ಯಾಂತ್ರಿಕತೆಗಿಂತ ಮಾನವ ಶ್ರಮ ಅಗತ್ಯ : ಪರನಗೌಡರ

ಬಾಗಲಕೋಟೆ01: ವಿವಿಧ ಕ್ಷೇತ್ರಗಳಲ್ಲಿ ಬದಲಾದ ಯಾಂತ್ರಿಕತೆಗಿಂತ ಮಾನವನ ಶ್ರಮ ಅಗತ್ಯವಾಗಿದೆ ಎಂದು ತಾಲೂಕಾ ಪಂಚಾಯತ ಅಧ್ಯಕ್ಷರಾದ ಚನ್ನನಗೌಡ ಪರನಗೌಡರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್ನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾಮರ್ಿಕ ಇಲಾಖೆ ಹಾಗೂ ಕನರ್ಾಟಕ ರಾಜ್ಯ ಅಸಂಘಟಿತ ಕಾಮರ್ಿಕರ ಸಾಮಾಜಿಕ ಭದ್ರತಾ ಮಂಡಳಿ ಆಶ್ರಯದಲ್ಲಿ ಹಮ್ಮಿಕೊಂಡ ಕಾಮರ್ಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಾಯಕದಲ್ಲಿ ಯಾವುದು ಸಣ್ಣದು ದೊಡ್ಡದು ಎಂಬುದಿರುವದಿಲ್ಲ. ಬುದ್ದಿ ಜೀವಿಗಳಿಗಿಂತ ಶ್ರಮ ಜೀವಿಗಳಿಗೂ ಹೆಚ್ಚಿನ ಬೇಡಿಕೆ ಇದೆ. ಸರಕಾರ ಅಸಂಘಟಿಕ ಕಾಮರ್ಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿದೆ. ಸೌಲಭ್ಯಗಳ ಮಾಹಿತಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಕಾಮರ್ಿಕರು ಸಂಘಟರಾಗುವ ಮೂಲಕ ಅಸಾಯಕರಿಗೆ ಸೌಲಭ್ಯಗಳ ಮಾಹಿತಿ ನೀಡಿ ಅವರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದರು. 

ಮುಖ್ಯ ಅತಿಥಿ ಸ್ಥಾನ ಅಲಂಕರಿಸಿದ ಜಿಲ್ಲಾ ಪಂಚಾಯತಿಯ ಉಪಕಾರ್ಯದಶರ್ಿ ಎ.ಜಿ.ತೋಟದ ಮಾತನಾಡಿ ಸರಕಾರ ಹುಟ್ಟಿದಾಗಿನಿಂದ ಹಾಗೂ ಸಾವಿನ ನಂತರವು ಅಸಂಘಟಿತ ಕಾಮರ್ಿಕರಿಗೆ ಅನೇಕ ಸೌಲಭ್ಯಗಳನ್ನು ಸರಕಾರ ರೂಪಿಸಿದೆ. ಇವೆಲ್ಲವುಗಳ ಸದುಪಯೋಗವನ್ನು ಕಾಮರ್ಿಕರು ಪಡೆದು ಆಥರ್ಿಕ ನೆಲೆಯ ಮೇಲೆ ನಿಲ್ಲುಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ ಸರಕಾರ ನೀಡುವ ಪ್ರತಿಯೊಂದು ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ವಿವಿಧ ವಲಯದ ಕಾಮರ್ಿಕರಿಗೆ ಸಂಘಟನೆಯ ಕೊರತೆ ಇದೆ. ಕಾಮರ್ಿಕರು ತಾವು ಪಡೆಯುವ ಸೌಲಭ್ಯಗಳ ಬಗ್ಗೆ ಇತರರಿಗೆ ತಿಳಿಸುವ ಕಾರ್ಯವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಮರ್ಿಕ ಅಧಿಕಾರಿ ಬಿ.ಆರ್.ಜಾದವ, ಕಾಮರ್ಿಕ ನಿರೀಕ್ಷಕ ಅಶೋಕ ಒಡೆಯರ, ಬಾಲ ಕಾಮರ್ಿಕ ಯೋಜನಾ ಸಂಸ್ಥೆಯ ಯೋಜನಾ ನಿದರ್ೇಶಕ ಸುಧಾರಕ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶ್ರಮ ಸಮ್ಮಾನ ಪ್ರಶಸ್ತಿ ವಿತರಣೆ

13 ವರ್ಗಗಳ ಅಸಂಘಟಿತ ಕಾಮರ್ಿಕರಲ್ಲಿ ವಿಶೇಷ ಸಾಧನೆ ಮಾಡಿರುವ ಪ್ರತಿ ವರ್ಗಕ್ಕೆ 3 ರಂತೆ ಪ್ರಥಮ 15 ಸಾವಿರ ರೂ.ಗಳ ಮೌಲ್ಯದ ಚಿನ್ನದ ಪದಕ, ದ್ವಿತೀಯ 10 ಸಾವಿರ ರೂ.ಗಳ ಮೌಲ್ಯದ ಬೆಳ್ಳಿಯ ಪದಕ ಹಾಗೂ ತೃತೀಯ 8 ಸಾವಿರ ರೂ.ಗಳ ಮೌಲ್ಯದ ಬೆಳ್ಳಿಯ ಪದಕ ಹಾಗೂ ಪ್ರಶಂಸನಾ ಪತ್ರ ನೀಡಿಲಾಯಿತು. ಹಾಗೂ ಅದೇ ರೀತಿ 13 ವರ್ಗಗಳಲ್ಲಿ ಮೂರು ಚಕ್ರ ವಾಹನ ಚಾಲಕ ವರ್ಗದಲ್ಲಿ 2, ಮಂಡಕ್ಕಿ ವರ್ಗದಲ್ಲಿ 3, ಚಿಂದಿ ಆಯುವವರ ವರ್ಗದಲ್ಲಿ 2 ಸೇರಿ ಉಳಿದ 10 ವರ್ಗದ ಅಸಂಘಟಿತ ಕಾಮರ್ಿಕರಿಗೆ ಪ್ರತಿ ವರ್ಗಕ್ಕೆ ತಲಾ 8 ರಂತೆ ಒಂದು ಸಾವಿರ ರೂ.ಗಳ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕ್ಷೌರಿಕ ವರ್ಗದಲ್ಲಿ ಸದಾಶಿವ ಕಟ್ಟಿಮನಿ (ಪ್ರಥಮ), ಸಂಗಪ್ಪ ಹಡಪದ (ದ್ವಿತೀಯ), ಅಶೋಕ ಹಳ್ಳಿ (ತೃತೀಯ), ಗೃಹ ಕಾಮರ್ಿಕ ವರ್ಗದಲ್ಲಿ ಕಸ್ತೂರಿಬಾಯಿ ಆದಾಪೂರ (ಪ್ರಥಮ), ಜಾಹಿದಾ ತಾಂಬೋಳಿ (ದ್ವಿತೀಯ), ನಾಗವ್ವ ಬಾಗಿ (ತೃತೀಯ), ಟೇಲರ್ ವರ್ಗದಲ್ಲಿ ಪಂಚಾಕ್ಷರಿ ಕುಂಬಾರ (ಪ್ರಥಮ), ಕೃಷ್ಣ ಟೊಣಪೆ (ದ್ವಿತೀಯ), ಅನ್ವರ ಬೀಳಗಿ (ತೃತೀಯ), ಮೆಕ್ಯಾನಿಕ್ ವರ್ಗದಲ್ಲಿ ಬಸವರಾಜ ಜೀರಗಾಳ (ಪ್ರಥಮ), ನೂರಮಹಮ್ಮದ ಸಿದ್ದಾಪೂರ (ದ್ವಿತೀಯ), ಸಾಯಿನಾಥ ಸಾಲಮಂಠಪಿ (ತೃತೀಯ), ಪತ್ತಾರಿಕೆ ವರ್ಗದ ಕಿರಣ ಚೊಳಚಗುಡ್ಡ (ಪ್ರಥಮ), ಮಳಿಯಪ್ಪ ಪತ್ತಾರ (ದ್ವಿತೀಯ), ವೆಂಕಟೇಶ ಟಂಕಸಾಲಿ (ತೃತೀಯ), ಕುಂಬಾರಿಕೆ ವರ್ಗದಲ್ಲಿ ಲಕ್ಷ್ಮಣ ಕುಂಬಾರ (ಪ್ರಥಮ), ಅನುಸೂಯಾ ಹಳ್ಳಿಮನಿ (ದ್ವಿತೀಯ), ಪರಶುರಾಮ ಕುಂಬಾರ (ತೃತೀಯ)

ಮೂರು ಚಕ್ರ ವಾಹನ ವರ್ಗದಲ್ಲಿ ಅಬ್ದುಲ್ಸಾಬ ಮುಲ್ಲಾ (ಪ್ರಥಮ), ಚಂದ್ರಶೇಖರ ಬೆಣ್ಣಿಹಾಳ (ದ್ವಿತೀಯ), ಹನಮಂತಪ್ಪ ಚುಕ್ಕಾಡಿ (ತೃತೀಯ), ನಾಲ್ಕು ಚಕ್ರ ವಾಹನ ವರ್ಗದಲ್ಲಿ ಸಂಜು ಅಣ್ಣಾಸಾಬ ಸಿತೋಳೆ (ಪ್ರಥಮ), ಮೋಹನ ಚಿಂಚಖಂಡಿ (ದ್ವಿತೀಯ), ಕಾಶಿನಾಥ ಗೋವಿಂದಪೂರಠ (ತೃತೀಯ), ಅಗಸರು (ದೋಬಿ) ವರ್ಗದಲ್ಲಿ ಬಸವರಾಜ ಪರೀಟ (ಪ್ರಥಮ), ಯಮನಪ್ಪ ಅಗಸರ (ದ್ವಿತೀಯ), ವೆಂಕಟೇಶ ಹಣಮಂತ ಪರೀಟ (ತೃತೀಯ), ಮಂಡಕ್ಕಿ ವರ್ಗದಲ್ಲಿ ಗದ್ದೆಪ್ಪ ತಪ್ಪಲದಡ್ಡಿ (ಪ್ರಥಮ), ನೀಲಮ್ಮ ತಪ್ಪಲದಡ್ಡಿ(ದ್ವಿತೀಯ), ಕೊಂಡಾರೆಡ್ಡಿ ಗಜ್ಜಲ (ತೃತೀಯ), ಹಮಾಲರ ವರ್ಗದಲ್ಲಿ ಮೈನೂದಿನ ಮುಜಾವರ (ಪ್ರಥಮ), ಸಗರೆಪ್ಪ ಡೊಳ್ಳಿನ (ದ್ವಿತೀಯ), ಜಂಟಿಂಗಪ್ಪ ಚಿಗರಿ (ತೃತೀಯ) ಹಾಗೂ ಚಿಂದಿ ಆಯುವವರ ವರ್ಗದಲ್ಲಿ ಹುಸೇನ ಕೊರವರ (ಪ್ರಥಮ), ರಾಮಪ್ಪ ಕೊರವರ (ದ್ವಿತೀಯ), ದುರ್ಗಪ್ಪ ಕೋರವಾರ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.