ಗೃಹಿಣಿಯರು ಉದ್ಯೋಗಗಳನ್ನು ಸೃಷ್ಟಿಸಬಹುದು: ಅಕ್ಷಯಾ ಗೋಖಲೆ

Housewives can create jobs: Akshaya Gokhale

ಗೃಹಿಣಿಯರು ಉದ್ಯೋಗಗಳನ್ನು ಸೃಷ್ಟಿಸಬಹುದು: ಅಕ್ಷಯಾ ಗೋಖಲೆ 

ಚಿಕ್ಕೋಡಿ 29: ಮನೆಯಲ್ಲಿರುವ ಗೃಹಿಣಿಯರು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಬಹುದು. ಮನೆಯಲ್ಲಿ ಕುಳಿತು ಹಪ್ಪಳ ತಯಾರಿಕೆ ರೊಟ್ಟಿ ತಯಾರಿಕೆ ಹಾಗೂ ಬ್ಯೂಟಿ ಪಾರ್ಲರ್ ನಂತಹ ಕೌಶಲ್ಯಗಳನ್ನು ಕಲಿತು ಸಣ್ಣ ಸಣ್ಣ ಉದ್ಯೋಗಗಳನ್ನು ಪ್ರಾರಂಭಿಸುವುದರ ಮೂಲಕ ತಮ್ಮ ಜೀವನವನ್ನು ಸ್ವಾವಲಂಬಿಯಾಗಿ ರೂಪಿಸಿಕೊಳ್ಳಬೇಕೆಂದು ಕಾರ್ಕಳ ಖ್ಯಾತ ಉಪನ್ಯಾಸಕಿ ಅಕ್ಷಯಾ ಗೋಖಲೆ ಹೇಳಿದರು. 

ಇಲ್ಲಿನ ಶಿರಡಿ ಸಾಯಿಬಾಬಾ ಮಂದಿರದ 18ನೇ ವಾರ್ಷಿಕೋತ್ಸವದ ನಿಮಿತ್ಯ ಮಹಿಳಾ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.   ಗ್ರಹಿಣಿಗೆ ಕ್ಷಣ ಮತ್ತು ಉದ್ಯೋಗಾವಕಾಶ ಕುರಿತು ಮಾತನಾಡುತ್ತಾ ಇಂತಹ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುತ್ತಾ ದೊಡ್ಡ ದೊಡ್ಡ ಕಂಪನಿಗಳನ್ನು ತೆಗೆದಿರುವ ಸುಧಾ ಮೂರ್ತಿ ಇಂದು ಮಹಿಳೆಯರಿಗೆ ದಾರೀದೀಪವಾಗಿದ್ದಾರೆ ಎಂದರು. 

 ಜೀವನದಲ್ಲಿ ಅವಕಾಶಗಳು ತಾನಾಗಿಯೇ ಬರುವುದಿಲ್ಲ ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಅದರ ಜೊತೆಗೆ ತಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಮನೆಯ ಮೊದಲ ಪಾಠಶಾಲೆ ತಾಯಿಯ ಮೊದಲ ಗುರು ಎಂಬಂತೆ ತಾಯಿ ತಮ್ಮ ಮಕ್ಕಳಿಗೆ ಸಂಸ್ಕಾರ ಹೇಳುವುದು ಕೂಡ ಒಂದು ಮುಖ್ಯವಾದ ಕೆಲಸವಾಗಿದೆ. ತಾಯಿ ಒಂದು ಮಗುವಿಗೆ ಒಳ್ಳೆಯ ಸಂಸ್ಕಾರವನ್ನು ನೀಡಿದರೆ ಮಾತ್ರ ಸಮಾಜದಲ್ಲಿ ಒಬ್ಬ ಒಳ್ಳೆಯ ಪ್ರಜೆ ಆಗಲು ಸಾಧ್ಯ. ಭಾರತ ದೇಶವು ಜಗತ್ತಿಗೆ ಪ್ರಸಿದ್ಧವಾದದ್ದು ಸಂಸ್ಕಾರ ಮತ್ತು ಸಂಸ್ಕೃತಿಗೆ ಎಂಬುದನ್ನು ಬಹು ಮಾರ್ಮಿಕವಾಗಿ ತಿಳಿಸಿದರು. 

 ಚಿಕ್ಕೋಡಿಯ  ಅಜಿತ್ ಮಾಳಿ ಮಾತನಾಡಿ  ಇಂದಿನ ಯುವ ಪೀಳಿಗೆ  ಅತಿ ಹೆಚ್ಚು ಮೊಬೈಲ್‌ಗಳನ್ನು ಬಳಸುವುದರ ಮೂಲಕ ತಮ್ಮ ಡಾಟಾಗಳನ್ನು ಆನ್ಲೈನ್ ವಾಚಕರಿಗೆ ನೀಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅತಿ ಹೆಚ್ಚು ಮೋಸಗಾರಿಕೆ ಆನ್ಲೈನ್‌ನಲ್ಲಿಯೇ ನಡೆಯುತ್ತಿದೆ, ಅದಕ್ಕಾಗಿ ಎಲ್ಲರೂ ಆನ್ಲೈನ್ ವಾಚಕರಿಂದ ಎಚ್ಚರ  ಇರಬೇಕೆಂದು ತಿಳಿಸಿದರು.  

ಉಪನ್ಯಾಸಕಿ ಅಶ್ವಿನಿ ಗೌಳಿ ಮಾತನಾಡಿದರು. ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷೆ ವೀಣಾ ಜಗದೀಶ ಕವಟಗಿಮಠ ವಹಿಸಿದ್ದರು.