ಹುಕ್ಕೇರಿ ಲಕ್ಷ್ಮೀದೇವಿ ಜಾತ್ರೆ.ಸಂಭ್ರಮದ ಹೊನ್ನಾಟ; ಬಂಡಾರದಲ್ಲಿ ಮಿಂದೆದ್ದ ಹುಕ್ಕೇರಿ ಜನತೆ
Hukkeri Lakshmi Devi Fair. A festive dance; Hukkeri people gathered at the port
ಹುಕ್ಕೇರಿ 12 : ನಗರದ ಶ್ರೀ ಲಕ್ಷೀ ದೇವಿ ಜಾತ್ರೆಯ ಮೊದಲ ದಿನ ರಾತ್ರಿ 8 ಘಂಟೆಯಿಂದ ಜಗಮಗಿಸುವ ವಿದ್ಯುತ್ ಅಲಂಕಾರದಲ್ಲಿ ಭಂಡಾರದ ಹೋನ್ನಾಟ ಮೂಲಕ ಹಕ್ಕುದಾರರ ಮನೆಗೆ ತೇರಳಿ ಉಡಿ ತುಂಬಿಸಿಕೊಂಡು ಬೆಳಗಿನ ಜಾವ ತುರಬಂದಿಯಲ್ಲಿ ರಥದಲ್ಲಿ ಆಸಿನಳಾದಳು.ಗ್ರಾಮ ದೇವತೆ ಜಾತ್ರೆಯಲ್ಲಿ ಸಾವಿರಾರು ಜನ ಭಕ್ತರು ಆಗಮಿಸಿ ದೇವಿಯ ಹೋನ್ನಾಟದಲ್ಲಿ ಭಾಗಿಯಾಗಿ ಭಂಡಾರದ ಹೋಳೆ ಹರಿಸಿದರು, ಯುವಕರು ಇಂಗಳೋಬಾನನ್ನು ಹೋತ್ತಿಕೊಂಡು ಓಡುವ ದೃಶ್ಯ ರೋಚಕವಾಗಿತ್ತು.ಲಕ್ಷ್ಮಿ ದೇವಿ ಸಂಚರಿಸುವ ಮಾರ್ಗವನ್ನು ಸ್ಥಳಿಯ ಪುರಸಭೆ ಅಧಿಕಾರಿಗಳು ರಸ್ತೆ ರೀಪೇರಿ, ವಿದ್ಯುತ್ ವ್ಯವಸ್ಥೆ, ಗಟಾರ ಸ್ವಚ್ಚತೆ ಮತ್ತು ಮೂಲ ಭೂತ ಸೌಲಭ್ಯಗಳನ್ನು ಪೋರೈಸಿ ಯಾವದೇ ರೀತಿ ತೊಂದರೆಯಾಗದಂತೆ ಮುನ್ನೇಚ್ಚರಿಕಾ ಕ್ರಮಗಳನ್ನು ಕೈಕೊಂಡಿದ್ದರು. ಬೆಳಗಿನ ಜಾವ ತುರಬಂದಿಯಲ್ಲಿ ಲಕ್ಷ್ಮಿ ದೇವಿಯು ರಥದಲ್ಲಿ ಆಸಿನರಾದಳು.ಇಡಿ ರಾತ್ರಿ ಭಂಡಾರದ ಹೋನ್ನಾಟ ಮೂಲಕ ಹಕ್ಕುದಾರರಾದ ರಾಜೇಶ ಕುಲಕರ್ಣಿ, ವಿನೋದ ಮುತಾಲಿಕ, ರಾಜು ಕೋಟಬಾಗಿ, ರವೀಂದ್ರ ನಾಯಿಕ, ಶಿವರುದ್ರಾ್ಪ ಶೇಟ್ಟಿ, ಚಂದ್ರಶೇಖರ ಮಲಕಾಯಿ, ಚಿದಾನಂದ ಬಸ್ತವಾಡೆ, ಸಿದಗೌಡಾ ಪಾಟೀಲ, ರುದ್ರಗೌಡಾ ಪಾಟೀಲ, ಕಲ್ಲೊಪಂತ ಕುಲಕರ್ಣಿ, ಗೀರಿಶ ಕುಲಕರ್ಣಿ, ಬಸಗೌಡಾ ಪಾಟೀಲ, ಶಿವಾನಂದ ಮುದಕನ್ನವರ, ಭೀಮಾನಂದ ಮುದಕನ್ನವರ ರವರ ಮನೆಗಳಿಗೆ ತೇರಳಿದಾಗ ಬಾಗಿನ ಅರ್ಿಸಿ ದೇವಿ ಆಶಿರ್ವಾದ ಪಡೆದುಕೊಂಡರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 