ಅಂಫಾನ್ ಚಂಡಮಾರುತ: ಮೃತರ ಸಂಖ್ಯೆ 20ಕ್ಕೆ ಏರಿಕೆ

ನವದೆಹಲಿ/ಕೋಲ್ಕತಾ, ಮೇ 21,ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಅಂಫಾನ್ ಚಂಡಮಾರುತ ಸಂಬಂಧಿ ಅವಘಡಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಇನ್ನೂ ಎಂಟು ಮಂದಿ ಸಾವನ್ನಪ್ಪಿದ ಪರಿಣಾಮ ಮೃತರ ಸಂಖ್ಯೆ 20 ಕ್ಕೆ ಏರಿದೆ.  ಮೂಲಗಳ ಪ್ರಕಾರ, ಐದು ಸಾವುಗಳು ಕೋಲ್ಕತ್ತಾದಲ್ಲಿ ಹಾಗೂ ಇನ್ನೂ ಮೂರು ಸಾವುಗಳು ಇತರ ಜಿಲ್ಲೆಗಳಲ್ಲಿ ಸಂಭವಿಸಿದೆ. ಗರಿಷ್ಠ ಗಾಳಿಯ ವೇಗ 165 ಕಿ.ಮೀ ಮತ್ತು ಧಾರಾಕಾರ ಮಳೆಯೊಂದಿಗೆ, ಚಂಡಮಾರುತವು ಸುಂದರಬನ್ ಪ್ರದೇಶ ಮತ್ತು ದಕ್ಷಿಣ ಬಂಗಾಳದ ಆರು ಜಿಲ್ಲೆಗಳು ತತ್ತರಿಸಿವೆ. ಒಡಿಶಾದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.  ಆದರೆ ಪಶ್ಚಿಮ ಬಂಗಾಳದಲ್ಲಿ ಆತಂಕ ಸೃಷ್ಟಿಸಿದ್ದು, ಸಂತ್ರಸ್ತರ ಸ್ಥಳಾಂತರ ಕಾರ್ಯ ಭರದಿಂದ ಸಾಗಿದೆ.