ನವದೆಹಲಿ, ಮೇ 20,ಅಂಫಾನ್ ಚಂಡಮಾರುತವು ಸ್ವಲ್ಪ ದುರ್ಬಲಗೊಂಡಿದ್ದರೂ, ಇಂದು ಮಧ್ಯಾಹ್ದ ವೇಳೆಗೆ ಒಡಿಶಾ ಮತ್ತು ಬಂಗಾಳದ ತೀರಕ್ಕೆ ಅಪ್ಪಳಿಸುವ ಸಾದ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಪರಿಣಾಮವಾಗಿಎರಡು ರಾಜ್ಯಗಳಲಲ್ಲಿ ಬಾರಿ ಮಳೆ, ಬಿರುಗಾಳಿ ಬೀಸಲಿದೆ ಎಂದು ಹೇಳಲಾಗಿದೆ.ತಗ್ಗು ಪ್ರದೇಶಗಳ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಖ್ಯಸ್ಥ ಎಂ.ಮಹೋಪಾತ್ರ ಅವರ ಪ್ರಕಾರ "1999 ರ ಒಡಿಶಾ ಚಂಡಮಾರುತದ ನಂತರ, ಅಮ್ಫಾನ್ ಅತ್ಯಂತ ತೀವ್ರವಾದ ಮತ್ತು ಮೊದಲ ಸೂಪರ್ ಚಂಡಮಾರುತವಾಗಿದೆ" ಎಂದು ಹೇಳಿದ್ದಾರೆ. ನಾವು ಬಹು-ಅಪಾಯದ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ವಿನಾಶಕಾರಿ ಚಂಡಮಾರುತ ರಾಜ್ಯದಲ್ಲಿ ವ್ಯಾಪಕ ಹಾನಿ ಉಂಟು ಮಾಡುವ ಸಾಧ್ಯತೆಯಿದೆ ಎಂದು ಐಎಂಡಿ ಮುಖ್ಯಸ್ಥರು ನಿರ್ವಹಿಸಿದ್ದಾರೆ.