ಬಾಗಲಕೋಟೆ: ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸಾವಿರಾರು ರೋಗಿಗಳಿಗೆ ಆರೋಗ್ಯ ಸೇವೆ ಕಲ್ಪಿಸುತ್ತಿರುವ ಜಿಲ್ಲಾ ಆಸ್ಪತ್ರೆಗೆ ಹೋಮಯೋಪಥಿ ಔಷಧಿಗೂ ಸಹ ಭಾರಿ ಬೇಡಿಕೆ ಇದೆ.
ಸಾರ್ವಜನಿಕರಲ್ಲಿ ಹೋಮಿಯೋಪಥಿ ಬಗ್ಗೆ ಹೆಚ್ಚಿನ ಅರಿವು ಇಲ್ಲವಾದರೂ ದಿನಂಪ್ರತಿ ಕನಿಷ್ಠ 20 ರಿಂದ 30 ಜನರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಜಿಲ್ಲಾ ಆಸ್ಪತ್ರೆಯ ಹೋಮಿಯೋಪಥಿ ವಿಭಾಗಕ್ಕೆ ಭೇಟಿ ನೀಡಿ ಔಷಧಿ ಪಡೆಯುತ್ತಿದ್ದಾರೆ. ಥೈರಾಯಿಡ್, ಲಿವರ್, ಕೂದಲು ಉದುರುವಿಕೆ, ಬಿಳಿಸೆರಗು, ಮುಟ್ಟು ದೋಷ, ಅಲಜರ್ಿ, ಸೈನೆಟಿಸ್, ಆಸಿಡಿಟಿ, ಮೈಗ್ರೇನ್, ಕೀಲು ನೋವು ಸಮಸ್ಯೆಗಳನ್ನು ಹೊತ್ತ ರೋಗಿಗಳಿಗೆ ಹೋಮಿಯೋಪಥಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುತ್ತಾರೆ ಡಾ.ಕವಿತಾ ಅಮಾಸಿ.
ಕೆಲ ತಾಯಂದಿರಿಗೂ ತಮ್ಮ ಮಕ್ಕಳಿಗೆ ಕೇವಲ ಹೋಮಿಯೋಪಥಿ ಔಷಧಿಯನ್ನೇ ನೀಡುತ್ತಾರೆ. ಹಲವಾರು ಹೆಣ್ಣುಮಕ್ಕಳಿಗೆ ಬಿಳಿಸೆರಗು ಮುಟ್ಟುದೋಷ ಸಮಸ್ಯೆಗಳನ್ನು ಎಲುವು ಕಳು ನೋವುಗಳಿಂದ ಇಲ್ಲಿ ಪರಿಹಾರ ಕಂಡುಕೊಂಡಿದ್ದಾರೆ.
ರಸಾಯನಿಕ ಸಸ್ಯ ಹಾಗೂ ಪ್ರಾಣಿ ಮೂಲಕ ಔಷಧಿಯಾಗಿರುವ ಹೋಮಿಯೋಪಥಿಗೆ ಇತ್ತೀಚೆಗೆ ಭಾರಿ ಬೇಡಿಕೆ ಕಂಡುಬರುತ್ತಿದ್ದು, ತಿಂಗಳಿಗೆ 500-600 ರೋಗಿಗಳು ತಮ್ಮಿಂದ ಔಷಧೋಪಚಾರ ಪಡೆಯುತ್ತಾರೆನ್ನುತ್ತಾರೆ ಡಾ.ಕವಿತಾ.
ಹೋಮಿಯೋಪಥಿಯಿಂದ ಯಾವುದೇ ರೀತಿಯ ದುಷ್ಪರಿಣಾಮವಿರುವದಿಲ್ಲ. ಇಲ್ಲಿ ನಂಬಿಕೆಯೇ ಮುಖ್ಯವಾಗಿದ್ದು, ಪ್ರತಿ ವೈದ್ಯರು ತಮ್ಮದೇ ಆದ ಅನುಭವದ ಮೇಲೆ ಔಷಧಿಯ ಬಗ್ಗೆ ಹಾಗೂ ಪ್ರಮಾಣ ನಿರ್ಧರಿಸಿ ಉಚಪರಿಸುತ್ತಾರೆ.