ಮದ್ಯ ನಿಷೇಧಕ್ಕೆ ಒತ್ತಾಯಿಸಿ ರೈಲು ನಿಲ್ದಾಣದಲ್ಲಿ ನೂರಾರು ಮಹಿಳೆಯರಿಂದ ಪ್ರತಿಭಟನೆ

  ಬೆಂಗಳೂರು, ನ 7:    ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನೂರಾರು ಮಹಿಳೆಯರು ಬೆಂಗಳೂರು ಮೆಜಿಸ್ಟಿಕ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.     ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತಾದರೂ, ಅವರಿಗೆ ಅಲ್ಲಿಗೆ ತಲುಪಲು ಪೊಲೀಸರು ಅಡ್ಡಿಪಡಿಸಿದ್ದರಿಂದ ಪೊಲೀಸರು ಮತ್ತು ಮಹಿಳೆಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಅಕ್ರೋಶಗೊಂಡ ಮಹಿಳೆಯರು ರೈಲ್ವೆ ನಿಲ್ದಾಣದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು.     ಪ್ರತಿಭಟನೆ ನಡೆಸುವುದಾಗಿ ತಿಂಗಳ ಮುಂಚೆಯೇ ಪೊಲೀಸರಿಗೆ ಅಜರ್ಿ ಸಲ್ಲಿಸಿ ಅನುಮತಿಯನ್ನು ಪಡೆಯಲಾಗಿದೆ. ಆದರೆ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಪೊಲೀಸರು ಮೆರವಣಿಗೆಗೆ ಅವಕಾಶ ನೀಡುತ್ತಿಲ್ಲ. ಈ ವರ್ತನೆ ಖಂಡನೀಯ' ಎಂದು ಮುಖಂಡರು ಆರೋಪಿಸಿದರು. .    ರಾಜ್ಯದಲ್ಲಿ ಮದ್ಯಮಾರಾಟ ನಿಷೇಧ ಮಾಡಬೇಕು. ಹಂತಹಂತವಾಗಿ ಮಾಡುವುದಾದರೆ ಮಾಹಿತಿ ನೀಡಬೇಕು. ಪ್ರತಿಗ್ರಾಮದಲ್ಲಿ ಸಮಿತಿ ರಚಿಸಬೇಕು ಅದರಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಿರಬೇಕು. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವ, ಅಕ್ರಮ ಮದ್ಯ ಮಾರಾಟ ತಡೆಯುವ ಅಧಿಕಾರ ಸಮಿತಿಗೆ ಕೊಡಬೇಕು ಎಂದು ಒತ್ತಾಯಿಸಿದರು.