ಲೋಕದರ್ಶನ ವರದಿ
ಹೊಸಪೇಟೆ 12: ಕಲಬುರಗಿಯ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜಿಸಲಾಗಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ವಲಯ ಮಟ್ಟದ ಇಂಜಿನಿಯರಿಂಗ್ ಕಾಲೇಜುಗಳ ವಾಲಿಬಾಲ್ ಟೂರ್ನಮೆಂಟ್ ನಲ್ಲಿ ಹೊಸಪೇಟೆಯ ಪ್ರೌಢದೇವರಾಯ ಮಹಾವಿದ್ಯಾಲಯದ ವಾಲಿಬಾಲ್ ತಂಡವು ರನ್ನಸರ್್ ಅಪ್ (ದ್ವಿತೀಯ ಸ್ಥಾನ) ಪಡೆಯಿತು. ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಬಸವರಾಜ್, ಪ್ರಾಂಶುಪಾಲ ಡಾ ಎಸ್ ಎಂ ಶಶಿಧರ್, ದೈಹಿಕನಿರ್ದೇಶಕ ಕೆ ಎಸ್ ಮಂಜುನಾಥ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಟೂರ್ನಮೆಂಟ್ ನಲ್ಲಿ ವಿಜಯಪುರದ ಸಿಕ್ಯಾಬ್ ಇಂಜಿನಿಯರಿಂಗ್ ಕಾಲೇಜು ಪ್ರಥಮ ಸ್ಥಾನ ಪಡೆಯಿತು ಬೀದರ್ ನ ಜಿ ಎನ್ ಡಿ ಇಂಜಿನಿಯರಿಂಗ್ ಕಾಲೇಜು ಹಾಗೂ ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜುಗಳು ಕ್ರಮವಾಗಿ ತೃತೀಯ ಮತ್ತು ನಾಲ್ಕನೇ ಸ್ಥಾನ ಗಳಿಸಿದವು.
ವಾಲಿಬಾಲ್ ತಂಡದವಿದ್ಯಾರ್ಥಿಳೊಂದಿಗೆ ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಬಸವರಾಜ್, ಪ್ರಾಂಶುಪಾಲ ಡಾ ಎಸ್ ಎಂ ಶಶಿಧರ್, ದೈಹಿಕ ನಿದರ್ೇಶಕ ಕೆ ಎಸ್ ಮಂಜುನಾಥ್.