ಹೊಸಪೇಟೆ: ವಸ್ತು ಪ್ರದರ್ಶನ ಕಾರ್ಯಕ್ರಮ

ಲೋಕದರ್ಶನ ವರದಿ

ಹೊಸಪೇಟೆ 28: ಸ್ಥಳೀಯ ಪಟೇಲ್ ನಗರದ ವಿನಾಯಕ ಎಜ್ಯುಕೇಷನ್ ಸೊಸೈಟಿಯ ನ್ಯಾಷನಲ್ ಇಂಗ್ಲೀಷ್ ಪ್ರಿ ಪ್ರೈಮರಿ ಶಾಲೆಯಲ್ಲಿ ಗುರುವಾರ ವಸ್ತು ಪ್ರದರ್ಶನ ನಡೆಯಿತು.

ಸಿ.ಆರ್.ಪಿ. ಅಶೋಕ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ವಸ್ತು ಪ್ರದರ್ಶನ ಪೂರಕವಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಕಲೆಯೂ ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಲಿದೆ ಎಂದರು.

ವಿನಾಯಕ ಎಜ್ಯುಕೇಷನ್ ಸೊಸೈಟಿಯ ಅಧ್ಯಕ್ಷ ಕಾಕುಬಾಳು ಸೀತಾರಾಮ ಶೆಟ್ಟಿ ಮಾತನಾಡಿ, ಪ್ರತಿ ಪಾಲಕರು ಮಕ್ಕಳಿನ ಕೌಶಲ ಕಲೆ ಅರಿತು ಪ್ರೋತ್ಸಾಹಿಸಬೇಕು ಎಂದರು.

ಸೊಸೈಟಿ ಉಪಾಧ್ಯಕ್ಷ ಕಾಕುಬಾಳು ಕೃಷ್ಣ ಮೂತರ್ಿ,  ಸೊಸೈಟಿಯ ಖಜಾಂಚಿ ನಫೀಜಾ ಫರೂಕ್, ಆಡಳಿತ ಮಂಡಳಿ ಸದಸ್ಯ ಕಾಕುಬಾಳು ಶ್ರೀನಿವಾಸ, ಮುಖ್ಯ ಶಿಕ್ಷಕಿ ರುಬಿನಾ ಬಾನು, ಶಿಕ್ಷಕಿಯರಾದ ಶಬನಾ ಬಾನು, ಪದ್ಮಜಾ, ಮೆಹಮೂದ, ಶಶಿಕಲಾ, ಜಲಜಾಕ್ಷಿ, ಉಮಾ, ರೂಪಾ ಇತರರಿದ್ದರು. 

ಇಂಗ್ಲೀಷ್, ಕನ್ನಡ, ಗಣಿತ ಮತ್ತು ವಿಜ್ಞಾನ ವಿಷಯ ಕುರಿತು ಮಕ್ಕಳಿಂದ ವಸ್ತು ಪ್ರದರ್ಶನ ಜರುಗಿತು. ನಾನಾ ವೇಷಭೂಷಣಗಳಿಂದ ಮಕ್ಕಳು ಗಮನಸೆಳೆದರು.