ಮಾನವ ಜನ್ಮ ದೊಡ್ಡದು: ಸಂಗಮೇಶ
Human birth is great: Sangamesha
ತಾಳಿಕೋಟೆ 09: ಭಗವಂತ ಸೃಷ್ಟಿಸಿರುವ ಈ ಜಗತ್ತಿನಲ್ಲಿ ಮಾನವ ಜನ್ಮ ಬಹುದೊಡ್ಡದು 84 ಲಕ್ಷ ಜೀವರಾಶಿಗಳಲ್ಲಿ ನಮಗೆ ಮಾತ್ರ ಮಾತು, ಬುದ್ದಿ, ತಿಳಿವಳಿಕೆ ನೀಡಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರವಚನಕಾರ ಅಂಬಳನೂರ ಸಂಗಮನಾಥ ದೇವರು ಹೇಳಿದರು.
ಅವರು ಪಟ್ಟಣದ ಶ್ರೀ ಖಾಸ್ಕತ ಮಹಾಶಿವಯೋಗಿಗಳವರ 129ನೆ ಹಾಗೂ ವಿರಕ್ತ ಮಹಾಸ್ವಾಮಿಗಳ 11ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶ್ರೀ ಖಾಸ್ಸತೇಶ್ವರ ಮಠದಲ್ಲಿ ಭಾನುವಾರ ಪ್ರಾರಂಭವಾದ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ನಿಡಿ ಮಾತನಾಡಿದರು. ಖಾಸ್ಗತೇಶ್ವರ ಮಠದ ಪೀಠಾಧಿಪತಿ ಬಾಲ ಶಿವಯೋಗಿ ಸಿದ್ದಲಿಂಗ ದೇವರ ಅಧ್ಯಕ್ಷತೆ ವಹಿಸಿದ್ದರು. ಗವಾಯಿಗಳಾಗಿ ಮಹೇಶಕುಮಾರ ಭಂಟನೂರ, ಬಸನಗೌಡ ಬಿರಾದಾರ ಚೋಕಾವಿ ಕಾರ್ಯನಿರ್ವಹಿಸುತ್ತಿದ್ದಾರೆ ಸೆ. 12ರವರೆಗೆ ಪ್ರತಿ ಸಂಜೆ 7ರಿಂದ 8.30 ಗಂಟೆಯವರೆಗೆ ಈ ಆಧ್ಯಾತ್ಮಿಕ ಪ್ರವಚನ ನಡೆಯುವುದು. ಸೆ.12ರಂದು ನಸುಕಿನ ಜಾವ 5 ಗಂಟೆಗೆ ಉಭಯಶ್ರೀಗಳ ಗದ್ದುಗೆಗೆ ಮಹಾರುದ್ರಾಭಿಷೇಕ ನಡೆಯಲಿದ್ದು, ಮಹಾಪ್ರಸಾದ ಜರುಗುವುದು. ಅಂದು ಸಂಜೆ 7 ಗಂಟೆಗೆ ಹರ-ಗುರು ಚರಮೂರ್ತಿಗಳಿಂದ ಧರ್ಮಸಭೆ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 