ಜು.21ರಂದು ರೈತರ ಬೃಹತ್ ಸಮಾವೇಶ

ಲೋಕದರ್ಶನವರದಿ

ಹಾವೇರಿ೧೬ : ರೈತರ ಸಂಪೂರ್ಣ ಸಾಲ ಮನ್ನಾ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ, ರಾಜ್ಯ ಸಮಗ್ರ ನೀರಾವರಿ ಯೋಜನೆಗಳನ್ನು ಜಾರಿಗಾಗಿ ಒತ್ತಾಯಿಸಿ  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ  ವತಿಯಿಂದ ಜುಲೈ 21ರಂದು ಧಾರವಾಡ ಕಲಾಭವನದಲ್ಲಿ ರಾಜ್ಯ ಮಟ್ಟದ ರೈತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ  ಮಾಲತೇಶ ಪೂಜಾರ ತಿಳಿಸಿದರು.

           ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನರಗುಂದ ನವಲಗುಂದ 39ನೇ ವರ್ಷದ ಹುತಾತ್ಮ ದಿನಾಚರಣೆ ಅಂಗವಾಗಿ ನರಗುಂದ - ನವಲಗುಂದ ರೈತರ ಮೇಲೆ ಅಮಾನುಷ್ಯ ದೌರ್ಜನ್ಯದ ವಿರುದ್ಧ ಸಿಡಿದೆದ್ದ ರೈತ ಸಮುದಾಯ ಸಂಘಟಿಕರಾಗಿ ನಿರಂತರ ಹೋರಾಡಲು  ರೈತರನ್ನು ಹುರುದುಂಭಿಸಬೇಕಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರ ಬೇಡಿಕೆ ಈಡೇರಿಸಿದೇ  ಅನ್ಯಾಯ ಮಾಡುತ್ತಿವೆ ಎಂದು ಎಚ್ಚರಿಸಿದರು.  ರೈತರ ಸಾಲ ಮನ್ನಾ ಮಾಡಿದ್ದೇವೆ ಎನ್ನುವ ಮುಖ್ಯಮಂತ್ರಿಗಳು ಇದುವರೆಗೂ ಯಾವ ರೈತರ ಸಾಲ ಮನ್ನಾವಾಗಿಲ್ಲ. ಬ್ಯಾಂಕ್ಗಳಿಂದ ರೈತರಿಗೆ ನಿತ್ಯ ನೋಟಿಸ್ಗಳು ಬರುತ್ತಿವೆ.

 ಇದರಿಂದ ರೈತರು ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಸರಕಾರವಾಗಿದೆ. ರೈತರ ಬೃಹತ್ ಸಮಾವೇಶಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ  ರೈತ ಮುಖಂಡರು ಭಾಗವಹಿಸಲಿದ್ದು, ಈ ಸಮಾವೇಶಕ್ಕೆ ಸುಮಾರು 10 ಸಾವಿರ ಜನರು ಸೇರಲಿದ್ದು, ಜಿಲ್ಲೆಯಿಂದ 2 ಸಾವಿರ  ರೈತರು ಸಮಾವೇಶದಲ್ಲಿ  ಪಾಲ್ಗೊಳ್ಲಲಿದ್ದಾರೆ ಮಾಲತೇಶ ಪೂಜಾರ ಎಂದರು.

             ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ರಾಜ್ಯಾದ್ಯಂತ ಬರಗಾಲ ಚಾಯೆ ಆವರಿಸಿದ್ದು, ರೈತರು, ಕೂಲಿಕಾರ್ಮಿಕರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸದ್ಯ ರಾಜಕಾರಣಿಗಳು  ತಮ್ಮ ಸ್ವಾರ್ಥಕ್ಕಾಗಿ  ಹಾಗೂ  ತಮ್ಮ ಸ್ಥಾನ ಮಾನ ಉಳಿಸಿಕೊಳ್ಳುಲು  ಮುಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು.                ಈ ಸಂದರ್ಭದಲ್ಲಿ  ಸಂಘದ ರಾಜ್ಯ ಸದಸ್ಯ ಆಸೀಂ ಜಗಳೂರ, ದೀಪಕ್ ಘಂಟಿಸಿದ್ದಪ್ಪನವರ, ನೂರಅಹ್ಮದ್ ಮುಲ್ಲಾ.ರುದ್ರಪ್ಪ ಬಳಿಗಾರ, ಬಸವರಾಜ ತಳವಾರ ಅನೇಕರಿದ್ದರು.