದರ್ ಕರ್ಮಾಲಿ, ರಾಹುಲ್ ಕರ್ಮಾಲಿ, ವಿನಯ್ ಕರ್ಮಾಲಿ, ಪಂಕಜ್ ಕರ್ಮಾಲಿ ಮತ್ತು ಸೂರಜ್ ಭುಯಾನ್ ಎಂದು ಗುರುತಿಸಲಾಗಿದೆ.

ಬಳಿಕ ಪೊಲೀಸರು ಅಗ್ನಿಶಾಮಕ ಸಿಬಂದಿ ಜೊತೆ ಘಟನಾ ಸ್ಥಳಕ್ಕೆ ಧಾವಿಸಿ ಬಾವಿಯಲ್ಲಿ ಅಸ್ವಸ್ಥಗೊಂಡ ಐವರನ್ನೂ ಮೇಲಕ್ಕೆ ಎತ್ತಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ಐವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿ ನಡೆಸುತ್ತಿದ್ದಾರೆ.